ದಟ್ಟ ಮಂಜು ಹಿನ್ನೆಲೆ ನವದೆಹಲಿಯ ಹಲವೆಡೆ 14 ರೈಲುಗಳ ಸಂಚಾರ ಹಾಗೂ 30 ವಿಮಾನಗಳ ಹಾರಾಟದಲ್ಲಿ ವಿಳಂಬ
ನವದೆಹಲಿ, ಡಿಸೆಂಬರ್, 26: ಈಗಾಗಲೇ ಮಳೆಗಾಲ ಮುಗಿದಿದ್ದು, ಚಳಿಗಾಲ ಆರಂಭವಾಗಿದೆ. ಮುಂಗಾರು ಮಳೆಯಂತೆಯೇ ಬಹುತೇಕ ರಾಜ್ಯಗಳಲ್ಲಿ ಚಳಿ ಎಂಟ್ರಿ ಕೊಟ್ಟಿದೆ. ಅಲ್ಲದೆ ಉತ್ತರ ಭಾರತ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಮುಚ್ಚಿದ ವಾತಾವರಣ ನಿರ್ಮಾಣದಿಂದ ರೈಲುಗಳ ಸಂಚಾರ ಸೇರಿದಂತೆ ವಿಮಾನ ಹಾರಾಟವನ್ನು ಕೂಡ ರದ್ದು ಮಾಡಲಾಗಿದೆ. ಹಾಗೆಯೇ ಮಂಗಳವಾರವೂ (ಡಿಸೆಂಬರ್ 26) ದಟ್ಟ ಮಂಜು ಹಿನ್ನೆಲೆ ಈ ಭಾಗಗಳಲ್ಲಿ ರೈಲು ವಿಮಾನಗಳ ಆಗಮನ ವಿಳಂಬವಾಗಿದ ಎನ್ನುವ ಮಾಹಿತಿ ಲಭ್ಯವಾಗಿದೆ.
ದಟ್ಟ ಮಂಜು ಹಿನ್ನೆಲೆ ನವದೆಹಲಿಯಿಂದ ಹಲವು ಕಡೆ ಹೋಗುವ ವಿಮಾನಗಳು, 14 ರೈಲುಗಳ ವಿಳಂಬವಾಗಿವೆ. ನವದೆಹಲಿ ವಿಮಾನ ನಿಲ್ದಾಣದಿಂದ ದುಬೈ, ಕುವೈತ್, ಕಠ್ಮಂಡು, ಲಂಡನ್ ಮತ್ತು ಮಾರಿಷಸ್‌ಗೆ ಹೋಗುವ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿವೆ. ಇನ್ನು ಅಬುಧಾಬಿ, ಮಿಲನ್, ಅಡಿಸ್ ಅಬಾಬಾ ಮತ್ತು ದೋಹಾದಿಂದ ಆಗಮನವೂ ವಿಳಂಬವಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ಬೆಳಗ್ಗೆ ನವದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಇದರ ಪರಿಣಾಮ ಹಲವು ವಿಮಾನಗಳು ಮತ್ತು ರೈಲುಗಳು ವಿಳಂಬವಾಗುವುದರೊಂದಿಗೆ, ಇನ್ನು ಇದರಿಂದ ಪ್ರಯಾಣದಲ್ಲಿ ಅಡಚಣೆಗಳು ಉಂಟಾದವು. ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಏನು ಕಾಣದೇ ಬರೀ ಮಂಜು ಆವರಿಸಿದ್ದು, ಇದರ ಪರಿಣಾಮ ಮಂಗಳವಾರ ಹಲವಾರು ವಿಮಾನಗಳ ಆಮನ, ನಿರ್ಗಮನದಲ್ಲಿ ವಿಳಂಬವಾದವು. ಬೆಳಗ್ಗೆ 8:30 ರಿಂದ 10ರವರೆಗೆ ಐದು ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಗಿದೆ ಎಂದು ವಿಮಾನನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದರು.
ರಾಷ್ಟ್ರ ರಾಜಧಾನಿಯ ತಾಪಾಮಾನ ಸುಮಾರು 7 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ನವದೆಹಲಿ ವಿಮಾನ ನಿಲ್ದಾಣದಲ್ಲಿ, ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಸುಮಾರು 30 ವಿಮಾನಗಳು ಆಗಮನ ಮತ್ತು ನಿರ್ಗಮನ ಎರಡರಲ್ಲೂ ವಿಳಂಬವನ್ನು ಅನುಭವಿಸಿದವು. ಇಂದು ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದ ಫ್ಲೈಟ್ ಇನರ್ಮೇಷನ್ ಡಿಸ್ಪ್ಲೇ ಸಿಸ್ಟಮ್ ಡೇಟಾವು ಅಡಚಣೆಗಳನ್ನು ಸೂಚಿಸಿದ್ದು, ದಿನವಿಡೀ ಹೆಚ್ಚಿನ ವಿಮಾನಗಳು ಪರಿಣಾಮ ಬೀರಬಹುದು ಎಂದು ಮೂಲಗಳು ಸೂಚಿಸಿವೆ. ಅದೇ ರೀತಿ ಮಂಜು ಕವಿದ ವಾತಾವರಣದಿಂದಾಗಿ 14 ರೈಲುಗಳ ಆಗಮನವೂ ವಿಳಂಬವಾಗಿದೆ.
ಮತ್ತೊಂದೆಡೆ ಚೆನ್ನೈ ಮತ್ತು ಶಿಮ್ಲಾಕ್ಕೆ ದೇಶೀಯ ವಿಮಾನಗಳು ತಡವಾಗಿ ಲಕ್ನೋಗೆ ಹೋಗುವ ವಿಮಾನವನ್ನು ರದ್ದುಗೊಳಿಸಲಾಯಿತು. ಚಂಡೀಗಢ, ಬೆಂಗಳೂರು, ಮುಂಬೈ, ಲಕ್ನೋ, ಜೈಪುರ ಮತ್ತು ಅಹಮದಾಬಾದ್‌ನಿಂದ ಆಗಮಿಸುವ ವಿಮಾನಗಳು ಪ್ರತಿಕೂಲ ಹವಾಮಾನದಿಂದಾಗಿ ವಿಳಂಬ ಆಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ ಪುರಿ, ಹೌರಾ, ಕಾನ್ಪುರ್, ಅಲಹಾಬಾದ್, ಅಜಂಗಢ್, ಭಗಲ್ಪುರ್, ಗಯಾ, ದಿಬ್ರುಗಢ್, ದುರ್ಗ್, ಚೆನ್ನೈ, ಹೈದರಾಬಾದ್, ಹಬೀಬ್‌ಗಂಜ್, ಖಜುರಾಹೊ ಮತ್ತು ವಾಸ್ಕೋ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ನವದೆಹಲಿಗೆ ತೆರಳುವ 14 ರೈಲುಗಳ ವಿಳಂಬವಾಗಿದೆ ಎಂದು ಉತ್ತರ ರೈಲ್ವೆ ಮಾಹಿತಿ ನೀಡಿದೆ.












Click it and Unblock the Notifications