ತಮಿಳುನಾಡು : ತಿರುನೆಲ್ವೇಲಿ ಬಳಿ ಬಸ್ ಪಲ್ಪಿ, 10 ಸಾವು

Posted By:
Subscribe to Oneindia Kannada

ಚೆನ್ನೈ, ಜನವರಿ 08 : ತಮಿಳುನಾಡಿನ ತಿರುನೆಲ್ವೇಲಿ ಬಳಿ ಶುಕ್ರವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ 10 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಿರುವನಂತಪುರದಿಂದ ಕನ್ಯಾಕುಮಾರಿ ಮಾರ್ಗವಾಗಿ ವೆಲಂಕನ್ನಿಗೆ ತೆರಳುತ್ತಿದ್ದ ಬಸ್ ಇಂದು ಮುಂಜಾನೆ 5.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಇದರಿಂದಾಗಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 10 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

bus

ವೇಗವಾಗಿ ಹೋಗುತ್ತಿದ್ದ ಬಸ್ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಸಹಾಯದಿಂದ ಬಸ್ ಮೇಲಕ್ಕೆತ್ತಿ, ಸಿಲುಕಿಕೊಂಡವರನ್ನು ರಕ್ಷಣೆ ಮಾಡಿದ್ದಾರೆ.

ಮೃತಪಟ್ಟ 10 ಮಂದಿಯಲ್ಲಿ ಮೂವರು ಕೇರಳದವರು, ಇಬ್ಬರು ಗುಜರಾತ್‌, ಇಬ್ಬರು ಕನ್ಯಾಕುಮಾರಿಯವರು ಎಂದು ತಿಳಿದುಬಂದಿದೆ. ಇನ್ನೂ ಮೂವರ ಗುರುತು ಪತ್ತೆಯಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ten people died while over 20 others were injured in a road accident at Tirunelveli, Tamil Nadu on Friday, January 8, 2016 morning.
Please Wait while comments are loading...