ಚಿತ್ರ ಸಂಪುಟ: ಸುದ್ದಿಯಾದರೂ ಸದ್ದು ಮಾಡದ 10 ಪ್ರಮುಖ ಸುದ್ದಿಗಳು
ಸಿನಿಮಾ ನಟಿಯ ಮೇಲೆ ಕಾಮುಕರ ಅಟ್ಟಹಾಸ, ಸಿಎಂ ಸಿದ್ದರಾಮಯ್ಯ - ಯಡಿಯೂರಪ್ಪ ವಾಕ್ಸಮರ, ನೆಲಮಂಗಲದ ಬಳಿ ಬಸ್ ಗೆ ಬೆಂಕಿ - ಇವೆಲ್ಲಾ ಸುದ್ದಿ ಜಂಜಾಟಗಳ ನಡುವೆ ಕೊಂಚ ಮನಸ್ಸಿಗೆ ಮುದ ಕೊಡುವಂಥ, ನಿತ್ಯ ಕಿಚ್ಚು ಹೊತ್ತಿಸುವ ಸುದ್ದಿಗಳಿಗಿಂತ ಭಿನ್ನವಾದ ಮತ್ತೊಂದಿಷ್ಟು ವಿಚಾರಗಳ ಗಮನ ಕೊಡುವುದು ಆರೋಗ್ಯಕ್ಕೆ ಒಳ್ಳೆಯದು!
ಹಾಗಾಗಿಯೇ, ಅಂಥ ಕೆಲವು ಸಚಿತ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಉದಾಹರಣೆಗೆ, ದೇಶದಲ್ಲಿಯೇ ಅತಿ ದೊಡ್ಡ ಸ್ಥಳೀಯ ಸರ್ಕಾರಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈ ಮಹಾನಗರ ಪಾಲಿಕೆಗೆ ಮಂಗಳವಾರ ಮತದಾನ ನಡೆಯುತ್ತಿದೆ. ಅಲ್ಲಿ, ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ ಮತ ಚಲಾಯಿಸಿದ್ದಾರೆ.
ದೂರದ ಇಂಡೋನೇಷ್ಯಾದ ಜಕಾರ್ತಾದಲ್ಲಿ ಪ್ರವಾಹವೇರ್ಪಟ್ಟು ಜನ, ಮನೆಗಳು ಜಲಾವೃತವಾಗಿವೆ. ಕೊಲಂಬೋದಲ್ಲಿ ಐಸಿಸಿ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಟೂರ್ನಿಯ ಫೈನಲ್ ನಲ್ಲಿ ಇಂದು ಭಾರತ- ದಕ್ಷಿಣ ಆಫ್ರಿಕಾ ಸೆಣೆಸಿವೆ.
ಮತ್ತೆ ವಾಪಸ್, ಭಾರತಕ್ಕೆ ಬರುವುದಾದರೆ ಉತ್ತರ ಪ್ರದೇಶದಲ್ಲಿ ಚುನಾವಣಾ ಬಿಸಿಯಿದೆ. ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾಡೆಲ್ಲಾ ಅವರು ಭಾರತದ ನಾಡನ್ನು ಸುತ್ತುತ್ತಿರುವ ವಿಚಾರಗಳಿವೆ.
ಫೋಟೋ ಸಹಿತ ಸಂಕ್ಷಿಪ್ತ ಮಾಹಿತಿ ನಮ್ಮದು, ಸುಮ್ಮನೇ ಒಂದು ಓದು ನಿಮ್ಮದು....

ಮತದಾರರ ಮೇಲೆ ಮೋಡಿ
ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಮುಂಬೈನ ಮತಗಟ್ಟೆಯೊಂದರಲ್ಲಿ ವೋಟು ಹಾಕಿದ ಸಚಿನ್ ತೆಂಡೂಲ್ಕರ್ ದಂಪತಿ.

ಸೇನೆಯ ಕಾರ್ಯಾಚರಣೆ
ದೂರದ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಪ್ರವಾಹವುಂಟಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ಅಲ್ಲಿನ ಯೋಧರು ನಾಗರಿಕರ ನೆರವಿಗಾಗಿ ರಬ್ಬರ್ ಬೋಟ್ ನಲ್ಲಿ ಸಾಗುತ್ತಿರುವ ಚಿತ್ರವಿದು.

ಪ್ರಶಸ್ತಿಗಾಗಿ ಹೋರಾಟ
ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ನಡೆದ ಇದೇ ವರ್ಷ ಜೂನ್ ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಗಾಗಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಾವಳಿಯ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ಶಬನಮ್ ಇಸ್ಮಾಯಿಲ್ ಅವರನ್ನು ಭಾರತದ ವಿಕೆಟ್ ಕೀಪರ್ ಸುಷ್ಮಾ ವರ್ಮಾ ಔಟ್ ಮಾಡಿದ್ದು ಹೀಗೆ.

ಕಾರ್ಯಕರ್ತರ ಹರ್ಷ
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಲಹಾಬಾದ್ ನ ಸ್ವರಾಜ್ ಭವನ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಮಾತುಕತೆ ನಡೆಸಿದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ.

ಚುನಾವಣಾ ರ್ಯಾಲಿ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು, ಅಲಹಾಬಾದ್ ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಚಾರ ನಡೆಸಿದರು.

ಮಾಲ್ ಮೇಲೆ ಬಂದು ಬಿದ್ದ ಉಕ್ಕಿನ ಹಕ್ಕಿ
ಮೆಲ್ಬೋರ್ನ್ ನಲ್ಲಿ ಶಾಪಿಂಗ್ ಮಾಲ್ ಮೇಲೆ ಬಂದು ಬಿದ್ದ ಪುಟ್ಟ ವಿಮಾನದ ಅವಶೇಷಗಳನ್ನು ತೆಗೆಯುವಲ್ಲಿ ನಿರತರಾಗಿರುವ ಕಾರ್ಮಿಕರು.

ಟಾಟಾ ಸನ್ಸ್ ಹೊಸ ಮುಖ್ಯಸ್ಥ
ಬಹು ದಿನಗಳಿಂದ ವಿವಾದದ ಗೂಡಾಗಿದ್ದ ಟಾಟಾ ಸನ್ಸ್ ಗ್ರೂಪ್ ಗೆ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿರುವ ನಟರಾಜನ್ ಚಂದ್ರಶೇಖರ್ ಅವರು ಬಾಂಬೆ ಹೌಸ್ ನಿಂದ ಹೊರಬರುತ್ತಿರುವುದು.

ನ್ಯಾಟ್ ಜಿಯೋ ವಿಶೇಷ ಕಾರ್ಯಕ್ರಮ
ಜನಪ್ರಿಯ ವಾಹಿನಿಯಾದ ನ್ಯಾಷನಲ್ ಜಿಯೋಗ್ರಾಫಿಕ್, ಈ ವಾರ ಬಿಗ್ ಕ್ಯಾಟ್ ವೀಕ್ ಎಂಬ ಆಚರಣೆಗೆ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಹೊಸದಾದ ಆಂದೋಲನವನ್ನು ಆರಂಭಿಸಲಾಗಿದ್ದು ಅದರ ಶೂಟಿಂಗ್ ವೇಳೆ ಕಲಾವಿದೆಯೊಬ್ಬರು ಚಿರತೆ ಮರಿಯೊಂದಿಗೆ ಕಂಡಿದ್ದು ಹೀಗೆ.

ಕೇಂದ್ರ ಸಚಿವರ ಜತೆ ಮಾತು
ಭಾರತದ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ಅವರು, ಮಂಗಳವಾರ ಕೇಂದ್ರ ಸರ್ಕಾರದ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಬಾಲ್ಟಿಕ್ ನಲ್ಲಿ ಕಾರ್ಯಕ್ರಮ
ಜರ್ಮನಿಯ ಬಾಲ್ಟಿಕ್ ದ್ವೀಪದಲ್ಲಿ ಆಯೋಜಿಸಲಾಗಿರುವ ಯೋಗ ಕಾರ್ಯಕ್ರಮವೊಂದಕ್ಕಾಗಿ ತಯಾರಿ ನಡೆಸುತ್ತಿರುವ ಯುವತಿಯರು ಕಂಡಿದ್ದು ಹೀಗೆ.












Click it and Unblock the Notifications