ಬಾಲಕಿ ಲೈಂಗಿಕ ದೌರ್ಜನ್ಯ, ಸಚಿವರ ಆಪ್ತನ ರಕ್ಷಣೆ ನಿಂತರೆ ಪೊಲೀಸರು?

ಆಂಧ್ರದ ನೆಲ್ಲೂರಿನಲ್ಲಿ ಹನ್ನೆರಡು ವರ್ಷದ ಬಾಲಕಿ ಮೇಲೆ ಅರವತ್ತೈದು ವರ್ಷದ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತೆಯ ಪೋಷಕರೇ ಮೊದಲಿಗೆ ತಾವು ನೀಡಿದ್ದ ದೂರಿನ ವಿರುದ್ಧವಾದ ಹೇಳಿಕೆ ಕೊಡುತ್ತಿದ್ದಾರೆ

ನೆಲ್ಲೂರು, ಮಾರ್ಚ್ 27: ನೆಲ್ಲೂರಿನಲ್ಲಿ 12 ವರ್ಷದ ಬಾಲಕಿ ಮೇಲೆ 65 ವರ್ಷದ ವ್ಯಾಪಾರಿ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಾರ್ಟ್ ಮೆಂಟ್ ನಲ್ಲಿ ಬಾಲಕಿ ಮನೆಗೆಲಸ ಮಾಡಿಕೊಂಡಿದ್ದಳು. ಆರೋಪಿ ಪಶುಪುಲೇಟಿ ನರಸಿಂಹ ರಾವ್ ಕೂಡ ವಾಸವಿದ್ದದ್ದು ಅದೇ ಕಟ್ಟಡದಲ್ಲಿ.

ಸಂತ್ರಸ್ತೆಯ ತಂದೆ ಕೂಡ ಅದೇ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಆ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಾಲಕಿಗೆ ಚಾಕೊಲೇಟ್ ಹಾಗೂ ಬಿಸ್ಕತ್ ನ ಆಮಿಷ ಒಡ್ಡಿರುವ ಆರೋಪಿ ಅಪಾರ್ಟ್ ಮೆಟ್ ನ ಐದನೇ ಅಂತಸ್ತಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.[7 ಲೈಂಗಿಕ ದೌರ್ಜನ್ಯ ಕೇಸ್, ನರ್ಸರಿ ಶಾಲೆಗೆ ಬೀಗ ಜಡಿದ ಸರ್ಕಾರ]

ಮಗಳ ಬಟ್ಟೆ ಒಗೆಯುವ ಸಂದರ್ಭದಲ್ಲಿ ತಾಯಿಗೆ ರಕ್ತದ ಕಲೆಗಳು ಕಂಡುಬಂದವು ಎಂದು ದೂರಿನಲ್ಲಿ ತಿಳಿಸಿದ್ದರು. ಆದರೆ ಆ ನಂತರ ಹೇಳಿಕೆಯನ್ನು ಬದಲಾಯಿಸಿದ ಬಾಲಕಿ ಪೋಷಕರು, ಅಂಥ ಯಾವ ಘಟನೆ ನಡೆದಿಲ್ಲ ಎಂದಿದ್ದಾರೆ. ಆದರೂ ನೆಲ್ಲೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Sexual assault

ಆದರೆ, ಮಕ್ಕಳ ಹಕ್ಕುಗಳ ಹೋರಾಟಗಾರ ಅಚ್ಯುತ ರಾವ್ ಪತ್ರಿಕಾಗೋಷ್ಠಿ ನಡೆಸಿ, ಆರೋಪಿಯು ಸಚಿವ ಪಿ.ನಾರಾಯಣ ಅವರ ಸಮೀಪವರ್ತಿ. ಆದ್ದರಿಂದಲೇ ಪೊಲೀಸರು ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಂಥ ಪ್ರಕರಣವು ಜಾಮೀನುರಹಿತವಾದದ್ದು. ಆದರೂ ಈವರೆಗೆ ಆರೋಪಿಯ ಬಂಧನವಾಗಿಲ್ಲ ಎಂದು ಆರೋಪಿಸಿದ್ದಾರೆ.[ಬೆಳ್ಳಂದೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

ಈ ಪ್ರಕರಣದಲ್ಲಿ ನಾವು ಹೈಕೋರ್ಟ್ ಮೆಟ್ಟಿಲೇರುತ್ತೇವೆ ಸಂತ್ರಸ್ತೆಯು ಅಪ್ರಾಪ್ತೆ. ಆಕೆ ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಇದು ಕೂಡ ಬಾಲಕಾರ್ಮಿಕ ಕಾಯ್ದೆ ಅಡಿ ಪ್ರಕರಣ ಬರುತ್ತದೆ. ಅದ್ದರಿಂದ ಮುಖ್ಯಮಂತ್ರಿ ಹಾಗೂ ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಮನವಿ ಮಾಡಿದ್ದೇವೆ ಎಂದು ಅಚ್ಯುತರಾವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+