ಅರುಣಾಚಲದಲ್ಲಿ ಸಂಭವಿಸಿದ ಭೂ ಕುಸಿತಕ್ಕೆ 14 ಜನ ಬಲಿ
ಅರುಣಾಚಲದ ಪಾಪುಮ್ ಪಾರೆ ಎಂಬ ಕುಗ್ರಾಮದಲ್ಲಿ ಭೂಕುಸಿತ. ಮೂರು ಮನೆಗಳಿಗೆ ಹಾನಿ. ಕನಿಷ್ಠ 14 ಜನರ ಸಾವು.
ಇಟಾ ನಗರ (ಅರುಣಾಚಲ ಪ್ರದೇಶ), ಜುಲೈ 11: ಇಲ್ಲಿಗೆ ಸಮೀಪದ ಪಾಪುಮ್ ಪಾರೆ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೂ ಕುಸಿತದಲ್ಲಿ ಕನಿಷ್ಠ 14 ಜನರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಜಲಾಶ್ ಪರ್ಟಿನ್, ''ಸುಮಾರು ಮೂರು ವಾಸದ ಮನೆಗಳು ಈ ಭೂ ಕುಸಿತಕ್ಕೆ ಸಿಲುಕಿವೆ. ಮಂಗಳವಾರ ಮಧ್ಯಾಹ್ನ ಸುಮಾರು 3:30 ರ ಸುಮಾರಿಗೆ ಈ ಕುಸಿತ ಸಂಭವಿಸಿದೆ'' ಎಂದು ತಿಳಿಸಿದರು.

ಕಳೆದ ನಾಲ್ಕು ದಿನಗಳಿಂದ ಪಾಪುಮ್ ಪಾರೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದಲೇ ಗುಡ್ಡಗಾಡು ಪ್ರದೇಶದಲ್ಲಿರುವ ಈ ಪ್ರಾಂತ್ಯದಲ್ಲಿ ಭೂ ಕುಸಿತ ಉಂಟಾಗಲು ಕಾರಣ ಎಂದು ಹೇಳಲಾಗಿದೆ.
More than 10 people dead in a landslide in Papumpare district of Arunachal Pradesh. pic.twitter.com/bkAFXyoChU
— ANI (@ANI_news) July 11, 2017












Click it and Unblock the Notifications