ಸೆಪ್ಟೆಂಬರ್ 30ರ ನಂತರವೂ 2000 ನೋಟು ಚಾಲ್ತಿ, ಭಯಪಡುವ ಅಗತ್ಯವಿಲ್ಲ: ಆರ್‌ಬಿಐ ಗವರ್ನರ್
ಭಾರತೀಯ ರಿಸರ್ವ್ ಬ್ಯಾಂಕ್ (RBI) 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳಗಾದರೆ ಸಾಕು ಜನ ಬ್ಯಾಂಕುಗಗಳಿಗೆ ಭೇಟಿ ನೀಡಿ ಕಿಲೋ ಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು 2000 ರೂಪಾಯಿ ಮುಖಬೆಲೆಯ ನೋಟು ಬದಲಾಯಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಈ ನಡುವೆ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಹಿಂದಿರುಗಿಸಲು ಅಥವಾ ಬದಲಾಯಿಸಿಕೊಳ್ಳಲು ಯಾರೂ ಆತುರಪಡಬಾರದು ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸೆಪ್ಟೆಂಬರ್ 30 ರ ನಂತರವೂ ನೋಟುಗಳು ಮಾನ್ಯವಾಗಿರುತ್ತವೆ ಎಂದು ಅವರು ಭರವಸೆ ನೀಡಿದರು. ಸಾರ್ವಜನಿಕರಿಗೆ ನಾಲ್ಕು ತಿಂಗಳ ಕಾಲಾವಕಾಶ ಇರುವುದರಿಂದ ತಕ್ಷಣ ಬ್ಯಾಂಕ್‌ಗಳಿಗೆ ಮುಗಿಬೀಳುವ ಅಗತ್ಯವಿಲ್ಲ ಎಂದಿದ್ದಾರೆ.

ಕೇಂದ್ರೀಯ ಬ್ಯಾಂಕ್ ಈ ಗಡುವನ್ನು ನೀಡಿದೆ. ಆದ್ದರಿಂದ ಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. 2000 ರೂಪಾಯಿ ನೋಟುಗಳನ್ನು ಹಿಂತಿರುಗಿಸುವುದು ಮುಖ್ಯ ಆದರೆ ಅವಸರ ಬೇಡ. ಅದಕ್ಕಿರುವ ಕಾಲಾವಕಾಶವನ್ನು ಬಳಸಿಕೊಳ್ಳಿ, ಅಲ್ಲಿವರೆಗೂ ನೋಟು ಚಲಾವಣೆಯಲ್ಲಿರುತ್ತದೆ ಎಂದು ದಾಸ್ ಹೇಳಿದರು.
ಆರ್‌ಬಿಐ ಗವರ್ನರ್ ಪ್ರಕಾರ, 2000 ನೋಟುಗಳ ವಿನಿಮಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಎಲ್ಲಾ ಸ್ಥಳಗಳಲ್ಲಿ ಕರೆನ್ಸಿಯ ಸಾಕಷ್ಟು ದಾಸ್ತಾನು ಈಗಾಗಲೇ ಲಭ್ಯವಿದೆ.
ಕಪ್ಪುಹಣದ ಮೇಲೆ ನಿಗಾ ಇಡುವುದು ಹೇಗೆ?
ಅದೇ ಸಮಯದಲ್ಲಿ, 2000 ನೋಟುಗಳನ್ನು ಬದಲಾಯಿಸಲು ಯಾವುದೇ ಐಡಿ ಅಗತ್ಯವಿಲ್ಲ ಎಂದು ಎಸ್‌ಬಿಐ ಒಂದು ದಿನದ ಹಿಂದೆ ಹೇಳಿತ್ತು. ಹೀಗಿರುವಾಗ ಕಪ್ಪುಹಣದ ಮೇಲೆ ನಿಗಾ ಇಡುವುದು ಹೇಗೆ? ಇದಕ್ಕೆ ದಾಸ್ ಅವರು, ಬ್ಯಾಂಕ್‌ಗಳು ತಮ್ಮ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಅನುಸರಿಸಲು ನಾವು ಕೇಳಿಕೊಂಡಿದ್ದೇವೆ ಎಂದು ಹೇಳಿದರು.

ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವ ಹಣವನ್ನು ಆರ್‌ಬಿಐ ಪರಿಶೀಲಿಸುವುದಿಲ್ಲ, ಈ ಕೆಲಸವನ್ನು ಆದಾಯ ತೆರಿಗೆ ಇಲಾಖೆ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಬ್ಯಾಂಕ್‌ಗಳು ವರದಿ ಮಾಡುವ ವ್ಯವಸ್ಥೆಯನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಅದನ್ನು ನೋಡಿಕೊಳ್ಳಲಾಗುವುದು ಎಂದರು.
2000 ನೋಟ್ ಚಲಾವಣೆಯಿಂದ ಹಿಂಪಡೆದಿರುವುದರಿಂದಾದ ಸಮಸ್ಯೆಗಳು-
ದೇಶದಾದ್ಯಂತ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿದೆ. ಇದರಿಂದ ಹಲವಾರು ಸಮಸ್ಯೆಗಳನ್ನು ಜನ ಎದುರಿಸುವಂತಾಗಿದೆ. ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ಸೂಚಿಸಿದೆ. ಆದರೆ ಈ ಹಣವು ಮಾನ್ಯವಾಗಿಲ್ಲ ಎಂದು ಇದರ ಅರ್ಥವಲ್ಲ. ಈ ಹಣ ಮಾನ್ಯವಾಗಿದೆ. ನಗದು ಇದ್ದವರು ಎಂದಿನಂತೆ ಅಂಗಡಿಗಳಲ್ಲಿ ಬೇಕಾದ ಸಾಮಾನುಗಳನ್ನು ಖರೀದಿಸಬಹುದು. ಆದರೆ ದೇಶದಾದ್ಯಂತ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ನಿರ್ಧರಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ ಸೇರಿದಂತೆ ಹಲವು ರಾಜ್ಯಗಳ ಸಾರಿಗೆ ಇಲಾಖೆಗಳು 2000 ರೂಪಾಯಿ ನೋಟುಗಳನ್ನು ಖರೀದಿಸಬಾರದು ಎಂದು ಘೋಷಿಸಿದೆ.
ಇನ್ನೂ ಕೇಂದ್ರ ಸರ್ಕಾರ 2000 ರೂಪಾಯಿ ನೋಟುಗಳನ್ನು ಹಿಂಪಡೆದುಕೊಳ್ಳುವುದಾಗಿ ಘೋಷಿಸಿದಾಗ ಜನರು ನೋಟುಗಳನ್ನು ಬದಲಾಯಿಸಿಕೊಳ್ಳಲು ಚಿನ್ನಾಭರಣ ಅಂಗಡಿಗಳಿಗೆ ಮುಗಿಬಿದ್ದರು, ಆದರೆ ಆಭರಣ ಅಂಗಡಿಗಳು ಅವುಗಳನ್ನು ಖರೀದಿಸಲು ನಿರಾಕರಿಸಿ ಶಾಕ್ ನೀಡಿವೆ.
ನವೆಂಬರ್ 2016 ರಲ್ಲಿ ಕಪ್ಪುಹಣ ನಿರ್ಮೂಲನೆಗಾಗಿ ನೋಟು ಅಮಾನ್ಯೀಕರಣದ ಅಡಿಯಲ್ಲಿ 500 ಮತ್ತು 1000 ರೂ ನೋಟುಗಳನ್ನು ಅಮಾನ್ಯವೆಂದು ಘೋಷಿಸಲಾಯಿತು. ಈ ವೇಳೆ ಬ್ಯಾಂಕ್‌ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂಬ ಘೋಷಣೆಯ ನಂತರ ಜನರು ಬ್ಯಾಂಕ್ ಗೇಟ್‌ಗಳ ಬಳಿ ಸುಡು ಬಿಸಿಲು ಎನ್ನದೇ ಕಾದು ಕಾದು ಸುಸ್ತಾದರು. ಈ ದಿನವನ್ನು ವಿರೋಧ ಪಕ್ಷಗಳು ಕರಾಳ ದಿನ ಎಂದು ಕರೆಯುತ್ತವೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕಳೆದ ಶುಕ್ರವಾರ 2000 ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ.
ಸೆಪ್ಟೆಂಬರ್ 30 ರ ನಂತರ 2000 ರೂಪಾಯಿ ನೋಟುಗಳು ಅಮಾನ್ಯವಾಗಲಿವೆ ಎಂದು ಘೋಷಿಸಲಾಗಿದೆ. ಹೀಗಿರುವಾಗ ಸಾಮಾನ್ಯವಾಗಿ 500 ಮತ್ತು 2000 ರೂ.ಗೆ ಚಿಲ್ಲರೆ ಮಾರಾಟ ಮಾಡುವ ಪೆಟ್ರೋಲ್ ಸ್ಟಾಕ್‌ಗಳಲ್ಲಿಯೂ 2000 ರೂ.ಗಳನ್ನು ಖರೀದಿಸುವುದಿಲ್ಲ ಎಂದು ಬೋರ್ಡ್ ಹಾಕಿದ್ದಾರೆ.












Click it and Unblock the Notifications