ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ ದೇಶಾದ್ಯಂತ 2ಸಾವಿರ ಎಟಿಎಂಗೆ ಬೀಗ!

By Nayana
|
Google Oneindia Kannada News

ಬೆಂಗಳೂರು, ಮೇ 09: ದೇಶದಲ್ಲಿ ಒಂದು ವರ್ಷದಿಂದೀಚೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಎಟಿಎಂಗಳು ಬಂದ್ ಆಗಿವೆ. ಇದು ಆರ್‌ಬಿಐ ದಾಖಲೆಗಳಲ್ಲಿ ಸ್ಪಷ್ಟವಾಗಿದೆ.

ಮೇ 2017ರಿಂದ ಮೇ 2018ರ ಕಳೆದ ಹತ್ತು ತಿಂಗಳ ಅವಧಿಯಲ್ಲಿ ದೇಶದ ನಾನಾ ಭಾಗಗಳಲ್ಲಿ 2 ಸಾವಿರಕ್ಕೂ ಹೆಚ್ಚು ಎಟಿಎಂಗಳು ಬಂದ್ ಆಗಿದೆ. ಕಳೆದ ವರ್ಷ ಮೇನಲ್ಲಿ ಬ್ಯಾಂಕ್ ಶಾಖೆಗಳ ಆವರಣದಲ್ಲಿ 1,10,116 ಎಟಿಎಂಗಳಿದ್ದರೆ, ಅವುಗಳ ಸಂಖ್ಯೆ 2017ರ ಫೆಬ್ರವರಿ ಸಮಯದಲ್ಲಿ 1,07,630 ಕ್ಕೆ ಇಳಿಕೆಯಾಗಿದೆ.

ಬ್ಯಾಂಕ್ ಆಫ್ ಇಂಡಿಯಾದ ನೂರಾರು ATMs ಬಂದ್. ಯಾಕೆ ?ಬ್ಯಾಂಕ್ ಆಫ್ ಇಂಡಿಯಾದ ನೂರಾರು ATMs ಬಂದ್. ಯಾಕೆ ?

ಆದರೆ, ಬ್ಯಾಂಕ್‌ಗಳು ಶಾಖೆಗಳ ಹೊರಗೆ, ನಾನಾ ಪ್ರದೇಶಗಳಲ್ಲಿ ಸ್ಥಾಪಿಸುವ ಎಟಿಎಂಗಳ ಸಂಖ್ಯೆ ಕಳೆದ ಮೇನಲ್ಲಿ 98,360 ಇದ್ದರೆ, ಅದು 2018ರ ಫೆಬ್ರವರಿಯಲ್ಲಿ 99,029ಕ್ಕೆ ಏರಿಕೆಯಾಗಿದೆ. ಆನ್‌ಲೈನ್‌ ಎಟಿಎಂಗಳ ಸಂಖ್ಯೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಳೆದ 10 ತಿಂಗಳಲ್ಲಿ 29,150ರಿಂದ 29,505ಕ್ಕೆ ಇಳಿಕೆ ಮಾಡಿದೆ.

2000 ATMs shutdown in last one year

ಆದರೆ, ಆಫ್‌ಸೈಟ್ ಎಟಿಎಂಗಳ ಸಂಖ್ಯೆಯನ್ನು 29,917 ರಿಂಣದ 32,680ಕ್ಕೆ ಏರಿಕೆ ಮಾಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 655 ಆನ್‌ಲೈನ್‌ ಮತ್ತು 467 ಆಫ್‌ಸೈಟ್‌ ಎಟಿಎಂಗಳನ್ನು ಬಂದ್ ಮಾಡಿದೆ ಎಂದು ಆರ್‌ಬಿಐ ಅಂಕಿಅಂಶಗಳು ಹೇಳುತ್ತವೆ.

ಎಟಿಎಂಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಹೆಚ್ಚಿನ ವೆಚ್ಚವಾಗುತ್ತಿದ್ದು, ಅವುಗಳ ಸಂಖ್ಯೆ ಕಡಿಮೆ ಮಾಡಲು ಬ್ಯಾಂಕ್‌ಗಳು ಚಿಂತನೆ ನಡೆಸುತ್ತಿವೆ ಎಂದು ಅಖಿಲಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಿ.ಟಿ. ಫ್ರಾಂಕೊ ಹೇಳಿದ್ದಾರೆ.

English summary
Burden on the banks over maintenance cost of the ATMs has caused shutdown around 2,000 ATMs in the country between May 2017 to February 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X