ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, 6 ವರ್ಷದ ಮಗು, ಸೈನಿಕನ ಹತ್ಯೆ
ಜಮ್ಮು ಮತ್ತು ಕಾಶ್ಮೀರ, ಜುಲೈ 17: ಪಾಕಿಸ್ತಾನ ಮತ್ತೆ ರಜೌರಿ ಪ್ರದೇಶದ ಮಂಜಕೋಟೆ ಹಾಗೂ ಪೂಂಚ್ ನ ಬಲಕೋಟೆಯಲ್ಲಿ ಕದನ ವಿರಾಮ ಉಲಂಘಿಸಿದ್ದು ಇಬ್ಬರನ್ನು ಬಲಿ ಪಡೆದಿದೆ.
ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಗೆ ಸೇರಿದ ಸೈನಿಕ ನಾಯಕ್ ಮುದ್ದಾಸರ್ ಅಹ್ಮದ್ ರಜೌರಿಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು 6 ವರ್ಷದ ಮಗು ಸಾಜಿದಾ ಕಫೀಲ್ ಪೂಂಚ್ ನಲ್ಲಿ ಗುಂಡಿನ ದಾಳಿಗೆ ಅಸುನೀಗಿದ್ದಾರೆ.

ಇನ್ನು ಕದನ ವಿರಾಮ ಉಲ್ಲಂಘನೆಯಲ್ಲಿ ಇಬ್ಬರು ನಾಗರೀಕರು ಗಂಭೀರ ಗಾಯಗೊಂಡಿದ್ದಾರೆ. ರಾಜೌರಿ ಪ್ರದೇಶದ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದ್ದು, ಜನರನ್ನು ಸ್ಥಳಾಂತರ ಮಾಡಲಾಗಿದೆ.
#WATCH Ceasefire violation by Pakistan along the Line of Control in Rajouri's Manjakote sector (Jammu & Kashmir) pic.twitter.com/nBeko8KCeZ
— ANI (@ANI_news) July 17, 2017
ಇದೇ ಸಂದರ್ಭದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒ ಅಧಿಕಾರಿಗಳ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಭಾರತೀಯ ಸೇನೆಯ ಡಿಜಿಎಂಒ 'ಎಲ್ಲಾ ಅಪ್ರಚೋದಿತ ಗುಂಡಿನ ದಾಳಿಗಳನ್ನು ಪಾಕಿಸ್ತಾನವೇ ನಡೆಸುತ್ತದೆ. ಈ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತಕ್ಕೆ ಹಕ್ಕಿದೆ. ಆ ಪ್ರಕಾರ ಭಾರತ ಉತ್ತರ ನೀಡುತ್ತದೆ,' ಎಂದು ಪಾಕಿಸ್ತಾನದ ಅಧಿಕಾರಿಗಳಿಗೆ ಹೇಳಿದ್ದಾರೆ.












Click it and Unblock the Notifications