ಗುಂಡಿನ ಚಕಮಕಿ: ಇಬ್ಬರು ಭಾರತೀಯ ಯೋಧರು ಹುತಾತ್ಮ
ಕಾಶ್ಮೀರದಲ್ಲಿ ನುಸುಳುಕೋರರು ಹಾಗೂ ಭಾರತೀಯ ಸೇನೆ ನಡುವೆ ನಡೆದ ಗುಂಡಿನ ಚಕಮಕಿ. ಘಟನೆಯಲ್ಲಿ ಇಬ್ಬರು ಭಾರತೀಯ ಯೋಧರು ಸಾವು.
ನವದೆಹಲಿ, ಜೂನ್ 22: ಭಾರತ- ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭಾರತದೊಳಕ್ಕೆ ನುಸುಳುತ್ತಿದ್ದ ಇಬ್ಬರು ನುಸುಳುಕೋರರ ವಿರುದ್ಧ ನಡೆದ ಕಾದಾಟದಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಳಿಯಿರುವ ಗಡಿಯ ಹತ್ತಿರ ಗುರುವಾರ (ಜೂನ್ 22) ಮಧ್ಯಾಹ್ನ ಸುಮಾರು 2 ಗಂಟೆಗೆ ಈ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಒಬ್ಬ ನುಸುಳುಕೋರ ಅಸುನೀಗಿದ್ದು, ಮತ್ತೊಬ್ಬ ನುಸುಳುಕೋರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಪೂಂಚ್ ನಲ್ಲಿರುವ ಭಾರತೀಯ ಸೇನೆಯ ಚೆಕ್ ಪೋಸ್ಟ್ ಇದೆ. ಆದರೆ, ಇಲ್ಲಿಂದ ಸುಮಾರು 200 ಮೀ. ದೂರದಲ್ಲೇ ಈ ಗುಂಡಿನ ಚಕಮಕಿ ನಡೆದಿದೆ.

ಕಾಶ್ಮೀರದಲ್ಲಿ ಹೀಗೆ ನುಸುಳುಕೋರರು ಹಾಗೂ ಸೈನಿಕರ ನಡುವೆ ಗುಂಡಿನ ಚಕಮಕಿಗಳು ಪದೇ ಪದೇ ನಡೆಯುತ್ತಿವೆ. ಪೂಂಚ್ ಜಿಲ್ಲೆಯಲ್ಲಿ ಈ ರೀತಿಯ ನುಸುಳುಕೋರರೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿರುವುದು ಈ ವರ್ಷದಲ್ಲಿ ಇದು ಮೂರನೇ ಬಾರಿ ಎಂದು ಭಾರತೀಯ ಸೇನೆ ಹೇಳಿದೆ.












Click it and Unblock the Notifications