ತಿರುಪತಿ ದೇವಾಲಯದಲ್ಲಿ ಕೆಲಸ ಕಳೆದುಕೊಂಡ 1,300 ಕಾರ್ಮಿಕರು
ಅಮರಾವತಿ, ಮೇ 2: ಲಾಕ್ಡೌನ್ನಿಂದ ಸಾಕಷ್ಟು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಕಂಪನಿಗಳು ಮಾತ್ರವಲ್ಲದೆ, ತಿರುಪತಿ ದೇವಲಯದಲ್ಲಿಯೂ 1,300 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.
Recommended Video
ಕೆಲಸ ಕಳೆದುಕೊಂಡ 1,300 ಕಾರ್ಮಿಕರು ತಿರುಪತಿ ದೇವಾಲಯದಲ್ಲಿ ನೈರ್ಮಲ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಪ್ಪಂದದ (ಕಾಂಟ್ರಾಕ್ಟ್) ಆಧಾರದಲ್ಲಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕಾಂಟ್ರಾಕ್ಟ್ ಏಪ್ರಿಲ್ 30ಕ್ಕೆ ಮುಗಿದಿದೆ. ಈಗ ಈ ಕಾರ್ಮಿಕರ ಕಾಂಟ್ರಾಕ್ಟ್ ರಿನಿವಲ್ ಮಾಡದೆ ಇರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.
ಏಪ್ರಿಲ್ 30ಕ್ಕೆ ಕಾಂಟ್ರಾಕ್ಟ್ ಮುಗಿದಿದ್ದು, ಮೇ 1 ರಿಂದ ಕೆಲಸಕ್ಕೆ ಬರದೆ ಇರಲು ತಿಳಿಸಲಾಗಿದೆ. ಖಾಯಂ ಕಾರ್ಮಿಕರು ಹಾಗೂ ಸಿಬ್ಬಂದಿಗಳ ಕೆಲಸ ಹಾಗೆ ಉಳಿದುಕೊಂಡಿದೆ. ಮಾರ್ಚ್ 20 ರಂದು ಲಾಕ್ಡೌನ್ ಘೋಷಣೆ ಆಗಿದ್ದು, ಆ ದಿನದಿಂದ ಎಲ್ಲ ಸಿಬ್ಬಂದಿಗಳಿಗೂ ರಜೆ ನೀಡಲಾಗಿದೆ.

ಕಾರ್ಮಿಕರು ಈ ಕಠಿಣ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೇಳುಕೊಂಡಿದ್ದಾರೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿ ಕಾಂಟ್ರಾಕ್ಟ್ ಮುಂದುವರೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.
ವರದಿಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಟಿಟಿಡಿಯ ಬಜೆಟ್ 3,309 ಕೋಟಿ ರೂಪಾಯಿ ಆಗಿತ್ತು. ಇದು ಫೆಬ್ರವರಿಯಲ್ಲಿ ಅಂತಿಮಗೊಳಿಸಿತ್ತು. ಆದರೆ, COVID-19 ಪರಿಸ್ಥಿತಿಯ ಕಾರಣದಿಂದಾಗಿ ಇದನ್ನು ಬದಲು ಮಾಡುವ ಸಾಧ್ಯತೆ ಇದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications