ಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆ

ನವದೆಹಲಿ, ಆಗಸ್ಟ್ 09 : ಭಾರತೀಯ ರಕ್ಷಣಾ ಇಲಾಖೆಯಲ್ಲಿ ಆತ್ಮ ನಿರ್ಭರ ಭಾರತ ಘೋಷಣೆಯಡಿ ಮಹತ್ವದ ಬದಲಾವಣೆಯಾಗಲಿದೆ. 101 ಮಿಲಿಟರಿ ಉತ್ಪನ್ನಗಳ ಆಮದನ್ನು ನಿಷೇಧಿಸಲಾಗಿದೆ.

ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತದ ಘೋಷಣೆ ಮಾಡಿದ್ದಾರೆ. ರಕ್ಷಣಾ ಇಲಾಖೆ ಈಗ ಇದಕ್ಕೆ ಸಿದ್ಧವಾಗುತ್ತಿದೆ" ಎಂದರು.

"101 ಮಿಲಿಟರಿ ಉತ್ಪನ್ನಗಳ ಆಮದನ್ನು ನಾವು ನಿಷೇಧಿಸಲಿದ್ದೇವೆ. ಇದರಿಂದಾಗಿ ದೇಶದಲ್ಲಿಯೇ ಇವುಗಳ ಉತ್ಪಾದನೆ ಮಾಡಲು ಸಾಧ್ಯವಾಗಲಿದೆ" ಎಂದು ರಕ್ಷಣಾ ಸಚಿವರು ಹೇಳಿದರು.

100 Military Items Will Be Banned For Import Says Rajnath Singh

"ಆಮದು ರದ್ದು ಮಾಡಿರುವ 101 ಉತ್ಪನ್ನಗಳಲ್ಲಿ ಕೆಲವು ಸಾಮಾನ್ಯ ಉತ್ಪನ್ನಗಳು ಸೇರಿಲ್ಲ. ಕೆಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳು ಸೇರಿವೆ" ಎಂದು ರಾಜನಾಥ್ ಸಿಂಗ್ ತಿಳಿಸಿದರು.

"ರಕ್ಷಣಾ ಇಲಾಖೆಯ ಈ ತೀರ್ಮಾನದಿಂದ 1,30,000 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ವಾಯುಪಡೆಯ 1,40,000 ಕೋಟಿ ಉತ್ಪನ್ನಗಳು ಸೇರಿವೆ" ಎಂದು ರಕ್ಷಣಾ ಸಚಿವರು ತಿಳಿಸಿದರು.

"ಆರ್ಥಿಕತೆ, ಮೂಲ ಸೌಕರ್ಯ, ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆ ಎಂಬ ಆರ್ಥಿಕತೆಯ 5 ಸ್ತಂಭಗಳ ಆಧಾರದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಧಾನಿಯವರು ಕರೆ ನೀಡಿದ್ದಾರೆ. ಅದಕ್ಕಾಗಿ ವಿಶೇಷ ಪ್ಯಾಕೇಜ್ ಸಹ ಘೋಷಣೆ ಮಾಡಿದ್ದಾರೆ. ರಕ್ಷಣಾ ಸಚಿವಾಲಯ ಇದಕ್ಕೆ ಬದ್ಧವಾಗಿದೆ" ಎಂದು ರಾಜನಾಥ್ ಸಿಂಗ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+