ಪಶ್ಚಿಮ ಬಂಗಾಳದಲ್ಲಿ ಬಾರೀ ಮಳೆ, ಗಾಳಿಗೆ 13 ಜನ ಬಲಿ
ಕೋಲ್ಕತ್ತಾ, ಏಪ್ರಿಲ್ 18: ಪಶ್ಚಿಮ ಬಂಗಾಳದಾದ್ಯಂತ ಸುರಿದ ಭಾರೀ ಮಳೆ ಮತ್ತು ಗಾಳಿಗೆ 13 ಜನ ಮೃತರಾಗಿದ್ದು ಹಲವರು ಗಾಯಗೊಂಡಿದ್ದಾರೆ.
ಗಂಟೆಗೆ 98 ಕಿ.ಮೀ.ವೇಗದಲ್ಲಿ ಬೀಸಿದ ಭಾರೀ ಗಾಳಿಗೆ ಮನೆಯ ಛಾವಣಿಗಳು ಹಾರಿವೆ, ಹಲವಾರು ಮರಗಳು ಮಕಾಡೆ ಮಲಗಿವೆ. ಮರಗಳ ಅಡಿಯಲ್ಲಿ ನಿಂತಿದ್ದ ವಾಹನಗಳು ಸಂಪೂರ್ಣ ಜಖಂಗೊಂಡಿವೆ.
ಕಳೆದ 70 ವ ರ್ಷಗಳ ನಂತರ ಪಶ್ಚಿಮ ಭಂಗಾಳ ಕಂಡ ಅತ್ಯಂತ ಅಪಾಯಕಾರಿ ಬಿರುಗಾಳಿ ಇದು ಎಂದು ವರದಿಗಳು ತಿಳಿಸಿವೆ. ರಾಜ್ಯದಾದ್ಯಂತ ಸಂಭವಿಸಿದ ಈ ವಿಕೋಪದ ಪರಿಣಾಮ ಸಾರಿಗೆ ಸಂಪರ್ಕದ ಮೇಲಾಗಿದ್ದು, ರೈಲು, ವಿಮಾನ ಸೇವೆಗಳನ್ನು ಹಲವು ತಾಸುಗಳ ಕಾಲ ತಡೆಹಿಡಿಯಲಾಗಿತ್ತು.

ಕೋಲ್ಕತ್ತಾ, ಹೊವ್ರಾ ಮುಂತಾದೆಡೆಗಳಲ್ಲಿ ಜನರು ಬೇಸತ್ತುಹೋಗುವಂಥ ಟ್ರಾಫಿಕ್ ಸಮಸ್ಯೆಗೆ ಸಾಕ್ಷಿಯಾಗಬೇಕಾಯಿತು. ರಾಜ್ಯದಲ್ಲಿ ಇಂದು ಸಹ ಇದೇ ವಾತಾವರಣ ಮುಂದುವರಿದಿದೆ.












Click it and Unblock the Notifications