ಜಮ್ಮು ಕಾಶ್ಮೀರ: ಇಬ್ಬರು ಉಗ್ರರನ್ನು ಬಲಿಹಾಕಿದ ಭಾರತೀಯ ಸೇನೆ
ಟ್ರಾಲ್(ಜಮ್ಮು-ಕಾಶ್ಮೀರ), ಜುಲೈ 15: ಜಮ್ಮು ಕಾಶ್ಮೀರದ ಟ್ರಾಲ್ ಪ್ರದೇಶದ ಸಟೋರಾ ಎಂಬಲ್ಲಿ ಇಬ್ಬರು ಭಯೋತ್ಪಾದಕರನ್ನು ಬಲಿಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಹತರಾದ ಇಬ್ಬರು ಭಯೋತ್ಪಾದಕರು ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವರೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಪ್ರದೇಶದಲ್ಲಿ ಮತ್ತಷ್ಟು ಭಯೋತ್ಪಾದಕರು ಅಡಗಿ ಕುಳಿತಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರಿದಿದೆ.

ನಿನ್ನೆ(ಜು.14) ತಾನೇ ಇಲ್ಲಿನ ಬಂಡಿಪೊರ ಪ್ರದೇಶದ ಸಾಂಬಲ್ ಎಂಬಲ್ಲಿ ಭಯೋತ್ಪಾದಕನೊಬ್ಬನನ್ನು ಭಾರತೀಯ ಸೇನೆ ಮತ್ತು ಕಾಶ್ಮೀರಿ ಪೊಲೀಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿತ್ತು.












Click it and Unblock the Notifications