ಹೈದರಾಬಾದ್ ಆತ್ಮಹತ್ಯೆ ಪ್ರಕರಣ: ಹಾಸ್ಯ ನಟನ ಪತ್ನಿ ಪೊಲೀಸರಿಗೆ ಶರಣು

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 28: ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವಿಜಯ್‌‌ ಸಾಯಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಸಾಯಿ ಪತ್ನಿ ವನಿತಾ ರೆಡ್ಡಿ ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಪತ್ನಿ ಹಾಗೂ ಇನ್ನಿಬ್ಬರ ವಿರುದ್ದ್ಧ ವಿರುದ್ಧ ಜ್ಯುಬಿಲಿ ಹಿಲ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

Tollywood comedian Vijay Sai's wife Vanitha Reddy surrenders

ಬುಧವಾರದಂದು ವನಿತಾ ರೆಡ್ಡಿ ಅವರು ಠಾಣೆಗೆ ಬಂದು ಶರಣಾಗಿದ್ದು, ವಿಜಯ್ ಸಾಯಿ ಕುಟುಂಬದ ವಿರುದ್ಧ ದೈಹಿಕ, ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಪೂರ್ಣಚಂದ್ರ ಹೇಳಿದರು.

ಯೂಸಫ್‌ಗುಡನಲ್ಲಿರುವ ತಮ್ಮ ಅಪಾರ್ಟ್‌‌ಮೆಂಟ್‌ನಲ್ಲಿ ಸೋಮವಾರದಂದು ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿಜಯ್ ದೇಹ ಪತ್ತೆಯಾಗಿತ್ತು.

ಆತ್ಯಹತ್ಯೆಗೂ ಮುನ್ನ ತಮ್ಮ ಮೊಬೈಲ್‌ ಮೂಲಕ ಸೆಲ್ಫಿ ವಿಡಿಯೋ ಮಾಡಿದ್ದರು. ತಮ್ಮ ಈ ನಿರ್ಧಾರಕ್ಕೆ ಪತ್ನಿ ವನಿತಾ ಮತ್ತಿಬ್ಬರು ಕಾರಣ ಎಂದು ಆರೋಪಿಸಿದ್ದರು. ಈ ವಿಡಿಯೋ ಆಧಾರದ ಮೇಲೆ, ವನಿತಾ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 306 ಪ್ರಕರಣ ದಾಖಲಾಗಿತ್ತು.

ಆದರೆ, ಆರೋಪ ನಿರಾಕರಿಸಿದ್ದ ವನಿತಾ, ವಿಜಯ್ ಸಾಯಿ ಅವರು ಬೇರೊಬ್ಬ ಹೆಂಗಸಿನ ಜತೆ ಇರುವ ಖಾಸಗಿ ಚಿತ್ರಗಳನ್ನು ಬಹಿರಂಗ ಮಾಡಿದ್ದರು.

ವಿಜಯ್‌ ಸಾಯಿ ಪತ್ನಿ ವನಿತಾ, ನಿರ್ದೇಶಕ ಶಶಿಧರ್ ಹಾಗೂ ವಕೀಲ ಶ್ರೀನಿವಾಸ್ ವಿರುದ್ಧ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.

'ಬೊಮ್ಮರಿಲ್ಲು', 'ಅಮ್ಮಾಯಿಲು ಅಬ್ಬಾಯಿಲು' ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಜಯ್ ಅಭಿನಯಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vanitha Reddy, wife of Tollywood comedian Vijay Sai, who committed suicide earlier this month, surrendered before the Jubilee Hills police

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ