ಕೊರೊನಾ ಲಸಿಕೆ ಮೊದಲ ಡೋಸ್: 6 ರಾಜ್ಯಗಳಲ್ಲಿ ಶೇ.100ರಷ್ಟು ಸಾಧನೆ
ನವದೆಹಲಿ, ಸೆಪ್ಟೆಂಬರ್ 13: ದೇಶದಲ್ಲಿ ಕೊರೊನಾ ಲಸಿಕಾ ಅಭಿಯಾನ ಭರದಿಂದ ಸಾಗಿದೆ. ಇದುವರೆಗೆ 74 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.
ಹಿಮಾಚಲಪ್ರದೇಶ ಈ ಸಾಧನೆ ಮಾಡಿದ ಮೊದಲ ರಾಜ್ಯವಾಗಿದ್ದು, 55.7 ಲಕ್ಷ ಮಂದಿಗೆ ಕನಿಷ್ಠ 1 ಡೋಸ್ ಲಸಿಕೆಯನ್ನು ನೀಡಲಾಗಿದ್ದು, ನವೆಂಬರ್ ಕೊನೆಯ ಒಳಗಾಗಿ ಎರಡೂ ಡೋಸ್‌ಗಳನ್ನು ವಿತರಿಸಲಾಗುತ್ತದೆ ಎಂಬ ವಿಶ್ವಾಸವನ್ನು ಸಿಎಂ ಜೈರಾಮ್ ಠಾಕೂರ್ ವ್ಯಕ್ತಪಡಿಸಿದ್ದಾರೆ.
56.5 ಕೋಟಿ ಫಲಾನುಭವಿಗಳಿಗೆ ಒಂದು ಡೋಸ್ ಪೂರ್ಣಗೊಂಡಿದ್ದರೆ, 17.7 ಕೋಟಿ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಮೂರು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಗೋವಾದಲ್ಲಿ 11.8 ಲಕ್ಷ ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ. ಆದರೆ ವಿರೋಧಪಕ್ಷಗಳು ರಾಜ್ಯ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿವೆ.
ದಾದ್ರಾ ಹಾಗೂ ನಗರ್ ಹವೇಲಿಯಲ್ಲಿ 6.26 ಲಕ್ಷ ಮಂದಿಗೆ ಮೊದಲ ಡೋಸ್ ವಿತರಿಸಲಾಗಿದೆ. ಸಿಕ್ಕಿಂನಲ್ಲಿ 5.10 ಲಕ್ಷ ಡೋಸ್ ನೀಡಿಕೆಯೊಂದಿಗೆ ಶೇ.100ರ ಸಾಧನೆ ಮಾಡಲಾಗಿದೆ.
ದೇಶದಲ್ಲಿ 6 ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಸಮ್ಮತಿ ನೀಡಿದ್ದು,ಈ ಪೈಕಿ ಕೋವ್ಯಾಕ್ಸಿನ್ ಮತ್ತು ಜೈಕೋವ್ ಡಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯಾಗಿದೆ.
ಲಡಾಖ್ ಹಾಗೂ ಲಕ್ಷದ್ವೀಪದಲ್ಲಿ ಕೂಡ ಶೇ.100ರಷ್ಟು ಫಲಾನುಭವಿಗಳಿಗೆ ಕನಿಷ್ಠ ಒಂದು ಡೋಸ್ ನೀಡಲಾಗಿದೆ. ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರಮವಾಗಿ 1.97 ಲಕ್ಷ ಹಾಗೂ 53,499 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಕೊರೊನಾ 3ನೇ ಅಲೆ ಭೀತಿ ನಡುವೆಯೇ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 27,254 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 219 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸೋಮವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,32,64,175ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,42,874ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,74,269ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 37,687 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,24,47,032ಕ್ಕೆ ತಲುಪಿದೆ.
ಇನ್ನು ಭಾರತದಲ್ಲಿ ಒಂದೇ 12,08,247 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, 54,30,14,076 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಸಂಪೂರ್ಣ ಕೊರೊನಾ ಲಸಿಕೆ ಪಡೆದವರಿಗೆ ಒಂದೊಮ್ಮೆ ಕೊರೊನಾ ಸೋಂಕು ತಗುಲಿದರೆ ಸಾಯುವ ಪ್ರಮಾಣ 11 ಪಟ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನ ಹೇಳಿದೆ.
ಹಾಗೆಯೇ ಆಸ್ಪತ್ರೆಗೆ ದಾಖಲಾಗುವ ಪ್ರಮಾಣವೂ ಶೇ.10ರಷ್ಟು ಕಡಿಮೆ ಇರುತ್ತದೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಡೆಲ್ಟಾ ರೂಪಾಂತರಿ ಹೆಚ್ಚು ಪ್ರಬಲವಾಗಿದೆ.
ಮೊದಲ ಅಧ್ಯಯನವನ್ನು ಅಮೆರಿಕದ 13 ಪ್ರದೇಶಗಳಲ್ಲಿ ಏಪ್ರಿಲ್ 4ರಿಂದ ಜೂನ್ 19ರ ನಡುವೆ ನಡೆಸಲಾಯಿತು. ಇದು ಡೆಲ್ಟಾ ರೂಪಾಂತರಿ ಪ್ರಬಲಗೊಳ್ಳುವ ಮುನ್ನವೇ ನಡೆಸಿದ ಸಮೀಕ್ಷೆಯಾಗಿದೆ.
ಡೆಲ್ಟಾ ರೂಪಾಂತರಿ ವೈರಸ್‌ನ ಗಂಭೀರ ಸ್ವರೂಪದ ಹೊಸ ಲಕ್ಷಣಗಳು ಪತ್ತೆ ಡೆಲ್ಟಾ ರೂಪಾಂತರಿ ವೈರಸ್‌ನ ಗಂಭೀರ ಸ್ವರೂಪದ ಹೊಸ ಲಕ್ಷಣಗಳು ಪತ್ತೆ ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಸೋಂಕು ತಗುಲಿದರೆ ಮೃತಪಡುವ ಪ್ರಮಾಣ 11 ಪಟ್ಟು ಕಡಿಮೆ ಇದೆ. ಮೃತಪಟ್ಟವರಲ್ಲಿ ಯುವಕರಿಗಿಂತಲೂ 65 ವರ್ಷ ಮೇಲ್ಪಟ್ಟವರೇ ಹೆಚ್ಚಿದ್ದಾರೆ.
ಮಾಡೆರ್ನಾ ಲಸಿಕೆ ಶೇ.95ರಷ್ಟು ಪರಿಣಾಮಕಾರಿ, ಫೈಜರ್ ಲಸಿಕೆ ಶೇ.80ರಷ್ಟು ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಶೇ.60ರಷ್ಟು ಪರಿಣಾಮಕಾರಿಯಾಗಿದೆ.
ದೇಶದಲ್ಲಿ ಕಾಣಿಸಿಕೊಂಡಿರುವ ಡೆಲ್ಟಾ ಸೋಂಕು ತೀವ್ರ ಸ್ವರೂಪವಾಗಿದ್ದು, ಲಸಿಕೆ ಹಾಕಿಸಿಕೊಂಡವರು, ಮತ್ತು ಲಸಿಕೆ ಹಾಕಿಸಿಕೊಳ್ಳದವರನ್ನೂ ಬಹಳ ವೇಗವಾಗಿ ಕಾಡಲಿದೆ ಎಂಬ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಬಹಿರಂಗ ಪಡಿಸಿದೆ. ಚೆನ್ನೈನಲ್ಲಿ ನಡೆಸಿದ ಕೆಲ ಅಧ್ಯಯನಗಳಿಂದ ಡೆಲ್ಟಾ ಸೋಂಕು ತೀವ್ರವಾಗಿದೆ












Click it and Unblock the Notifications