• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೆಲಂಗಾಣದಲ್ಲಿ ಸಿಎಂ ಯಡಿಯೂರಪ್ಪ ಟೆಂಪಲ್ ರನ್

|
   ತೆಲಂಗಾಣದಲ್ಲಿ ಟೆಂಪಲ್ ರನ್ ಶುರು ಮಾಡಿದ ಬಿ ಎಸ್ ಯಡಿಯೂರಪ್ಪ

   ಹೈದರಾಬಾದ್, ಆಗಸ್ಟ್‌ 01: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೆಲವು ದೇವಾಲಯಗಳಿಗಷ್ಟೆ ಭೇಟಿ ಕೊಟ್ಟಿರುವ ಯಡಿಯೂರಪ್ಪ ಅವರು ನಾಳೆ ತೆಲಂಗಾಣದಲ್ಲಿ ಟೆಂಪಲ್ ರನ್ ಮಾಡಲಿದ್ದಾರೆ.

   ಇಂದು ಸಂಜೆ ವೇಳೆಗೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಯಡಯೂರಪ್ಪ ಅವರು ಸಭೆ ಮುಗಿಸಿಕೊಂಡು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ ತಲುಪಿದ್ದಾರೆ.

   ನಗರ, ಪುರಸಭೆ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತರ ನೇಮಕಾತಿ ರದ್ದು ನಗರ, ಪುರಸಭೆ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತರ ನೇಮಕಾತಿ ರದ್ದು

   ನಾಳೆ ಅವರು ಚಿನ್ನ ಜೀಯರ್ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ. ಜೀಯರ್ ಆಶ್ರಮದಲ್ಲಿ ನಾಳೆ ವಿಶೇಷ ಹೋಮ-ಹವನದಲ್ಲಿಯೂ ಅವರು ಭಾಗಿಯಾಗಲಿದ್ದಾರೆ.

   ಚಿನ್ನ ಜೀಯರ್ ಸ್ವಾಮೀಜಿ ಅವರು ತೆಲಂಗಾಣ, ಆಂಧ್ರಪ್ರದೇಶದಲ್ಲಿ ಖ್ಯಾತ ಸ್ವಾಮೀಜಿ ಅವರಾಗಿದ್ದು, ತೆಲಂಗಾಣ ಸಿಎಂ ಕೆಸಿಆರ್ , ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಎಲ್ಲರೂ ಆಗಾಗ್ಗೆ ಅವರನ್ನು ಭೇಟಿ ಮಾಡಿ ಆಶೀರ್ವಾದ, ಸಲಹೆಗಳನ್ನು ಕಾಲ-ಕಾಲಕ್ಕೆ ಪಡೆಯುತ್ತಿರುತ್ತಾರೆ.

   ಮಹಿಳೆಯ ಹೃದಯ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ ಯಡಿಯೂರಪ್ಪ ಮಹಿಳೆಯ ಹೃದಯ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ ಯಡಿಯೂರಪ್ಪ

   ಚಿನ್ನ ಜಿಯರ್ ಅವರ ಆಶ್ರಮದಲ್ಲಿ ಹೋಮ-ಹವನದ ನಂತರ ಯಡಿಯೂರಪ್ಪ ಅವರು ಅಲ್ಲಿಂದ ಭದ್ರಾಚಲಂ ನ ಸೀತಾರಾಮ ದರ್ಶನ ಪಡೆಯಲಿದ್ದಾರೆ. ನಂತರ ಹೈದರಾಬಾದ್‌ಗೆ ಮರಳಿ ಅಲ್ಲಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

   ಯಡಿಯೂರಪ್ಪ ಅವರು ಸಿಎಂ ಆದ ನಂತರ ಸ್ಥಳೀಯ ಕೆಲವು ದೇವಾಲಯಗಳಿಗಷ್ಟೆ ಭೇಟಿ ನೀಡಿದ್ದರೇ ಹೊರತು ಯಾವುದೇ ಪ್ರಮುಖ ದೇವಾಲಯಗಳಿಗಾಗಲಿ ಭೇಟಿ ನೀಡಿಲ್ಲ, ಆದರೆ ಹಠಾತ್ತನೆ ಚಿನ್ನ ಜಿಯರ್ ಅವರನ್ನು ಭೇಟಿ ಆಗಲು ಹೊರಟಿದ್ದು ಆಶ್ಚರ್ಯ ಮೂಡಿಸಿದೆ.

   English summary
   Karnataka CM Yeddiyurappa visiting Chinna Jeeyar swamy in Telangana tomorrow. He will visit Badrachalam temple also.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X