ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಪ್ರತಿದಿನ ನೆನೆಯಬೇಕಾದ ವೆಂಕಟಸುಬ್ಬ ಸೆಟ್ಟಿ

By ಡಾ. ಅನಂತ ಕೃಷ್ಣನ್
|
Google Oneindia Kannada News

ಮೈಸೂರು, ಜನವರಿ , 01: ಸಾಂಸ್ಕೃತಿಕ ನಗರಿ ಮೈಸೂರು ವಿಜ್ಞಾನ ಹಬ್ಬಕ್ಕೆ ಸಿದ್ಧವಾಗಿದೆ. ಮೈಸೂರಿಗೆ ಹೆಮ್ಮೆ ತಂದ ಭಾರತದ ಮೊಟ್ಟ ಮೊದಲ ವಿಮಾನ ತಯಾರಕ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ವೆಂಕಟಸುಬ್ಬ ಸೆಟ್ಟಿ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಲೇಬೇಕು.

ಮೈಸೂರಿನ ಶಿವರಾಮ್ ಪೇಟ್ ಸುಬ್ಬ ಸೆಟ್ಟಿ ಅವರ ಜನ್ಮ ಸ್ಥಳ. ಈ ವೇಳೆ ಸೆಟ್ಟಿ ಅವರ ಸಾಧನೆಗಳನ್ನು ಒಮ್ಮೆ ಮೆಲುಕು ಹಾಕಲೆಬೇಕು. ವೆಂಕಟ ಸುಬ್ಬ ಸೆಟ್ಟಿ ಅವರ ಮೊಮ್ಮಗ ಗ್ಯಾಸ್ ಟ್ರಬ್ಲೈನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಜಿ ಎನ್ ಜಯಪ್ರಕಾಶ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.[ಮೈಸೂರಲ್ಲಿ ಮೊಳಗಲಿದೆ ಮೋದಿಯ ವಿಜ್ಞಾನ-ತಂತ್ರಜ್ಞಾನ ಮಂತ್ರ]

mysuru

ಡಿಸೆಂಬರ್ 28, 1879 ರಂದು ಸೆಟ್ಟಿ ಜನಿಸಿದ್ದರು. ಸೆಟ್ಟಿ Avro-504 ದ ತಯಾರಿಕೆಯಲ್ಲಿ ಮೊದಲು ತೊಡಗಿಕೊಂಡಿದ್ದರು. 1912 ರಲ್ಲಿ ತಯಾರಾದ ವಿಮಾನ 1913 ರಲ್ಲಿ ಪ್ರಾಯೋಗಿಕ ಹಾರಾಟವನ್ನು ನಡೆಸಿತು.

ಮೈಸೂರು ಮಹಾರಾಜಾ ಕಾಲೇಜಿಂದ ಸ್ಕಾಲರ್ ಶಿಪ್
ವೆಸ್ಲೆಯನ್ ಮಿಶನ್ ಹೈ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು. ಮದ್ರಾಸ್ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದುಕೊಂಡರು. ಮೈಸೂರು ಸರ್ಕಾರದ ಪ್ರೊಬೇಶನರಿ ಸಬ್ ಅಸಿಸ್ಟೆಂಟಡ್ ಇಂಜಿನಿಯರ್ ಆಗಿ ಕೆಲಸ ಮಾಡಲು ಆರಂಭಿಸಿದರು. 1912 ರಲ್ಲಿ ಸೆಟಿ ಮಾರ್ಡನ್ ರಿವ್ಯೂ ಎಂಬ ಮ್ಯಗಝಿನ್ ಸೆಟಿ ಅವರ ಕೆಲಸದ ಕುರಿತು ಲೇಖನ ಬರೆಯಿತು. ಅವರ ಸಾಧನೆಗಳನ್ನು ಮೆಲುಕು ಹಾಕಿತು.

mysuru

Avro-504 ಪ್ರಾಜೆಕ್ಟ್ ಗೆ ಸಂಬಂಧ
ಈ ಬಾರಿ ನಡೆಯುತ್ತಿರುವ ವಿಜ್ಞಾನ ಸಮ್ಮೇಳನ Avro-504 ಕ್ಕೆ ಸಂಬಂಧಿಸಿದ್ದು ನಮಗೆ ಸಂತಸ ತಂದಿದೆ. ಹಿಂದೂಸ್ತಾನ್ ಮ್ಯಾನಿಫ್ಯಾಕ್ಚರ್ ಕಂಪನಿ ಇದಕ್ಕೆ ಕೈ ಜೋಡಿಸುತ್ತೇನೆ ಎಂದು ಹೇಳಿದೆ. ಭಾರತದ ಅನೇಕ ಎಲೆ ಮರೆ ಕಾಯಿಯಂತಹ ಮಹಾನುಭಾವರಲ್ಲಿ, ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕೊಡುಗೆ ನೀಡಿದ ಮಹಾನುಭಾವರನ್ನು ಸ್ಮರಣೆ ಮಾಡಿಕೊಳ್ಳಬೇಕಿದೆ.(ಚಿತ್ರ ಕೃಪೆ: ಜಿ ಎನ್. ಜಯಪ್ರಕಾಶ್)

English summary
With the curtain set to rise on 103rd Indian Science (103ISC) on January 3, the city's links with Science and Technology are once again jettisoning out of the annals of history. India's first aviator and aircraft-maker Prof Venkata Subba Setti was born at Shivarampet in Mysuru. On Thursday, this Correspondent reconnected with Prof Setti's great grandson G N Jayaprakash, a scientist with Gas Turbine Research Establishment in Bengaluru, after reporting about him for the first time in 2003.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X