ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಪ್ರದೇಶದಲ್ಲಿ ಮತ್ತೆ ಪ್ರತ್ಯೇಕ ರಾಜ್ಯ ಕೂಗು: ಪವನ್ ಕಲ್ಯಾಣ್ ಬೆಂಬಲ

By Manjunatha
|
Google Oneindia Kannada News

ವಿಶಾಖಪಟ್ಟಣಂ, ಜೂನ್ 30: ಸಂಯುಕ್ತ ಆಂಧ್ರ ಪ್ರದೇಶವು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಎಂದು ವಿಭಜನೆಯಾದ ನಂತರ ಈಗ ಮತ್ತೆ ಆಂಧ್ರದಲ್ಲಿ ವಿಭಜನೆಯ ಕೂಗು ಕೇಳಿ ಬರುತ್ತಿದೆ.

ಈ ವಿಭಜನೆಯ ಕೂಗಿನ ಹಿಂದಿನ ಪ್ರಮುಖ ಧ್ವನಿ ಜನಸೇನಾ ಪಕ್ಷದ ಸಂಸ್ಥಾಪಕ, ನಟ ಪವನ್ ಕಲ್ಯಾಣ್. ಭಾರಿ ಅಭಿಮಾನಿ ಬಣ ಹೊಂದಿರುವ ಅವರು ಉತ್ತರ ಆಂಧ್ರದ ಬೇಡಿಕೆಗೆ ನೀರೆರೆಯುತ್ತಿದ್ದಾರೆ.

ಹಲವು ಟ್ವೀಟ್‌ಗಳನ್ನು ಮಾಡಿರುವ ಪವನ್ ಕಲ್ಯಾಣ್ ಉತ್ತರ ಆಂಧ್ರಕ್ಕೆ ವಿಶೇಷ ಗಮನ ನೀಡಿ ಇಲ್ಲವೆ ನಮ್ಮ ಆಡಳಿತವ್ನು ನಮಗೇ ವಹಿಸಿ ಎಂದು ಒತ್ತಾಯ ಮಾಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಬೆಂಬಲವನ್ನೂ ನೀಡಿದ್ದಾರೆ.

Telugu leader Pawan Kalyan demand for separate State North Andhra

ಉತ್ತರಾಂಧ್ರ ಮಾಸ ಪತ್ರಿಕೆಯ ಹಳೆಯ ಮುಖಪುಟವೊಂದನ್ನು ಟ್ವೀಟ್ ಮಾಡಿರುವ ಪವನ್ ಕಲ್ಯಾಣ್ 'ಉತ್ತರ ಆಂಧ್ರವನ್ನು ಸರ್ಕಾರವು ಹೀಗೆ ನಿರ್ಲಕ್ಷ್ಯ ಮಾಡಿದರೆ, ಉತ್ತರ ಆಂಧ್ರ ಪ್ರತ್ಯೇಕ ರಾಜ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದಿದ್ದಾರೆ.

2014ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ಬೇರೆಯಾಗಿ ಪ್ರತ್ಯೇಕ ರಾಜ್ಯವಾಗಿತ್ತು. ಇದೀಗ ಮತ್ತೆ ಹೊಸ ರಾಜ್ಯದ ಕೂಗು ಕೇಳಿಬರುತ್ತಿದ್ದು, ಇದಕ್ಕೆ ದೊಡ್ಡ ಅಭಿಮಾನಿವರ್ಗದ ನಾಯಕ ಬೆಂಬಲ ನೀಡಿರುವುದು ಕುತೂಹಲ ಹೆಚ್ಚಿಸಿದೆ.

English summary
Telugu movie star and leader Pawan Kalyan demand for separate state from Andhra Pradesh. He tweeted that If Andhra government neglect North Andhra people then it will fight for separate state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X