ಗೋವಾದಲ್ಲಿ ಸೇತುವೆ ಕುಸಿದು ಒಬ್ಬರು ಸಾವು, ಮೂವತ್ತು ಮಂದಿ ಕಣ್ಮರೆ

ಪಣಜಿ, ಮೇ 18: ದಕ್ಷಿಣ ಗೋವಾದಲ್ಲಿ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣವಾಗಿದ್ದ ಸೇತುವೆಯೊಂದು ಗುರುವಾರ ಸಂಜೆ ಕುಸಿದು ಬಿದ್ದು, ಒಬ್ಬರು ಮೃತಪಟ್ಟು, ಮೂವತ್ತು ಮಂದಿ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ನೌಕಾಸೇನೆಯು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇನ್ನು ಈ ಘಟನೆ ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಸಿಎಂ ಮನೋಹರ್ ಪರಿಕ್ಕರ್ ಜತೆಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. ಒಂಬತ್ತು ಮಂದಿ ಡೈವರ್ಸ್ ಹಾಗೂ ಜೆಮಿನಿ ದೋಣಿ ಹಾಗೂ ಸಲಕರಣೆಗಳೊಂದಿಗೆ ಘಟನೆ ನಡೆದ ದಕ್ಷಿಣ ಗೋವಾದ ಕರ್ ಕೊರೆಮ್ ಗೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಭಾರತೀಯ ನೌಕಾ ಸೇನೆಯ ಟ್ವೀಟ್ ನಲ್ಲಿ ತಿಳಿಸಲಾಗಿದೆ.

1 Dead, 30 Missing As Bridge Collapses In Goa

ಇನ್ನು ಅಗ್ನಿ ಶಾಮಕ ದಳ ಹಾಗೂ ತುರ್ತು ಕಾರ್ಯಾಚರಣೆಯ ಅಧಿಕಾರಿಗಳು ಕಣ್ಮರೆಯಾದವರ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಸೇತುವೆ ಕುಸಿತ ಘಟನೆಯಲ್ಲಿ ಕಣ್ಮರೆಯಾದವರು ಶೀಘ್ರ ಪತ್ತೆಯಾಗಲಿ, ಪರಿಹಾರ ಕಾರ್ಯಾಚರಣೆ ಯಶಸ್ವಿಯಾಗಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+