ಈ ರೀತಿಯ ಬ್ಯಾಂಕ್ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣು, ತನಿಖೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬ್ಯಾಂಕ್ ಗಳಲ್ಲಿ ಅನುಮಾನಾಸ್ಪದ ಆರ್ಥಿಕ ವ್ಯವಹಾರಗಳ ಪ್ರಮಾಣದಲ್ಲಿ ವಿಪರೀತ ಏರಿಕೆ ಆಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿಯಲ್ಲಿ ಇದು ಬಹಿರಂಗವಾಗಿದೆ. 2015-16ರಲ್ಲಿ 61,361ರಷ್ಟಿದ್ದ ಇಂಥ ವ್ಯವಹಾರಗಳ ಸಂಖ್ಯೆ 2016-17ರ ವೇಳೆಗೆ 3.61 ಲಕ್ಷಕ್ಕೆ ಏರಿಕೆಯಾಗಿದೆ. 2014-15ರಲ್ಲಿ ಈ ಪ್ರಮಾಣ 45,858 ಇತ್ತು.

ಈಗಷ್ಟೇ ಹಣದ ಜತೆಗೆ ಮಾಲೀಕರನ್ನು ಗುರುತಿಸಲಾಗಿದೆ: ಜೇಟ್ಲಿ

2004ರಲ್ಲಿ ಆರಂಭಿಸಲಾದ ಆರ್ಥಿಕ ಗುಪ್ತಚರ ಇಲಾಖೆ ವಿಭಾಗವು ಯಾವ್ಯಾವ ವ್ಯವಹಾರಗಳು ಅನುಮಾನಾಸ್ಪದವಾದವು ಎಂಬ ಬಗ್ಗೆ ಒಂದು ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿನ ವಿವರಗಳು ಹೀಗಿವೆ.

10 banking transactions that could be suspicious: Here is the list

* ಸುಳ್ಳು ದಾಖಲೆ ಪತ್ರಗಳು, ಗುರುತಿನ ಪತ್ರಗಳನ್ನು ನಿಗದಿತ ಕಾಲಾವಧಿಯಲ್ಲಿ ಪರಿಶೀಲನೆ ಮಾಡದಿರುವುದು ಮತ್ತು ಅದಾಗಲೇ ಆರಂಭವಾದ ಸಂಸ್ಥೆಗಳ ಹೆಸರಿಗೆ ಹತ್ತಿರ ಇರುವಂತೆ ಖಾತೆಗಳನ್ನು ತೆರೆಯುವುದು.

* ಬಹಳ ಬ್ಯಾಂಕ್ ಖಾತೆಗಳಿಗೆ ಒಬ್ಬರೇ ಖಾತೆದಾರ ಇರುವುದು, ವಿವರಣೆಯೇ ಇಲ್ಲದಂತೆ ಹಲವು ಖಾತೆಗಳು ಹಣ ವರ್ಗಾವಣೆ ಮಾಡಿರುವುದು.

ಅಪನಗದೀಕರಣಕ್ಕೆ 'ಶಿಫಾರಸು' ಮಾಡಿದ ಆರ್ ಬಿಐಗೆ ನಾಚಿಕೆ ಆಗಬೇಕು: ಚಿದಂಬರಂ

* ಒಬ್ಬರೇ ಗ್ರಾಹಕರು ಪರ್ಯಾಯವಾಗಿ ಹಲವು ಖಾತೆಗಳನ್ನು ಬಳಕೆ ಮಾಡಿರುವುದು

* ಮುಂಚಿನ ವ್ಯವಹಾರಗಳಿಗೆ ಹೋಲಿಸಿದರೆ ಅನುಮಾನ ಮೂಡುವಷ್ಟು ಪ್ರಮಾಣದಲ್ಲಿ ವ್ಯವಹಾರ ಮಾಡಿರುವುದು

* ವರ್ಷಗಟ್ಟಲೆ ಯಾವುದೇ ಚಟುವಟಿಕೆ ಇಲ್ಲದ ಬ್ಯಾಂಕ್ ಖಾತೆಯಲ್ಲಿ ದಿಢೀರನೆ ವ್ಯವಹಾರ ನಡೆಸಿರುವುದು

* ವಿಧಿಸಿದ ಮಿತಿಗಿಂತ ಸ್ವಲ್ಪೇ ಸ್ವಲ್ಪ ಕಡಿಮೆ ಮೊತ್ತ ಜಮೆ, ವಿದೇಶಿ ಖಾತೆಗಳಿಂದ ಪಾವತಿಯಂತೆ ತೋರಿಸಿ ದೊಡ್ಡ ಮೊತ್ತದ ವರ್ಗಾವಣೆ

* ಆದಾಯದ ಮೂಲದ ಬಗ್ಗೆ ಅನುಮಾನಗಳಿದ್ದಲ್ಲಿ, ತಮ್ಮ ವ್ಯವಹಾರಕ್ಕೂ ನಡೆಸುತ್ತಿರುವ ಆರ್ಥಿಕ ಚಟುವಟಿಕೆಗೂ ತಾಳೆಯಾಗದಿದ್ದಲ್ಲಿ, ಗ್ರಾಹಕರ ಆರ್ಥಿಕ ಚೈತನ್ಯಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ಕಂಡುಬಂದಲ್ಲಿ

ನೋಟು ಮುದ್ರಣ ಸಂಸ್ಥೆಗಳಿಗೆ 577 ಕೋಟಿ ರು. ನಷ್ಟ!

* ಒಳಗಿನವರ ಕೈವಾಡದಿಂದಲೇ ವ್ಯವಹಾರ ನಡೆಸಿರುವುದು, ಮಾರುಕಟ್ಟೆ ವ್ಯವಹಾರ ಎಂದು ತಪ್ಪು ಲೆಕ್ಕ ತೋರಿಸಿದ್ದರೆ, ಅನುಮಾನ ಮೂಡಿಸುವಂಥ ಆಫ್ ಮಾರುಕಟ್ಟೆ ವ್ಯವಹಾರಗಳು

* ನಗದು ಮೂಲಕ ಅನುಮಾನ ಮೂಡುವ ಪ್ರಮಾಣದಲ್ಲಿ ಡಿಡಿ, ಎಫ್ ಡಿ ಅಥವಾ ಇನ್ಯಾವುದೇ ಡ್ರಾಫ್ಟ್ ಗಳ ಖರೀದಿ

ಇವೆಲ್ಲವನ್ನೂ ಅನುಮಾನಾಸ್ಪದ ಬ್ಯಾಂಕ್ ವ್ಯವಹಾರಗಳೆಂದು ಪರಿಗಣಿಸಲಾಗುತ್ತದೆ ಮತ್ತು ಆ ಬಗ್ಗೆ ತನಿಖೆ ಮಾಡುವ ಸಾಧ್ಯತೆಯಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Financial Intelligence Unit which was set up in 2004 has released a list in which it mentions the transactions that be considered suspicious by banks and other entities.Here is the list.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ