ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಿನ್ನತೆ, ಆತ್ಮಹತ್ಯೆ ವಿರುದ್ಧ ಸಮರ ಸಾರಿದ್ದ ಮಹಿಳಾ ಬೈಕರ್ ಸನಾ ದುರಂತ ಅಂತ್ಯ

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 25: ಬೈಕ್ ಸವಾರಿ ಮಾಡುತ್ತಲೇ ಖಿನ್ನತೆ ಮತ್ತು ಆತ್ಮಹತ್ಯೆಯ ಕುರಿತು ಜಾಗೃತಿ ಮೂಡಿಸುತ್ತಿದ್ದ ಸನಾ ಇಕ್ಬಾಲ್(29) ವಾಹನಾಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಅ.24 ರಂದು ಬೆಳಗ್ಗಿನ ಜಾವ 3:30 ರ ಸಮಯದಲ್ಲಿ ಪತಿ ಅಬ್ದುಲ್ ನದೀಮ್ ಅವರೊಂದಿಗೆ ಕಾರಿನಲ್ಲಿ ಹೈದರಾಬಾದ್ ಔಟ್ ಸ್ಕರ್ಟ್ ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿ, ತಲೆಗೆ ಜೋರಾಗಿ ಏಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪತಿ ನದೀಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Woman biker, activist Sana Iqbal dies in car accident

ಆಡು ಮುಟ್ಟದ ಸೊಪ್ಪಿಲ್ಲ' ಮಂಗ್ಳೂರಿನ ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ ಆಡು ಮುಟ್ಟದ ಸೊಪ್ಪಿಲ್ಲ' ಮಂಗ್ಳೂರಿನ ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ

ಮೂಲತಃ ಹೈದರಾಬಾದಿನ ಮನಶ್ಶಾಸ್ತ್ರಜ್ಞದ ವಿದ್ಯಾರ್ಥಿಯಾಗಿದ್ದ ಸನಾ ಸ್ವತಃ ಖಿನ್ನತೆಯಿಂದ ಬಳಲಿದವರಾಗಿದ್ದರು. ಖಿನ್ನತೆಯಿಂದ ಹೊರಬಂದ ನಂತರ ತಮ್ಮ ಬುಲೆಟ್ ನಲ್ಲಿ ಇಡೀ ದೇಶವನ್ನೂ ಸುತ್ತುತ್ತ ಖಿನ್ನತೆ ಮತ್ತು ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಕಳೆದ ಆರೂವರೆ ತಿಂಗಳಿನಲ್ಲಿ 38,000 ಕಿ.ಮೀ. ಸಂಚರಿಸಿ ಖಿನ್ನತೆಗೊಳಗಾದವರಿಗೆ ಆಪ್ತಸಲಹೆ ನೀಡಿದ್ದರು.

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂದು ತಮ್ಮ ಬೈಕ್ ನ ಹಿಂದೆ ಪ್ಲೆಕಾರ್ಡ್ ನಲ್ಲಿ ಬರೆದುಕೊಂದಿದ್ದ ಇವರು ಹಲವು ಯುವತಿಯರಿಗೆ ಮಾದರಿಯಾಗಿದ್ದರು. ಇವರ ಅಗಲಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ವ್ಯಕ್ತವಾಗಿದ್ದು, ಟ್ವಿಟ್ಟರ್ ನಲ್ಲಿ ಸನಾ ಇಕ್ಬಾಲ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಆತ್ಮಹತ್ಯೆ ಪರಿಹಾರವಲ್ಲ!

ದೇಶದಾತ್ಯಂತ ತಮ್ಮ ಬುಲೆಟ್ ನಲ್ಲಿ ಸುತ್ತುತ್ತ ಖಿನ್ನತೆಯಿಂದ ಹೊರಬರುವುದಕ್ಕೆ ಆಪ್ತ ಸಲಹೆ ನೀಡುತ್ತಿದ್ದ ಸನಾ, ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂದು ಜನರಲ್ಲಿ ಸ್ಫೂರ್ತಿ ತುಂಬುತ್ತಿದ್ದರು. ಅಷ್ಟೇ ಅಲ್ಲ, ಫೇಸ್ ಬುಕ್ ಪೇಜ್ ಮೂಲಕ ಖಿನ್ನತೆಯಿಂದ ಬಳಲುತ್ತಿರುವವರಿಗೆ ಆಪ್ತಸಲಹೆ ನೀಡುತ್ತಿದ್ದರು.

Array

ವೈಯಜ್ತಿಕ ಜೀವನ

ಸನಾ ಇಕ್ಬಾಲ್ 1987 ಜನವರಿ 16 ರಂದು ಹೈದರಾಬಾದಿನಲ್ಲಿ ಜನಿಸಿದರು. ಹೈದರಾಬಾದಿನ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಸನಾಗೆ ಚಿಕ್ಕ ವಯಸ್ಸಿನಿಂದಲೂ ಬೈಕ್ ಚಾಲನೆ ಅಂದರೆ ಎಲ್ಲಿಲ್ಲದ ಪ್ರೀತಿ. ಸನಾ ಸ್ವತಃ ಖಿನ್ನತೆಯಿಂದ ಬಳಲುತ್ತಿದ್ದವರು. ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು ಕೂಡ. ನಂತರ ಬದುಕನ್ನು ಪ್ರೀತಿಸುವುದನ್ನು ಕಲಿತರೆ ಮಾತ್ರ ಖಿನ್ನತೆಯಿಂದ ಹೊರಬಂದು ಸುಂದರ ಬದುಕು ಕಾಣುವುದಕ್ಕೆ ಸಾಧ್ಯ ಎಂಬುದನ್ನು ಅರಿತ ಅವರು ಬೈಕ್ ರೈಡ್ ಮೂಲಕ ಇಡೀ ದೇಶದ ಯುವಕರಲ್ಲೂ ಸ್ಫೂರ್ತಿ ಬಿತ್ತುವುದಕ್ಕೆ ತೊಡಗಿದರು.

Array

ಕಂಬನಿ ಮಿಡಿಯಿತು ದೇಶ

ಯುವಕರ ಸ್ಫೂರ್ತಿ ಚಿಲುಮೆಯಾಗಿದ್ದ ಸನಾ ದುರಂತ ಸಾವಿಗೆ ಅವರ ನೂರಾರು ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಸನಾ ಇಕ್ಬಾಲ್ ಟ್ರೆಂಡಿಂಗ್ ಆಗಿದೆ.

ದೇವರು ಅದೃಷ್ಟವಂತ!

ಸನಾ ಇಕ್ಬಾಲ್ ಅವರದು ಶುದ್ಧ ಮತ್ತು ಸ್ಫೂರ್ತಿ ತುಂಬುವ ಆತ್ಮ. ಆಕೆಯನ್ನು ಬೇಗನೇ ಕರೆಸಿಕೊಂಡ ದೇವರು ಅದೃಷ್ಟವಂತ. ನಿಮ್ಮನ್ನು ನಾವೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಅನುಷ್ಕಾ ಝೋಟಾ ಎನ್ನುವವರು ಟ್ವೀಟ್ ಮಾಡಿ ತಮ್ಮ ನೋವನ್ನು ಹೊರಹಾಕಿದ್ದಾರೆ.

English summary
Cross country woman bike rider Sana Iqbal, who had taken up the fight against suicide and depression by spreading awareness through her bike rides, died in a car accident on Oct 24 in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X