ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡದ ಒಂದು ದಿನದ ಸಿಎಂ ಆದ 19 ವರ್ಷದ 'ನಾಯಕಿ'

|
Google Oneindia Kannada News

ಹರಿದ್ವಾರ,ಜನವರಿ 24: ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಪ್ರಯುಕ್ತ ಉತ್ತರಾಖಂಡದಲ್ಲಿ 19 ವರ್ಷದ ಯುವತಿಗೆ ಒಂದು ದಿನದ ಸಿಎಂ ಆಗಲು ಅವಕಾಶ ನೀಡಲಾಗಿತ್ತು.

19 ವರ್ಷದ ಸೃಷ್ಠಿ ಗೋಸ್ವಾಮಿಗೆ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಅವಕಾಶ ಲಭಿಸಿದೆ. ಅವರು ಭಾನುವಾರ ನಡೆದ ವಿಶೇಷ ಮಕ್ಕಳ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಮಹಿಳಾ ಸಬಲೀಕರಣ ಸಂದೇಶ ರವಾನಿಸುವ ಸಲುವಾಗಿ ಇಂಥ ವಿನೂತನ ಪ್ರುಯತ್ನಕ್ಕೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಒಪ್ಪಿಗೆ ನೀಡಿದ್ದಾರೆ. ಹೆಣ್ಣು ಮಕ್ಕಳ ದಿನದಂದು ಓರ್ವ ಬಾಲಕಿಯನ್ನು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತಿರುವುದು ಇದೇ ಮೊದಲು.

19 Year Old Shrishti Goswami Is Uttarakhand CM For A Day

ಬಾಲಕಿಯರ ಶಿಕ್ಷಣ ಹಾಗೂ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ಸೃಷ್ಠಿ, ಈ ಬಗ್ಗೆ ಕೆಲಸ ಮಾಡುವ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ.

ಈ ಹಿಂದೆ 2018ರಲ್ಲಿ ಉತ್ತರಾಖಂಡ್‌ ಮಕ್ಕಳ ಸದನದ ಶಾಸಕಿಯಾಗಿಯೂ ಸೃಷ್ಠಿ ಆಯ್ಕೆಯಾಗಿದ್ದರು. 2019ರಲ್ಲಿ ಥಾಯ್ಲಂಡ್‌ನಲ್ಲಿ ನಡೆದ ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ನಾಯಕತ್ವ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.

ಕೃಷಿ ವಿಜ್ಞಾನ ವಿದ್ಯಾರ್ಥಿಯಾಗಿರುವ ಸೃಷ್ಠಿ ಹರಿದ್ವಾರ ಜಿಲ್ಲೆಯ ದೌಲತ್‌ಪುರ ಗ್ರಾಮದ ನಿವಾಸಿ. ತಂದೆಗೆ ಸಣ್ಣ ಕಿರಾಣಿ ಅಂಗಡಿ ಇದ್ದು, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

English summary
19-year-old Shrishti Goswami from Haridwar is the Chief Minister of Uttarakhand for a day, on the occasion of the National Day of the Girl Child on January 24th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X