• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿರುಚಾನೂರು ಪದ್ಮಾವತಿ ಕಾರ್ತಿಕ ಬ್ರಹ್ಮೋತ್ಸವ

By Mahesh
|

ತಿರುಮಲ, ನ.24: ನವರಾತ್ರಿಯ ಸಂದರ್ಭದಲ್ಲಿ ನಡೆಸಲಾಗುವ ತಿರುಪತಿ ತಿಮ್ಮಪ್ಪನ ವಾರ್ಷಿಕ 'ಬ್ರಹ್ಮೋತ್ಸವ' ದ ನಂತರ ಕಾರ್ತಿಕ ಮಾಸದಲ್ಲಿ ತಿರುಚಾನೂರು ಅಲಮೇಲು ಮಂಗಮ್ಮನ ಉತ್ಸವ ವಿಜೃಂಭಣೆಯಿಂದ ನಡೆದಿದೆ.

ವೈಜ್ರವೈಢೂರ್ಯ ಚಿನ್ನಾಭರಣ ಭೂಷಿತನಾದ ಏಳುಬೆಟ್ಟದ ಒಡೆಯ ತಿಮ್ಮಪ್ಪ ಮೋಹಿನಿ ಅವತಾರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡು ಭಕ್ತರಿಗೆ ದರ್ಶನ ನೀಡುವುದನ್ನು ಕಂಡ ಭಕ್ತಾದಿಗಳು ಕಾರ್ತಿಕ ಮಾಸದಲ್ಲಿ ಚಿತ್ತೂರು ಜಿಲ್ಲೆ ತಿರುಪತಿ ತಾಲೂಕಿನ ತಿರುಚಾನೂರಿನ ಅಲಮುಲು ಮಂಗಮ್ಮ(ಪದ್ಮಾವತಿ) ದೇವರ ಬ್ರಹ್ಮೋತ್ಸವವನ್ನು ಕಂಡು ಪುಳಕಿತರಾಗಿದ್ದಾರೆ. [ಮೋಹಿನಿ ರೂಪದಲ್ಲಿ ತಿಮ್ಮಪ್ಪನನ್ನು ನೋಡಿ]

ತಿರುಚಾನೂರು ಅಥವಾ ಅಲಮೇಲು ಮಂಗಾಪುರದ ದೇವಾಲಯವು ಅಲಮೇಲು ಮಂಗಮ್ಮ ಅಥವಾ ಪದ್ಮಾವತಿ ದೇವಿಗೆ ಸೇರಿದ್ದಾಗಿದೆ. ಈ ದೇವತೆ ಪುಷ್ಕರಣಿ ಎಂಬ ಕೊಳದಲ್ಲಿ ಜನಿಸಿದಳು ಎಂದು ನಂಬಲಾಗುತ್ತದೆ. ಈ ದೇವಾಲಯ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಧಾರ್ಮಿಕ ನಂಬಿಕೆ ಉಳ್ಳ ಪ್ರವಾಸಿಗರಿಗೆ ಇದು ಪ್ರಶಸ್ತ ತಾಣ.

ಕಲಶಗಿತ್ತಿಯರು ಸಾಲು ಸಾಲಾಗಿ ಜಗನ್ಮಾತೆಯ ಮುಂದೆ ಸಾಗಿದರು. ಅರಿಶಿನ, ಕುಂಕುಮ, ಬಳೆ ಬಿಚ್ಚೋಲೆ, ರೇಷ್ಮೆ ಸೀರೆ, ವಿವಿಧ ಆಭರಣಗಳು ಮಾತೆಗೆ ಅರ್ಪಿಸಿ ಭಕ್ತರು ಕೃತಾರ್ಥರಾಗಿದ್ದಾರೆ. ಬ್ರಹ್ಮೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗಿನ ಚಿತ್ರ ಸರಣಿ ಮುಂದಿದೆ ತಪ್ಪದೇ ನೋಡಿ...

ಹಂಸವಾಹನರೂಢಳಾದ ಪದ್ಮಾವತಿ ಅಮ್ಮ

ಹಂಸವಾಹನರೂಢಳಾದ ಪದ್ಮಾವತಿ ಅಮ್ಮ

ಕಾರ್ತಿಕ ಮಾಸದಲ್ಲಿ ತಿರುಚನೂರಿನ ಅಲಮುಲು ಮಂಗಮ್ಮ(ಪದ್ಮಾವತಿ) ದೇವರ ಬ್ರಹ್ಮೋತ್ಸವವನ್ನು ಕಂಡು ಪುಳಕಿತರಾಗಿದ್ದಾರೆ. ಹಂಸವಾಹನರೂಢಳಾದ ಪದ್ಮಾವತಿ ಅಮ್ಮನವರನ್ನು ಕಾಣಬಹುದು.

ಮೆರವಣಿಗೆಗೂ ಮುನ್ನ ಶ್ರೀಮಜ್ಜನ

ಮೆರವಣಿಗೆಗೂ ಮುನ್ನ ಶ್ರೀಮಜ್ಜನ

ಮೆರವಣಿಗೆಗೂ ಮುನ್ನ ಪದ್ಮಾವತಿ ಅಮ್ಮನವರ ಮೂರ್ತಿಗೆ ಶ್ರೀಮಜ್ಜನ ಮಾಡಲಾಯಿತು

ಕಾರ್ತಿಕ ಮಾಸದ ವಿಶೇಷ ಉತ್ಸವ

ಕಾರ್ತಿಕ ಮಾಸದ ವಿಶೇಷ ಉತ್ಸವ

ನವೆಂಬರ್ 19ರಂದು ಧ್ವಜಾರೋಹಣ ಪೂಜೆಯೊಂದಿಗೆ ಕಾರ್ತಿಕಮಾಸದ ಬ್ರಹ್ಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನದಂದು ಚಿನ್ನದ ಶೇಷ ವಾಹನರೂಢಳಾಗಿ ಪದ್ಮಾವತಿ ಅಮ್ಮನ ಮೆರವಣಿಗೆ ಸಾಗಿತು.

ದೊಡ್ಡ ಶೇಷ ವಾಹನ ಸೇವೆ

ದೊಡ್ಡ ಶೇಷ ವಾಹನ ಸೇವೆ

ಉತ್ಸವದ ಎರಡನೇ ದಿನದಂದು ಅಲಮೇಲು ಮಂಗಮ್ಮನವರನ್ನು ದೊಡ್ಡ ಶೇಷವಾಹನ, ಹಂಸವಾಹನದಲ್ಲಿ ಇರಿಸಿಕೊಂಡು ಮೆರವಣಿಗೆ ಮಾಡಲಾಯಿತು.

ಮೂರನೇ ದಿನ ಸಿಂಹವಾಹನ

ಮೂರನೇ ದಿನ ಸಿಂಹವಾಹನ

ಕಾರ್ತಿಕ ಬ್ರಹ್ಮೋತ್ಸವದ ಮೂರನೇ ದಿನ ಸಿಂಹವಾಹನರೂಢಳಾಗಿ ಮಾತೆ ಎಲ್ಲರಿಗೂ ದರ್ಶನ ನೀಡಿದ್ದಾಳೆ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ವಿವಿಧ ರಾಜ್ಯಗಳಿಂದ ಬಂದಿದ್ದ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ವಿವಿಧ ವೇಷ ಭೂಷಣಗಳು

ವಿವಿಧ ವೇಷ ಭೂಷಣಗಳು

ಬ್ರಹ್ಮೋತ್ಸವದ ಅಂಗವಾಗಿ ವಿಷ್ಣು ಅವತಾರಗಳನ್ನು ಹೋಲುವ ವೇಷ ಭೂಷಣಗಳನ್ನು ಧರಿಸಿದ್ದ ಕಲಾವಿದರು ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿದರು.

ವಿವಿಧ ವಾಹನಗಳ ಮೆರವಣಿಗೆ

ವಿವಿಧ ವಾಹನಗಳ ಮೆರವಣಿಗೆ

ನ.19 ರಿಂದ ನ.27ರವರೆಗೆ ವಿವಿಧ ವಾಹನರೂಢಳಾಗಿ ಪದ್ಮಾವತಿ ಅಮ್ಮ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಪ್ರತಿನಿತ್ಯ ಬೆಳಗ್ಗೆ 8 ಗಂಟೆ, ಸಂಜೆ 6 ಹಾಗೂ 8 ಗಂಟೆಗೆ ವಾಹನ ಸೇವೆ ನಡೆಸಲಾಗುತ್ತದೆ.

ಧ್ವಜ ಅವರೋಹಣದೊಂದಿಗೆ ಮುಕ್ತಾಯ

ಧ್ವಜ ಅವರೋಹಣದೊಂದಿಗೆ ಮುಕ್ತಾಯ

ಬ್ರಹ್ಮೋತ್ಸವ ಕಾರ್ಯಕ್ರಮ ನ.27ರಂದು ಪಂಚಮಿ ತೀರ್ಥ ಸೇವೆ, ಪಲ್ಲಕ್ಕಿ ತಿರುಚ್ಚಿ ಉತ್ಸವ ಧ್ವಜ ಅವರೋಹಣದ ಮೂಲಕ ಸಂಪನ್ನವಾಗಲಿದೆ.

ರಾಮಾಯಣದ ಕಥಾನಕ ಪ್ರದರ್ಶನ

ರಾಮಾಯಣದ ಕಥಾನಕ ಪ್ರದರ್ಶನ

ವಾಲಿ ಸುಗ್ರೀವರ ಕಥೆ, ಹನುಮಂತ, ಜಾಂಬವತರ ಕಥಾಭಾಗ ಸೇರಿದಂತೆ ರಾಮಾಯಣವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು

ಎಲ್ಲಾ ಸೇವೆಗಳ ಸಂಪೂರ್ಣ ವಿವರ

ಎಲ್ಲಾ ಸೇವೆಗಳ ಸಂಪೂರ್ಣ ವಿವರ

ಶೇಷ ವಾಹನ, ಹಂಸವಾಹನ, ಹನುಮಂತ ವಾಹನ, ಗರುಢವಾಹನ, ಅಶ್ವವಾಹನರೂಢಳಾಗಿ ಪದ್ಮಾವತಿ ದರ್ಶನ ನೀಡುತ್ತಾಳೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fervour marked the annual Brahmotsavams at Tiruchanur, Sri Padmavati Devi, the goddess of wealth, was taken out in a procession, riding the mighty seven hooded Adisesha on Pedda Sesha Vahanam, and Hamsa Vahanam. Panchami Teertham day holds significance in this annual bramhotsavam celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more