ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಪ್ ಟೆನ್ ವಿಶ್ವವಿದ್ಯಾಲಯಕ್ಕೆ 5 ವರ್ಷದಲ್ಲಿ 10 ಸಾವಿರ ಕೋಟಿ : ಮೋದಿ

|
Google Oneindia Kannada News

"ಖಾಸಗಿ ವಿವಿಯೂ ಸೇರಿದಂತೆ ದೇಶದ ಟಾಪ್ ಟೆನ್ ವಿಶ್ವವಿದ್ಯಾಲಯಗಳಿಗೆ ಮುಂದಿನ ಐದು ವರ್ಷಗಳಲ್ಲಿ ಸ್ವಾಯತ್ತತೆ ಹಾಗೂ ಹತ್ತು ಸಾವಿರ ಕೋಟಿ ನೆರವು ನೀಡಲಾಗುವುದು. ಅವುಗಳನ್ನು ವಿಶ್ವ ದರ್ಜೆಗೆ ಏರಿಸಬೇಕು ಎಂಬ ಕಾರಣಕ್ಕೆ ಈ ನೆರವು ನೀಡಲಾಗುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

7.58 ಲಕ್ಷ ಶಿಕ್ಷಕರಿಗೆ ವೇತನ ಏರಿಕೆ ಘೋಷಿಸಿದ ಮೋದಿ ಸರ್ಕಾರ7.58 ಲಕ್ಷ ಶಿಕ್ಷಕರಿಗೆ ವೇತನ ಏರಿಕೆ ಘೋಷಿಸಿದ ಮೋದಿ ಸರ್ಕಾರ

ಬಿಹಾರದ ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹೇಗೆ ನಳಂದ ಹಾಗೂ ತಕ್ಷಶಿಲಾ ವಿಶ್ವವಿದ್ಯಾಲಯಗಳು ಜಗತ್ತಿನ ನಾನಾ ಭಾಗಗಳಿಂದ ವಿದ್ಯಾರ್ಥಿಗಳನ್ನು ಸೆಳೆದವೋ ಅದೇ ರೀತಿ ಭಾರತೀಯ ವಿಶ್ವವಿದ್ಯಾಲಯಗಳು ಆಗಬೇಕು ಎಂದರು. ಈ ಸಮಾರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಜರಿದ್ದರು.

10000 crore will be given to top 10 universities to make them world-class: PM Modi

"ಜಗತ್ತಿನ ಟಾಪ್ ಐನೂರರ ಪಟ್ಟಿಯಲ್ಲಿ ನಾವಿಲ್ಲ. ನಾವು ಈ ಕಪ್ಪು ಚುಕ್ಕೆಯನ್ನು ತೆಗೆಯಬೇಕೋ ಬೇಡವೋ? ನಮ್ಮ ಸಂಕಲ್ಪ ಶಕ್ತಿ ಹಾಗೂ ಕಠಿಣ ಪರಿಶ್ರಮದಿಂದ ಈ ಸನ್ನಿವೇಶವನ್ನು ಬದಲಿಸಬೇಕು" ಎಂದರು.

ಹತ್ತು ಖಾಸಗಿ ಹಾಗೂ ಹತ್ತು ಸರಕಾರಿ ವಿಶ್ವವಿದ್ಯಾಲಯಗಳನ್ನು ವಿಶ್ವದರ್ಜೆಗೆ ಏರಿಸುವುದಕ್ಕೆ ಯೋಜನೆ ರೂಪಿಸುತ್ತೇವೆ. ಸರಕಾರದ ನಿಯಮಗಳಿಂದ ಅವುಗಳಿಗೆ ವಿನಾಯಿತಿ ನೀಡಿ, ಸ್ವತಂತ್ರವಾಗಿ ಬೆಳೆಯಲು ಅವಕಾಶ ನೀಡಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಹತ್ತು ಸಾವಿರ ಕೋಟಿ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು.

ಪ್ರಧಾನಿ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ ಸ್ಯಾಕ್ಸೊಫೋನ್ ಮಾಂತ್ರಿಕಪ್ರಧಾನಿ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ ಸ್ಯಾಕ್ಸೊಫೋನ್ ಮಾಂತ್ರಿಕ

ಸಾಮರ್ಥ್ಯ ಸಾಬೀತು ಪಡಿಸುವ ವಿಶ್ವವಿದ್ಯಾಲಯಗಳನ್ನು ಆರಿಸಲಾಗುವುದು. ಯಾವುದೇ ಶಿಫಾರಸು ಪರಿಗಣಿಸುವುದಿಲ್ಲ. ವಿ.ವಿ.ಯ ಇತಿಹಾಸ, ಈ ವರೆಗಿನ ಸಾಧನೆ, ಜಾಗತಿಕ ಮಟ್ಟದಲ್ಲಿ ಏರುವುದಕ್ಕೆ ಅನುಸರಿಸುವ ಹಾದಿ ಎಲ್ಲವನ್ನೂ ಪರಿಗಣಿಸಲಾಗುವುದು. ವೃತ್ತಿಪರ ಏಜೆನ್ಸಿಯೊಂದರ ಮೂಲಕ ಆಯ್ಕೆ ಮಾಡಲಾಗುವುದು ಎಂದು ಮೋದಿ ಮಾಹಿತಿ ನೀಡಿದ್ದಾರೆ.

ಐಐಎಂಗಳಿಗೆ ಇದೇ ಮೊದಲ ಬಾರಿಗೆ ಸರಕಾರದ ಹತೋಟಿಯಿಂದ ಹೊರಬರಲಿದೆ. ವೃತ್ತಿಪರವಾಗಿ ತೆರೆದುಕೊಳ್ಳಲಾಗಿದೆ. ಇದೊಂದು ದೊಡ್ಡ ಅವಕಾಶ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

English summary
Prime Minister Narendra Modi on Saturday said it was a "blot" that Indian universities do not figure among the top 500 of the world and noted that the government has decided to give autonomy and Rs 10,000 crore to top 10 public and private universities over the next five years to make them world-class.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X