• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ತೊರೆದ ವಿಜಯಶಾಂತಿ ಬಿಜೆಪಿ ಸೇರಲು ಮುಹೂರ್ತ ಫಿಕ್ಸ್

|

ಹೈದರಾಬಾದ್, ಡಿ. 6: ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿದ್ದ ಲೇಡಿ ಸೂಪರ್ ಸ್ಟಾರ್ ಕಮ್ ರಾಜಕಾರಣಿ ವಿಜಯಶಾಂತಿ ಅವರು ದಿಢೀರ್ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸೋಮವಾರ(ಡಿ.7) ಅಧಿಕೃತವಾಗಿ ಬಿಜೆಪಿ ಸೇರಲು ಮುಹೂರ್ತ ನಿಗದಿಯಾಗಿದೆ ಎಂಬ ಸುದ್ದಿ ಬಂದಿದೆ.

ವಿಜಯಶಾಂತಿ ಸೇರ್ಪಡೆಯಿಂದ ಹೈದರಾಬಾದ್ ಪಾಲಿಕೆ ಚುನಾವಣೆ ಅಷ್ಟೇ ಅಲ್ಲದೆ ಮುಂಬರುವ ತಮಿಳುನಾಡು ಚುನಾವಣೆಯಲ್ಲೂ ಪಕ್ಷಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ಎಣಿಕೆ ಮಾಡಿದೆ. ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ವಿಜಯಶಾಂತಿ ಅವರು ಬಿಜೆಪಿ ಸೇರಲಿದ್ದಾರೆ. ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಸೇರಿದಂತೆ ಹಿರಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಾಗಿರುತ್ತಾರೆ.

ಇತ್ತೀಚೆಗೆ ನಡೆದ ದುಬ್ಬಾಕ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿ ಅಚ್ಚರಿಯ ಗೆಲುವು ದಾಖಲಿಸಿತ್ತು. ನಂತರ ಭಾರಿ ಕುತೂಹಲ ಕೆರಳಿಸಿದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಫಲಿತಾಂಶ ನೀಡಿ ಎರಡನೇ ಸ್ಥಾನಕ್ಕೇರಿದೆ.

ಕಾಂಗ್ರೆಸ್ ಬದಲು ಬಿಜೆಪಿ ಪರ ಪ್ರಚಾರ

ಕಾಂಗ್ರೆಸ್ ಬದಲು ಬಿಜೆಪಿ ಪರ ಪ್ರಚಾರ

2014ರಲ್ಲಿ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ವಿಜಯಶಾಂತಿ ಅವರು ಇದಕ್ಕೂ ಮುನ್ನ ಟಿಆರ್ ಎಸ್ ನ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರ ಬೆಂಬಲವಾಗಿ ನಿಂತಿದ್ದರು. 2018ರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಜಯ್ ಶಾಂತಿ ಅವರನ್ನು ಸ್ಟಾರ್ ಪ್ರಚಾರಕಿಯಾಗಿ ನೇಮಕ ಮಾಡಿದರು ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾವಣಾ ಪ್ರಚಾರದ ಸಲಹಾಗಾರ್ತಿಯಾಗಿದ್ದರು. ಈ ಬಾರಿ ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗುತ್ತಾರೆ ಎಂದು ವರದಿ ಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಪರ ಜೈಕಾರ ಹಾಕಿದ್ದರು.

ಬಿಜೆಪಿ, ಟಿಆರ್ ಎಸ್,ಕಾಂಗ್ರೆಸ್ ನಂತರ ಬಿಜೆಪಿ

ಬಿಜೆಪಿ, ಟಿಆರ್ ಎಸ್,ಕಾಂಗ್ರೆಸ್ ನಂತರ ಬಿಜೆಪಿ

1997ರಲ್ಲಿ ಬಿಜೆಪಿ ಪರ ಇದ್ದ ಲೇಡಿ ಅಮಿತಾಬ್ ವಿಜಯಶಾಂತಿ ಅವರು ಆಂಧ್ರಪ್ರದೇಶ ವಿಭಜನೆಯಾದ ಬಳಿಕ ತೆಲಂಗಾಣ ರಾಜ್ಯ ಉದಯವಾಗಿದ್ದನ್ನು ಸ್ವಾಗತಿಸಿ ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಕೆಸಿಆರ್ ಪರ ಬೆಂಬಲ ವ್ಯಕ್ತಪಡಿಸಿದ್ದರು. 2009 ರಿಂದ 2014ರ ತನಕ ಮೇದಕ್ ಸಂಸದೆಯಾಗಿದ್ದರು. ಆದರೆ, ಮೇದಕ್ ನಿಂದ ವಿಧಾನಸಭೆಗೆ ಸ್ಪರ್ಧಿಸಿ, ಸೋಲು ಕಂಡಿದ್ದರು. ನಂತರ ಟಿಆರ್ ಎಸ್ ತೊರೆದು ಕಾಂರ್ಗೆಸ್ ಸೇರಿದ್ದರು.

ಸೆಲೆಬ್ರಿಟಿಗಳನ್ನು ಸೆಳೆಯುತ್ತಿರುವ ಬಿಜೆಪಿ

ಸೆಲೆಬ್ರಿಟಿಗಳನ್ನು ಸೆಳೆಯುತ್ತಿರುವ ಬಿಜೆಪಿ

ನಟಿ ಕಮ್ ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜನ ಸೇನಾ ಪಕ್ಷದ ಪವನ್ ಕಲ್ಯಾಣ್ ಅವರು ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ನೆರವಾಗಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ವಿಜಯಶಾಂತಿ ಸೇರ್ಪಡೆಯಿಂದ ಬಿಜೆಪಿ ತಾರಾಬಲ ಹೆಚ್ಚಾಗಲಿದೆ. ಆಂಧ್ರ, ತೆಲಂಗಾಣ ಅಲ್ಲದೆ ತಮಿಳುನಾಡಿನಲ್ಲೂ ಆಕೆ ಜನಪ್ರಿಯತೆ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಫೈರ್ ಬ್ರ್ಯಾಂಡ್ ನಾಯಕಿ

ಫೈರ್ ಬ್ರ್ಯಾಂಡ್ ನಾಯಕಿ

ಅದಾನಿ, ಅಂಬಾನಿ ಅವರಂತಹ ಬಂಡವಾಳಶಾಹಿಗಳ ಬೆನ್ನಿಗೆ ಮೋದಿ ನಿಂತಿದ್ದಾರೆ. ಅಚ್ಛೇದಿನ್ ಹೆಸರಿನಲ್ಲಿ ರೈತರು, ಕಾರ್ಮಿಕರನ್ನು ಮತ್ತು ಬಡವರನ್ನು ವಂಚಿಸುತ್ತಿದ್ದಾರೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಂತಹವರು ಲೂಟಿ ಮಾಡುತ್ತಿದ್ದರೂ ಸುಮ್ಮನಿದ್ದಾರೆ. ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಒಂದೇ ನಾಣ್ಯದ ಎರಡು ಮುಖಗಳು. ಮೋದಿ ದೊಡ್ಡ ಕಳ್ಳ, ಕೆಸಿಆರ್ ಚಿಕ್ಕ ಕಳ್ಳ. ಆತ ಮಾಯದ ಮಾತುಗಳನ್ನಾಡುವ ಜನರನ್ನು ಮೋಸಗೊಳಿಸುತ್ತಾನೆ ಎಂದು ಏಕ ವಚನದಲ್ಲಿ ಹಿರಿಯ ನಾಯಕರನ್ನು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರಕ್ಕೆ ಬಂದಾಗ ಭಾಷಣ ಮಾಡಿದ್ದರು.

English summary
Actor Vijayashanthi has quit the Congress and will join the Bharatiya Janata Party (BJP) on Monday soruces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X