ಕ್ರಿಮಿನಲ್ ಹಿನ್ನೆಲೆಯುಳ್ಳ 1,581 ಎಂಪಿಗಳಿಂದ ಮತದಾನ
ನವದೆಹಲಿ, ಜುಲೈ 17: ಭಾರತದ ಮುಂದಿನ ರಾಷ್ಟ್ರಪತಿ ಆಯ್ಕೆಗಾಗಿ ದೇಶದ ವಿವಿಧೆಡೆ ಮತದಾನ ನಡೆದಿದೆ. 543 ಲೋಕಸಭಾ ಸದಸ್ಯರು, 233 ರಾಜ್ಯಸಭಾ ಸದಸ್ಯರು ಹಾಗೂ ಎಲ್ಲಾ ರಾಜ್ಯಗಳ 4,120 ಶಾಸಕರು ನೂತನ ರಾಷ್ಟ್ರಪತಿ ಆಯ್ಕೆಗಾಗಿ ಮತದಾನ ಮಾಡಲಿದ್ದಾರೆ.
4852 ಮತದಾರರ ಪೈಕಿ 451(ಶೇ 9ರಷ್ಟು) ಮಂದಿ ಮಾತ್ರ ಮಹಿಳೆಯರಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ 1,581 ಸಂಸದರು (ಶೇ 33ರಷ್ಟು) ಹಾಗೂ 3,640 ಕೋಟ್ಯಧಿಪತಿ ಸಂಸದರು ಮತದಾನ ಮಾಡಲಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫರ್ಮ್ಸ್(ಎಡಿಆರ್) ವರದಿ ನೀಡಿದೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರೂ ಇನ್ನೂ ಸಂಸತ್ತು ಸದಸ್ಯತ್ವ ಹೊಂದಿದ್ದು, ಇವರಿಬ್ಬರೂ ಸೇರಿದಂತೆ 55 ಸಂಸದರು ತಮ್ಮ ರಾಜ್ಯಗಳ ವಿಧಾನಸಭೆಗಳಲ್ಲಿ ಮತ ಚಲಾಯಿಸಲಿದ್ದಾರೆ.
ಚುನಾವಣಾ ಕಣದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಮೀರಾ ಕುಮಾರ್ ಇದ್ದಾರೆ. ಗೆಲ್ಲುವ ಫೇವರಿಟ್ ಅಭ್ಯರ್ಥಿಯಾಗಿ ಎನ್‌ಡಿಎಯ ರಾಮನಾಥ್ ಕೋವಿಂದ್ ಕಣದಲ್ಲಿದ್ದಾರೆ.

ಕ್ರಿಮಿನಲ್ ಹಿನ್ನೆಲೆಯುಳ್ಳವರು
543 ಲೋಕಸಭಾ ಸದಸ್ಯರ ಪೈಕಿ 184(ಶೇ 34ರಷ್ಟು), 231 ರಾಜ್ಯಸಭಾ ಸದಸ್ಯರ ಪೈಕಿ 44 (ಶೇ19ರಷ್ಟು), 4078 ಶಾಸಕರು(ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ)ಗಳ ಪೈಕಿ 1353 (ಶೇ33) ಶಾಸಕರು ತಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ಅತ್ಯುಗ್ರ ಕ್ರಿಮಿನಲ್ ಹಿನ್ನೆಲೆ
4852 ಸಂಸದರು/ಶಾಸಕರ ಹಿನ್ನೆಲೆ ಪರಿಶೀಲಿಸಿದ್ದಾಗ 993(ಶೇ 20) ರಷ್ಟು ಸದಸ್ಯರು ತಮ್ಮ ಮೇಲೆ ಅತ್ಯುಗ್ರ ಕ್ರಿಮಿನಲ್ ಕೇಸ್ ಗಳಿವೆ ಎಂದು ಚುನಾವಣಾ ಆಯೋಗಕ್ಕೆ ಸ್ವಯಂ ಘೋಷಿತ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಪೈಕಿ 543 ಲೋಕಸಭಾ ಸದಸ್ಯರ ಪೈಕಿ 117(ಶೇ 22), 231 ರಾಜ್ಯಸಭಾ ಸದಸ್ಯರ ಪೈಕಿ 16 (ಶೇ 7ರಷ್ಟು), 4078 ಶಾಸಕರ ಪೈಕಿ 860(ಶೇ21) ಮಂದಿ ಇದ್ದಾರೆ.

ಶಾಸಕರ ಮತ ಮೌಲ್ಯ
ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರು/ಶಾಸಕರ ಮತಗಳು: 1091472 ಮತಗಳ ಪೈಕಿ ಕ್ರಿಮಿನಲ್ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳು 367393 ಮತಗಳು (ಶೇ 34) ಹೊಂದಿದ್ದಾರೆ.

ಕೋಟ್ಯಧಿಪತಿ ಜನ ಪ್ರತಿನಿಧಿ
4852 ಸಂಸದರು/ಶಾಸಕರ ಪೈಕಿ 3460 (ಶೇ71) ಕೋಟ್ಯಧಿಪತಿಗಳಿದ್ದಾರೆ. 543 ಲೋಕಸಭಾ ಸದಸ್ಯರ ಪೈಕಿ 445(ಶೇ 82), 231 ರಾಜ್ಯಸಭಾ ಸದಸ್ಯರ ಪೈಕಿ 194(ಶೇ 84), 4078 ಶಾಸಕರ ಪೈಕಿ 2721 (ಶೇ 68) ಮಂದಿ ಕೋಟ್ಯಧಿಪತಿಗಳಿದ್ದಾರೆ.

ಮಹಿಳಾ ಮತದಾರರು
4852 ಸಂಸದರು/ ಶಾಸಕರ ಪೈಕಿ ಕೇವಲ 451(ಶೇ9 ರಷ್ಟು) ಮಂದಿ ಮಾತ್ರ ಮಹಿಳಾ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಮತಗಳ ಲೆಕ್ಕಾಚಾರದಲ್ಲಿ 1091472 ಮತಗಳಲ್ಲಿ 109708 ಮತಗಳು (ಶೇ 10)ಮಹಿಳಾ ಪ್ರತಿನಿಧಿಗಳ ಮತಗಳಾಗಿವೆ.
ಲೋಕಸಭೆಯಲ್ಲಿ 65 ಮಹಿಳಾ ಸಂಸದೆಯರಿಂದ 384444 ಮತಗಳ ಪೈಕಿ 46020(ಶೇ 12ರಷ್ಟು) ಮತಗಳು ಸಿಗಲಿವೆ.
ರಾಜ್ಯಸಭೆಯಲ್ಲಿ 23 ಮಹಿಳಾ ಸಂಸದೆಯರಿದ್ದು, 163548 ಮತಗಳ ಪೈಕಿ 16284 (ಶೇ 10)ರಷ್ಟು ಮತಗಳು ಬರಲಿವೆ.
363 ಮಹಿಳಾ ಶಾಸಕಿಯರಿಂದ 543480 ಮತಗಳ ಪೈಕಿ 51383(9%) ಮತಗಳು ಸಿಗಲಿವೆ.












Click it and Unblock the Notifications