• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ 65 ವರ್ಷಗಳಲ್ಲೇ ಈ ಬಾರಿ ಎರಡನೆಯ ಅತಿ ಕನಿಷ್ಠ ಮಳೆ

|

ನವದೆಹಲಿ, ಜೂನ್ 3: ಇಡೀ ದೇಶದ ಜನತೆಯೇ ಮುಂಗಾರು ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ದೇಶದ ಕೃಷಿ ಕ್ಷೇತ್ರದ ಬೆನ್ನೆಲುಬಾಗಿರುವ ಮುಂಗಾರು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ ಮುಂಗಾರು ಪೂರ್ವ ಮಳೆಯ ಕೊರತೆ ದಾಖಲೆ ಬರೆದಿದೆ.

ಮೂರು ತಿಂಗಳಲ್ಲಿ ಈ ವರ್ಷ ಕೇವಲ 99 ಮಿ.ಮೀನಷ್ಟು ಮಾತ್ರವೇ ಮುಂಗಾರುಪೂರ್ವ ಮಳೆಯಾಗಿದೆ. ಇದರಿಂದಾಗಿ ಕೃಷಿಯಲ್ಲಿ ತೊಡಗಿರುವವರಿಗೆ ಭಾರಿ ನಿರಾಸೆಯಾಗಿದೆ. ಈ ಬಾರಿಯ ಮುಂಗಾರಾದರೂ ಉತ್ತಮ ಇಳುವರಿ ತರಬಲ್ಲದೆ ಎಂದು ಕಾದು ಕುಳಿತಿದ್ದಾರೆ.

ಮಳೆಯ ಆರ್ಭಟ: ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಹಾನಿ?

ಇಷ್ಟೊಂದು ಮಳೆಯ ಕೊರತೆ ಎದುರಾಗಿರುವುದು 65 ವರ್ಷಗಳಲ್ಲಿ ಇದು ಎರಡನೇಬಾರಿಯಾಗಿದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿದೆ. 1954ರ ಮಾರ್ಚ್, ಏಪ್ರಿಲ್ ಹಾಗೂ ಮೇ ಅವಧಿಯಲ್ಲಿ 93.9.ಮಿ.ಮೀ ನಷ್ಟು ಮಳೆಯಾಗಿತ್ತು.

ಅನಂತರ 2009ರಲ್ಲಿ 99 ಮಿ.ಮೀ ಹಾಗೂ 2012ರಲ್ಲಿ 90.5 ಮಿ.ಮೀನಷ್ಟು ಮಳೆಯಾಗಿತ್ತು. 2009ರ ದಾಖಲೆಯನ್ನು ಸರಿಗಟ್ಟಿದೆ. ಎಂದು ಅಂಕಿ ಅಂಶಗಳು ಹೇಳುತ್ತವೆ. ಕರಾವಳಿ ಕರ್ನಾಟಕ, ಕರ್ನಾಟಕದ ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ, ತೆಲಂಘಾಣ, ಆಂಧ್ರಪ್ರದೇಶದ ರಾಯಲ್ ಸೀಮೆ ಮಹಾರಾಷ್ಟ್ರದ ಮಧ್ಯಭಾಗ, ವದರ್ಭ, ಕೊಂಕಣ-ಗೋವಾ ಪ್ರದೇಶ, ಗುಜರಾತ್ ಮತ್ತಿತರೆ ಭಾಗಗಳಲ್ಲಿ ಭಾರಿ ಮಳೆಯ ಕೊರತೆ ಉಂಟಾಗಿದೆ.

ಡ್ಯಾಂಗಳಲ್ಲಿ ಶೇ.20ರಷ್ಟು ನೀರು, ಹತ್ತು ವರ್ಷದಲ್ಲೇ ಕನಿಷ್ಠ: ಭೀಕರ ಬರಗಾಲದಿಂದಾಗಿ ದೇಶದ ಜಲಾಶಯಗಳು ಬರಿದಾಗಿವೆ ದೇಶದ 91 ಪ್ರಮುಖ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯ ದ ಪೈಕಿ ಶೇ.20ರಷ್ಟು ಮಾತ್ರವೇ ನೀರಿನ ಸಂಗ್ರಹವಿದೆ.

ಇದು ಕಳೆದ 10 ವರ್ಷಗಳ ಸರಾಸರಿಗಿಂತ ಕಡಿಮೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. 2019ರ ಮೇ 30್ಕೆ ಅನುಗುಣವಾಗಿ 91 ಜಲಾಶಯಗಳಲ್ಲಿ 31.65 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಇತ್ತು. ಇದು ಸಂಗ್ರಹ ಸಾಮರ್ಥ್ಯದ 20ರಷ್ಟು ಮಾತ್ರವಿದೆ.

English summary
In India 2019 records second Low pre monsoon rains in 65 years. The Country recorded only 99mm of Pre monsoon rains this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X