ಕೆಲಸ ಹೋಗುತ್ತೆ ಎನ್ನುವ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ
ಹೈದರಾಬಾದ್, ನವೆಂಬರ್ 21: ಕೆಲಸ ಹೋಗುತ್ತೆ ಎನ್ನುವ ಭಯಕ್ಕೆ ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹರಿಣಿ(24) ಮೃತ ಟೆಕ್ಕಿ, ಆವರು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಹಲವರನ್ನು ಕೆಲಸದಿಂದ ತೆಗೆದು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದರು, ಅಲ್ಲಿದ್ದ ಶಾರ್ಟ್ ಲಿಸ್ಟ್‌ನಲ್ಲಿ ಆಕೆಯ ಹೆಸರನ್ನು ನೋಡಿ ಬೇಸರಗೊಂಡಿದ್ದಳು.
ಬಳಿಕ ಹಾಸ್ಟೆಲ್‌ಗೆ ಬಂದವಳೇ ಸೀಲಿಂಗ್ ಫ್ಯಾನ್‌ಗೆ ನೇಣುಹಾಕಿಕೊಂಡಿದ್ದಾಳೆ. ಈ ಘಟನೆ ರಾಯ್‌ದುರ್ಗಂ ಪ್ರದೇಶದಲ್ಲಿ ನಡೆದಿದೆ.ಶಾರ್ಟ್‌ಲಿಸ್ಟ್‌ನಲ್ಲಿ ತನ್ನ ಹೆಸರು ಇದ್ದಿದ್ದು, ಅದರಿಂದ ತನ್ನ ಮನಸ್ಸಿಗೆ ನೋವಾಗಿದೆ ಎಂದು ಸಹೋದರನ ಬಳಿ ಹೇಳಿಕೊಂಡಿದ್ದಳು ಎಂದು ತಿಳಿದಬಂದಿದೆ.

ತಕ್ಷಣವೇ ಆಕೆ ಏನಾದರೂ ಮಾಡಿಕೊಂಡುಬಿಟ್ಟರೆ ಎನ್ನುವ ಆತಂಕದಿಂದಲೇ ಹಾಸ್ಟೆಲ್‌ಗೆ ಕುಟುಂಬದವರು ಹೋಗಿದ್ದಾರೆ. ಅಷ್ಟರೊಳಗೆ ಆಕೆ ಕೊನೆಯುಸಿರೆಳೆದಿದ್ದಳು. ಡೆತ್ ನೋಟ್ ಕೂಡ ದಪರೆತಿದ್ದು, ಅದರಲ್ಲಿ ಆಕೆಯು ತನ್ನ ಅಂಗಗಳನ್ನು ದಾನ ಮಾಡಿ ಎಂದು ಬರೆದಿದ್ದಾಳೆ ಎನ್ನುವುದು ತಿಳಿದುಬಂದಿದೆ.
ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ದೂರು ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications