ಈ ಕಾಲೇಜಿನಲ್ಲಿ ಶಾರ್ಟ್ಸ್, ಸ್ಲೀವ್ ಲೆಸ್, ಜೀನ್ಸ್ ಧರಿಸೋದು ನಿಷೇಧ

ಹೈದರಾಬಾದ್, ಸೆ. 15: ಇಲ್ಲಿನ ಪ್ರತಿಷ್ಠಿತ ಕಾಲೇಜಾದ ಸೈಂಟ್ ಫ್ರಾನ್ಸಿನ್ಸ್ ಕಾಲೇಜ್ ಫಾರ್ ವುಮೆನ್ಸ್ ನಲ್ಲಿ ಇತ್ತೀಚೆಗೆ ಹೊರಡಿಸಿರುವ ವಸ್ತ್ರ ಸಂಹಿತೆ ವಿರುದ್ಧ ವಿದ್ಯಾರ್ಥಿನಿಯರು ತಿರುಗಿ ಬಿದ್ದಿದ್ದಾರೆ. ಶಾರ್ಟ್ಸ್, ಸ್ಲೀವ್ ಲೆಸ್, ಜೀನ್ಸ್ ಧರಿಸಿ ಕ್ಯಾಂಪಸ್ಸಿನಲ್ಲಿ ಅಡ್ಡಾಡುವಂತಿಲ್ಲ ಎಂಬ ಹೊಸ ನಿಯಮ ಜಾರಿಗೆ ತರಲಾಗಿದೆ.

ಆಗಸ್ಟ್ 01ರಿಂದಲೇ ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಈ ಕುರಿತಂತೆ ಪ್ರಕಟಣೆ ಹಾಕಿದ್ದರೂ ಯಾರೂ ನಿಯಮ ಪಾಲಿಸಿರಲಿಲ್ಲ. ಆದರೆ, ಈ ತಿಂಗಳಿನಲ್ಲಿ ಡ್ರೆಸ್ ಕೋಡ್ ಕಡ್ಡಾಯಗೊಳಿಸಿದ್ದಲ್ಲದೆ, ನಿಯಮ ಮೀರಿದವರನ್ನು ತರಗತಿಯಲ್ಲಿ ಕೂರಿಸುತ್ತಿಲ್ಲ.

Wear ‘long kurtis’ for good marriage proposals, Hyderabad college bans shorts

"ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಲದಲ್ಲಿ ಇಂಥ ಸಮಾಜ ವಿರೋಧಿ ವಸ್ತ್ರ ಸಂಹಿತೆಯನ್ನು ನಾವು ವಿರೋಧಿಸುತ್ತೇವೆ" ಎಂದು ವಿದ್ಯಾರ್ಥಿನಿಯೊಬ್ಬರು ವಿಡಿಯೋ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇದೇ ಕಾಲೇಜಿನ ಹಳೆ ವಿದ್ಯಾರ್ಥಿನಿ ಜನೋಬಿಯಾ ತಂಬಿ ಅವರು ತಮ್ಮ ಕಾಲೇಜಿನ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸುದೀರ್ಘವಾದ ಲೇಖನ, ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸೆಪ್ಟೆಂಬರ್ 16ರಂದು ಕಾಲೇಜಿನ ಗೇಟ್ ಮುಂದೆ ನಿಂತು ಪ್ರತಿಭಟಿಸೋಣ ಎಂದು ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+