Vande Bharat Express: 30ನೇ ವಂದೇ ಭಾರತ್ ರೈಲಿನ ಬೋಗಿಗಳ ಸಂಖ್ಯೆ 20ಕ್ಕೆ ಏರಿಸಲು ನಿರ್ಧಾರ
ದೇಶದಲ್ಲಿ ವಂದೇ ಭಾರತ್ ರೈಲಿಗೆ ಪ್ರಯಾಣಿಕರಿಂದ ವ್ಯಾಪಕ ಸ್ಪಂದನೆ ಸಿಕ್ಕಿದೆ. ಆದಷ್ಟು ಶೀಘ್ರವೇ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಲಭ್ಯವಾಗಲಿದೆ. ಈ ಮಧ್ಯ ರಾಷ್ಟ್ರೀಯ ಸಾರಿಗೆ ಸಂಸ್ಥೆಯು ದೇಶದ 30 ನೇ ವಂದೇ ಭಾರತ್ ರೈಲಿನ ಕೋಚ್ ಸಂಯೋಜನೆ ಪರಿಷ್ಕರಣೆ ಮಾಡಿದ್ದು, ಅದರ ಕೋರ್ಚ್‌ಗಳನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಪ್ಲಾನ್ ಮಾಡಿದೆ.
ದೇಶದಲ್ಲಿ 30 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್ ಅನ್ನು 2023ರಲ್ಲಿ ಸೆಪ್ಟೆಂಬರ್ 24ರಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ್ದರು. ಪ್ರಯಾಣಿಕರಿಗೆ ಅನುಕೂಲ ಆಗುವ, ಆರಾಮದಾಯಕ ಪ್ರಯಾಣ ನೀಡುವ ನಿಟ್ಟಿನಲ್ಲಿ, ಆಸನ ಸಾಮರ್ಥ್ಯ ಹೆಚ್ಚಿಸಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು 20ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈಗಾಗಲೇ ರೈಲಿನ ಕೋಚ್ ಪರಿಷ್ಕರಣೆ ಆಗಿದೆ.

30 ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾಸರಗೋಡು ಮತ್ತು ತಿರುವನಂತಪುರಂ ನಡುವೆ ಸೇವೆ ನೀಡುತ್ತಿದೆ. ಕಳೆದ ವರ್ಷ ಅದರ ಮಾರ್ಗವನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಿಸಲಾಯಿತು. ಈ ರೈಲನ್ನು ದಕ್ಷಿಣ ರೈಲ್ವೆ (SR) ವಲಯವು ನಿರ್ವಹಿಸುತ್ತಿದೆ. ಆರಂಭದಲ್ಲಿ 08 ಬೋಗಿಗಳ ಜೊತೆ ಆರಂಭಿಸಿತು. ನಂತರ ಇದೇ 2025ರ ಮೇ ನಲ್ಲಿ ಮತ್ತೆ 08 ಬೋಗಿಗಳು ಸೇರಿ ಒಟ್ಟು 16ಕ್ಕೆ ಹೆಚ್ಚಾಯಿತು.
ಒಟ್ಟು ಎಷ್ಟು ಸೀಟುಗಳು ಹೆಚ್ಚಾಗುತ್ತವೆ?
ಸದ್ಯ ಈ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ - ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ 14 ಚೇರ್ ಕಾರ್ ಕೋಚ್, 2 ಎಕ್ಸಿಕ್ಯುಟಿವ್ ಕ್ಲಾಸ್ ಕೋಚ್ ಸೇರಿ ಒಟ್ಟು 16 ಕೋಚ್‌ಗಳು ಇವೆ. ಮುಂದಿನ ದಿನಗಳಲ್ಲಿ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ರೈಲು 20 ಕೋಚ್‌ಗಳೊಂದಿಗೆ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಇದರಿಂದಾಗಿ ಹಾಲಿ 1128 ಸೀಟುಗಳಿಗೆ ಹೆಚ್ಚುವರಿಯಾಗಿ 312 ಸೀಟು ಸೇರ್ಪಡೆ (ಒಟ್ಟು 1440 ಸೀಟು ಆಗಲಿವೆ) ಆಗುತ್ತವೆ.
ಸದ್ಯ ಭಾರತದಲ್ಲಿ 150 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಲಭ್ಯ ಇದೆ. ಐಶಾರಾಮಿ ವ್ಯವಸ್ಥೆ, ಕವಚ ತಂತ್ರಜ್ಞಾನ ಹೊಂದಿವೆ. ಶೀಘ್ರವೇ ಸ್ಲೀಪರ್ ರೈಲು ಕಾರ್ಯಾಚರಣೆ ಮಾಡಲಿದೆ. ಅಲ್ಲದೇ ಕೆಲವೆಡೆ ಐದು ವಂದೇ ಭಾರತ್ ರೈಲುಗಳ ವೇಗ ಹೆಚ್ಚಿಸಲು ನಿರ್ಧರಿಸಲಾಗಿದೆ.












Click it and Unblock the Notifications