ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಕ್ಯಾಟರಿಂಗ್ ಪಟ್ಟಿಗೆ ಸಾವಿರಾರು ರೈಲುಗಳು ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಜೂ.11: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ನೀಡುವ ಇ ಕ್ಯಾಟರಿಂಗ್ ಸೇವೆ ಜನಪ್ರಿಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ರೈಲುಗಳನ್ನು ಈ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗಿದೆ.

ಇನ್ನೂ 1,144 ರೈಲುಗಳಿಗೆ ತನ್ನ ಇ-ಕ್ಯಾಟರಿಂಗ್ ಸೇವೆಯನ್ನು ವಿಸ್ತರಿಸಿದೆ. ಈ ಸೇವೆಯಲ್ಲಿ ಪ್ರಯಾಣಿಕರು ಆನ್‌ಲೈನ್ ಅಥವಾ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿದರೆ ಪ್ರಮುಖ ಆಹಾರ ಪೂರೈಕೆದಾರರಿಂದ ಅವರ ಇಷ್ಟದ ಆಹಾರವನ್ನು ಅವರ ಸೀಟಿಗೆ ತಲುಪಿಸಲಾಗುತ್ತದೆ. ಸದ್ಯಕ್ಕೆ 201ಕ್ಕೂ ಅಧಿಕ ರೈಲುಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.

1,144 more trains join the IRCTC e-catering service list

ಈ ಸೇವೆಯಡಿ ಪ್ರಯಾಣಿಕರಿಗೆ ಮಿತ ಬೆಲೆ, ಉತ್ಕೃಷ್ಟ ದರ್ಜೆಆಹಾರವನ್ನು ಪೂರೈಸಲಾಗುವುದು. 'ಜನ್ ಆಹಾರ್' ಪೂರೈಸುವ ಮಿತದರದ ಆಹಾರವನ್ನು ಒದಗಿಸಲಾಗುವುದು. ಅದೇ ವೇಳೆ, ಡೋಮಿನೋಸ್ ಮತ್ತು ಬಿಕಾನೆರ್‌ವಾಲ ಮುಂತಾದ ದೊಡ್ಡ ಕಂಪೆನಿಗಳ ಆಹಾರವನ್ನೂ ಪ್ರಯಾಣಿಕರಿಗೆ ತಲುಪಿಸಲಾಗುತ್ತದೆ.

ನಿರ್ದಿಷ್ಟ ನಿಲ್ದಾಣಕ್ಕೆ ರೈಲು ತಲುಪುವ ಕನಿಷ್ಠ ಎರಡು ಗಂಟೆಗಳ ಮೊದಲು ಕನಿಷ್ಠ 60 ರು. ಬೆಲೆಯ ಆಹಾರಕ್ಕೆ ಬೇಡಿಕೆ ಸಲ್ಲಿಸಬೇಕು. ಒಂದು ವೇಳೆ ರೈಲುಗಳು ವಿಳಂಬವಾದರೆ ಹಾಗೂ ಆಹಾರ ವಿತರಣೆ ನಿಲ್ದಾಣಕ್ಕೆ ಸೇವಾ ಅವಧಿ (ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ)ಗೆ ಹೊರತಾದ ಸಮಯದಲ್ಲಿ ತಲುಪಿದರೆ ಆಹಾರ ಪೂರೈಕೆಯ ಖಾತರಿ ನೀಡಲಾಗುವುದಿಲ್ಲ. ಆಹಾರ ನೀಡಲು ಸಾಧ್ಯವಾಗದಿದ್ದರೆ, ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ಐಆರ್ ಸಿಟಿಸಿ ಪ್ರಕಟಿಸಿದೆ.

English summary
The Indian Railway Catering and Tourism Corporation (IRCTC) will extend its e-catering service to 1,144 more trains. The service, which allows passengers to get their favourite food from leading food chains, is currently available in 201 trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X