Get Updates
Get notified of breaking news, exclusive insights, and must-see stories!

Mann Ki Baat: 100ರತ್ತ 'ಮನ್‌ ಕೀ ಬಾತ್': ಪ್ರಧಾನಿ ನರೇಂದ್ರ ಮೋದಿಯವರ 50ನೇ ಸಂಚಿಕೆ ಹೇಗಿತ್ತು...

ದೆಹಲಿ ಏಪ್ರಿಲ್ 30: ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದ 100ನೇ ಸಂಚಿಕೆ ಇಂದು ಪ್ರಸಾರವಾಗಲಿದೆ. ತಿಂಗಳಿಗೊಮ್ಮೆ ಪ್ರಸಾರವಾಗುವ ಈ ಕಾರ್ಯಕ್ರಮಕ್ಕೆ 23 ಕೋಟಿ ಮಂದಿ ಕಾರ್ಯಂ ಕೇಳುಗರಿದ್ದಾರೆ ಎಮದು ಸಮೀಕ್ಷೆಯೊಂದು ಹೇಳಿದೆ. ಬೆಂಗಳೂರಿನ ರಾಜಭವನದಲ್ಲಿ ಪ್ರಸಾರ ಭಾರತಿಯ 'ಮನ್‌ ಕೀ ಬಾತ್' 100ನೇ ಸಂಚಿಕೆ ಇಂದು ರೇಡಿಯೋದಲ್ಲಿ ಪ್ರಸಾರವಾಗಲಿದೆ. ಇದಕ್ಕಾಗಿ ಕರ್ನಾಟಕದ ಏಳು ಮಂದಿ ಸಾಧಕರನ್ನು ಪ್ರಸಾರ ಭಾರತಿ ಆಹ್ವಾನಿಸಿದೆ. ನೂರನೇ ಸಂಚಿಕೆಯಂತೆ "ಮನ್ ಕೀ ಬಾತ್" ನ 50 ನೇ ಸಂಚಿಕೆ ವಿಶೇಷವಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನ 50 ನೇ ಸಂಚಿಕೆಗಾಗಿ ದೇಶವಾಸಿಗಳಿಂದ ಸಲಹೆಗಳನ್ನು ಕೇಳಿದ್ದರು. ಈ ಸಂಚಿಕೆ 2018 ನವೆಂಬರ್ 25 ರಂದು ಪ್ರಸಾರವಾಗಿತ್ತು. 'ಮನ್ ಕೀ ಬಾತ್' ಅನ್ನು ಜನಪ್ರಿಯಗೊಳಿಸಲು ಮತ್ತು ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ನರೇಂದ್ರ ಮೋದಿ ಆ್ಯಪ್‌ನಲ್ಲಿ 'ಮನ್ ಕೀ ಬಾತ್ ಕ್ವಿಜ್' ಉಪಕ್ರಮವನ್ನು ಸಹ ತೆಗೆದುಕೊಳ್ಳಲಾಗಿತ್ತು.

100th Mann Ki Baat: How was Prime Minister Narendra Modis 50th episode of Mann Ki Baat...

' ಮನ್ ಕೀ ಬಾತ್ ರಸಪ್ರಶ್ನೆ'ಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ 'ಮನ್ ಕೀ ಬಾತ್'ಗೆ ಸಂಬಂಧಿಸಿದ ಪುಸ್ತಕವನ್ನು ನೀಡಲಾಯಿತು. ನರೇಂದ್ರ ಮೋದಿ ಆಪ್‌ನಲ್ಲಿ ಆನ್‌ಲೈನ್ ಮಾಧ್ಯಮದ ಮೂಲಕ ಸಿದ್ಧಪಡಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ, ಪ್ರತಿ ಪ್ರಶ್ನೆಗೆ 30 ಸೆಕೆಂಡುಗಳಲ್ಲಿ ಉತ್ತರಿಸಬೇಕಾಗುತ್ತದೆ. ಇದು ನವೆಂಬರ್ 25ರಂದು ನಡೆದ 'ಮನ್ ಕಿ ಬಾತ್' ವಿಶೇಷ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಟ್ವೀಟ್ ಸಂದೇಶದಲ್ಲಿ ಹೇಳಿದ್ದರು. ಕಾರ್ಯಕ್ರಮದ 50ನೇ ಸಂಚಿಕೆಯನ್ನು ಈ ರೀತಿ ಆಚರಿಸಲಾಗಿತ್ತು.

ಜೊತೆಗೆ ' ನರೇಂದ್ರ ಮೋದಿ ಮೊಬೈಲ್ ಆ್ಯಪ್'ನಲ್ಲಿ ಕಾರ್ಯಕ್ರಮಕ್ಕೆ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು.

'ಮನ್ ಕಿ ಬಾತ್' ನ 50 ನೇ ಆವೃತ್ತಿಗೆ ಸಂಬಂಧಿಸಿದಂತೆ ಪ್ರಧಾನಿ ನಿಮ್ಮಿಂದ ಸಲಹೆಗಳನ್ನು ಆಹ್ವಾನಿಸುತ್ತಾರೆ ಎಂದು ನರೇಂದ್ರ ಮೋದಿ ಅಪ್ಲಿಕೇಶನ್‌ನಲ್ಲಿ ಹೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನರ ವಿಶಿಷ್ಟ ಆಲೋಚನೆಗಳನ್ನು ಸೇರಿಸಬಹುದಾಗಿತ್ತು. ಹೀಗೆ ಮನ್ ಕೀ ಬಾತ್ 50ನೇ ಸಂಚಿಕೆ ವಿಶೇಷವಾಗಿತ್ತು. ಪ್ರಧಾನಿ ಮಾತನಾಡಲು ಬಯಸುವ ನಿಮ್ಮ ನೆಚ್ಚಿನ ವಿಷಯಗಳ ಬಗ್ಗೆ ನಿಮ್ಮ ಸಲಹೆಗಳು ಮತ್ತು ಆಲೋಚನೆಗಳನ್ನು ಕಳುಹಿಸಬಹುದು ಎಂದು ಅದು ಹೇಳಿತ್ತು.

100th Mann Ki Baat: How was Prime Minister Narendra Modis 50th episode of Mann Ki Baat...

ಈ ಮುಕ್ತ ವೇದಿಕೆಯಲ್ಲಿ ಜನ ತಮ್ಮ ಮಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿತ್ತು ಅಥವಾ ಟೋಲ್ ಫ್ರೀ ಸಂಖ್ಯೆ 1800-11-7800 ಅನ್ನು ಡಯಲ್ ಮಾಡುವ ಮೂಲಕ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪ್ರಧಾನ ಮಂತ್ರಿಗಾಗಿ ಸಂದೇಶವನ್ನು ದಾಖಲಿಸಬಹುದಿತ್ತು. ಜನರ ಸಂದೇಶಗಳ ಆಯ್ದ ಭಾಗಗಳನ್ನು ಮನ್ ಕಿ ಬಾತ್‌ನಲ್ಲಿಯೂ ಪ್ರಸಾರ ಮಾಡಲಾಯಿತು. ಇದಲ್ಲದೆ, 1922 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು SMS ನಲ್ಲಿ ನೀಡಲಾದ ಲಿಂಕ್‌ಗೆ ಭೇಟಿ ನೀಡುವ ಮೂಲಕ ಜನರ ಸಲಹೆಗಳು ಮತ್ತು ಆಲೋಚನೆಗಳನ್ನು ನೇರವಾಗಿ ಪ್ರಧಾನ ಮಂತ್ರಿಗೆ ಕಳುಹಿಸಬಹುದಿತ್ತು.

100ರತ್ತ 'ಮನ್‌ ಕೀ ಬಾತ್

ಮನ್​ ಕೀ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ. 7 ಜನ ಅತಿಥಿಗಳನ್ನು ಬೆಂಗಳೂರಿನ ರಾಜಭವನಕ್ಕೆ ಆಹ್ವಾನಿಸಲಾಗಿದೆ. ಬೆಳಿಗ್ಗೆ ಸುಮಾರು 8.30 ವೇಳೆಗೆ ರಾಜಭವನದಲ್ಲಿ ಹಾಜರಿರುವಂತೆ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಅರಣ್ಯ ಪುನರುಜ್ಜೀವನಗೊಳಿಸುವ ಬೆಂಗಳೂರಿನ ಸುರೇಶ್, ಗದಗದ ಕಾವೆಂಶ್ರೀ ಅವರು 'ಕಲಾ ಚೇತನ'ದ ಮೂಲಕ ಮಾಡುವ ಕಲೆ ಮತ್ತು ಸಂಸ್ಕೃತಿ ಸೇವೆ, ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿರುವ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರ ಬಗ್ಗೆ ಮೋದಿ ಮನ್​ ಕೀ ಬಾತ್​ನ ವಿವಿಧ ಆವೃತ್ತಿಗಳಲ್ಲಿ ಉಲ್ಲೇಖಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+