ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'3 ನೇ ಕೋವಿಡ್‌ ಅಲೆ ಜು. 4 ರಂದೇ ಅಪ್ಪಳಿಸಿದೆ' ಎಂದ ಹೈದರಾಬಾದ್‌ನ ಭೌತವಿಜ್ಞಾನಿ

|
Google Oneindia Kannada News

ಹೈದರಾಬಾದ್, ಜು.12: ಕೋವಿಡ್ -19 ರ ಮೂರನೇ ಅಲೆ ಈಗಾಗಲೇ ಭಾರತವನ್ನು ಅಪ್ಪಳಿಸಿದೆಯೇ?. ಪ್ರತಿದಿನ ದಾಖಲಾಗುತ್ತಿರುವ ಕೋವಿಡ್‌ ದತ್ತಾಂಶವನ್ನು ಆಧರಿಸಿದ 15 ತಿಂಗಳಿಗೂ ಹೆಚ್ಚು ಕಾಲ ಸೋಂಕು ಮತ್ತು ಸಾವಿನ ಪ್ರಮಾಣವನ್ನು ವಿಶ್ಲೇಷಿಸಿರುವ ಉನ್ನತ ನಗರದ ಸಂಶೋಧಕರ ಪ್ರಕಾರ, ಮೂರನೇ ಕೋವಿಡ್‌ ಅಲೆಯು ಜುಲೈ 4 ರಂದು ಬಂದಿದೆ ಎಂದು ಹೇಳಿದೆ.

ಪ್ರಖ್ಯಾತ ಭೌತವಿಜ್ಞಾನಿ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಹೆಚ್) ಮಾಜಿ ಕುಲಪತಿ ಡಾ.ವಿಪಿನ್ ಶ್ರೀವಾಸ್ತವ ಈ ಬಗ್ಗೆ ಟಿಒಐಗೆ ಮಾಹಿತಿ ನೀಡಿದ್ದಾರೆ.

ಕೊರೊನಾ 3ನೇ ಅಲೆ ಕುರಿತು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆಕೊರೊನಾ 3ನೇ ಅಲೆ ಕುರಿತು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ

''ಜುಲೈ 4 ರಿಂದ ದೇಶದಲ್ಲಿ ದಾಖಲಾಗಿರುವ ಹೊಸ ಕೋವಿಡ್‌ ಪ್ರಕರಣಗಳು ಹಾಗೂ ಸಾವುಗಳ ಮಾದರಿಯು 2021ರ ಫೆಬ್ರವರಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾದಾಗ ಪತ್ತೆಯಾದ ಕೊರೊನಾ ಸೋಂಕಿನ ದತ್ತಾಂಶವನ್ನು ಹೋಲುತ್ತದೆ,'' ಎಂದು ತಿಳಿಸಿದ್ದಾರೆ.

 ನಿಯಮ ಪಾಲಿಸದಿದ್ದರೆ ಕೊರೊನಾ ಸ್ಪೋಟ

ನಿಯಮ ಪಾಲಿಸದಿದ್ದರೆ ಕೊರೊನಾ ಸ್ಪೋಟ

''ಕೋವಿಡ್ -19 ಮಾರ್ಗಸೂಚಿಗಳಾದ ಸಾಮಾಜಿಕ ಅಂತರ, ಸ್ಯಾನಿಟೈಸೇಶನ್, ಮಾಸ್ಕ್‌ ಧರಿಸುವುದು ಮತ್ತು ವ್ಯಾಕ್ಸಿನೇಷನ್ ಮುಂತಾದವುಗಳನ್ನು ಅನುಸರಿಸಲು ವಿಫಲವಾದರೆ ಮೂರನೇ ಅಲೆಯು ವೇಗವನ್ನು ಪಡೆಯಬಹುದು,'' ಎಚ್ಚರಿಕೆ ನೀಡಿದ್ದಾರೆ. ಇನ್ನು ಡಾ. ಶ್ರೀವಾಸ್ತವ ಕಳೆದ 461 ದಿನಗಳಿಂದ ಟೈಮ್ಸ್‌ ಆಫ್‌ ಇಂಡಿಯಾದಿಂದ ದೈನಂದಿನ ಕೋವಿಡ್‌ ವರದಿಯನ್ನು ಪಡೆದು ಗ್ರಾಫ್‌ಗಳನ್ನು ಸಿದ್ಧಪಡಿಸಿದ್ದಾರೆ.

 ಕೋವಿಡ್‌ 3 ನೇ ಅಲೆಯ ಕುರುಹು

ಕೋವಿಡ್‌ 3 ನೇ ಅಲೆಯ ಕುರುಹು

461 ದಿನಗಳ ಸಾವಿನ ಕುರಿತಾದ ಕೋವಿಡ್ -19 ದತ್ತಾಂಶವನ್ನು ವಿಶ್ಲೇಷಿಸಿದ ನಂತರ ಭೌತಶಾಸ್ತ್ರಜ್ಞ ಸಾಂಕ್ರಾಮಿಕ ರೋಗದ ಪ್ರಗತಿಯ ಕುರಿತು ಮೂರು ಮಾಪನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಜುಲೈ 4 ರಿಂದ ಕೋವಿಡ್ -19 ರ ಹೊಸ ಅಂದರೆ ಮೂರನೇಯ ಅಲೆ ಅಭಿವೃದ್ಧಿಪಟ್ಟಿದೆ ಎಂದು ಈ ಮಾಪನ ತಿಳಿಸುತ್ತದೆ. ಜುಲೈ 4 ರಿಂದ ಕೋವಿಡ್ -19 ರ ಮೂರನೇಯ ಅಲೆ ಪ್ರಾರಂಭದ ಚಿಹ್ನೆಗಳು ಇದೆ ಎಂದು ಹೇಳಲಾಗಿದೆ. ಇನ್ನು ಈ ಮೆಟ್ರಿಕ್ ಅನ್ನು ಕೋವಿಡ್ -19 ರ ಡೈಲಿ ಡೆತ್ ಲೋಡ್ (ಡಿಡಿಎಲ್) ಎಂದು ಹೆಸರಿಸಿದ್ದಾರೆ.

ಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ದೂಡಿದ ಕೊರೊನಾ: ಚಿನ್ನ ಮಾರಾಟವೇ ದಾರಿಲಕ್ಷಾಂತರ ಭಾರತೀಯರನ್ನು ಬಡತನಕ್ಕೆ ದೂಡಿದ ಕೊರೊನಾ: ಚಿನ್ನ ಮಾರಾಟವೇ ದಾರಿ

 ಡೈಲಿ ಡೆತ್ ಲೋಡ್‌ನಿಂದ ಮೂರನೇ ಅಲೆ ಸೂಚನೆ

ಡೈಲಿ ಡೆತ್ ಲೋಡ್‌ನಿಂದ ಮೂರನೇ ಅಲೆ ಸೂಚನೆ

2021 ರ ಮೇನಲ್ಲಿ ಸಾವಿನ ಸಂಖ್ಯೆ ತುಂಬಾ ಹೆಚ್ಚಾಗಿದ್ದಾಗಲೂ, ಡಿಡಿಎಲ್ ಮೇ 6 ರಿಂದ 17 ರವರೆಗಿನ 10 ದಿನಗಳ ಅವಧಿಯಲ್ಲಿ ತೀವ್ರವಾಗಿ ಏರಿಳಿತಗೊಂಡಿತ್ತು. ದೈನಂದಿನ ಸಾವಿನ ಸಂಖ್ಯೆ ಇನ್ನೂ ತುಂಬಾ ಹೆಚ್ಚಾಗಿದ್ದರೂ ಮತ್ತು ವೇಗವಾಗಿ ಏರಿಳಿತವಾಗುತ್ತಿದ್ದರೂ, ಡೈಲಿ ಡೆತ್ ಲೋಡ್‌ ಕಡಿಮೆಯಾಗಿತ್ತು. ಇದು ದೈನಂದಿನ ಸಾವಿನ ಸಂಖ್ಯೆಯಲ್ಲಿನ ಇಳಿಕೆಯನ್ನು ಗುರುತಿಸಿತ್ತು. ಆದರೆ ಪ್ರಮುಖ ಅಂಶವೆಂದರೆ ಡಿಡಿಎಲ್ ಫೆಬ್ರವರಿ ಮಧ್ಯಭಾಗದಲ್ಲಿ ಎರಡನೇ ಅಲೆಯ ಸೂಚನೆ ನೀಡಿದೆ. ಜುಲೈ 4 ರಿಂದ, ಡಿಡಿಎಲ್ ಏರಿಳಿತವನ್ನು ಹೊಂದಿದೆ.

ಭಾರತದಲ್ಲಿ 3 ಕೋಟಿ ಕೊರೊನಾವೈರಸ್ ಸೋಂಕಿತರು ಗುಣಮುಖಭಾರತದಲ್ಲಿ 3 ಕೋಟಿ ಕೊರೊನಾವೈರಸ್ ಸೋಂಕಿತರು ಗುಣಮುಖ

 ಭಾರತದ ಕೊರೊನಾ ಪ್ರಕರಣ

ಭಾರತದ ಕೊರೊನಾ ಪ್ರಕರಣ

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಳಿತ ಕಾಣುತ್ತಲಿದೆ. ದೇಶದಲ್ಲಿ ಒಂದೇ ದಿನ 37,154 ಮಂದಿಗೆ ಕೊರೊನಾವೈರಸ್ ದೃಢಪಟ್ಟಿದೆ. ಕೊವಿಡ್-19 ಲಸಿಕೆ ಪಡೆದವರ ಸಂಖ್ಯೆ 37,73,52,501 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 724 ಮಂದಿ ಸೋಂಕಿಗೆ ಬಲಿಯಾಗಿದ್ದು ಕೋವಿಡ್‌ ಸಾವಿನ ಸಂಖ್ಯೆ 4,08,764ಕ್ಕೆ ಏರಿದೆ. ದೇಶದಲ್ಲಿ ಈವರೆಗೂ 3,00,14,713 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 37,73,52,501 ಮಂದಿ ಕೊವಿಡ್-19 ಲಸಿಕೆ ಪಡೆದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
According to a top city researcher, who has analysed the metrics of infection and death rate for over 15 months the third wave appears to have set in on July 4 to be precise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X