• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ತೆಲಂಗಾಣದಲ್ಲಿ ಟಿಆರ್ ಎಸ್ 100 ಸೀಟು ಗೆಲ್ಲೋದು ಗ್ಯಾರಂಟಿ!'

|

ಹೈದರಾಬಾದ್, ನವೆಂಬರ್ 07: 'ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ನೂರು ಸೀಟುಗಳನ್ನು ಗೆಲ್ಲುವುದು ಗ್ಯಾರಂಟಿ' ಎಂದು ಟಿಆರ್ ಎಸ್ ನಾಯಕ ಮತ್ತು ಮಾಹಿತಿ-ತಂತ್ರಜ್ಞಾನ, ಪೌರಾಡಳಿತ ಸಚಿವ ಕೆ ಟಿ ರಾಮ ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ: 3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ತಮ್ಮ ತಂದೆ ಕೆ ಚಂದ್ರಶೇಖರ್ ರಾವ್ ಅವರನ್ನು ಮುಂದಿನ 15 ವರ್ಷಗಳ ಕಾಲ ಮುಖ್ಯಮಂತ್ರಿಯನ್ನಾಗಿ ನೋಡುವುದು ಟಿಆರ್ ಎಸ್ ನ ಎಲ್ಲಾ ಮುಖಂಡರ ಆಸೆ. ಆದ್ದರಿಂದ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ' ಎಂದು ರಾಮ ರಾವ್ ಹೇಳಿದರು.

ವಿಧಾನಸಭೆ ಚುನಾವಣೆ: 3 ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕಾಂಗ್ರೆಸ್, ಟಿಡಿಪಿ ಮತ್ತಿತರ ಪಕ್ಷಗಳ ಮೈತ್ರಿಕೂಟವಾದ ಮಹಾಕೂಟಮಿಯನ್ನು ಯಾರೂ ನಂಬುವುದಿಲ್ಲ. ಜನಸಾಮಾನ್ಯರಿಗೆ ಚಂದ್ರಶೇಖರ್ ಅವರ ಮೇಲೆ ವಿಶ್ವಾಸವಿದೆ. ಕಾಂಗ್ರೆಸ್ ನೇತೃತ್ವದ ಮಹಾಕೂಟಮಿಯು ತನ್ನ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ್ದರಿಂದ ಯಾವುದೇ ಬದಲಾವಣೆಯಾಗಿಲ್ಲ. ನಮಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು.

ವೋಟಿಗಾಗಿ ಬಹುಕೃತ ವೇಷ, ತೆಲಂಗಾಣದಲ್ಲಿ ಇದು ಮಾಮೂಲು

119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫಲಿತಾಂಶ ಡಿಸೆಂಬರ್ 11 ರಂದು ಹೊರಬೀಳಲಿದೆ. ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಕೆ ಚಂದ್ರಶೇಖರ ರಾವ್ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತಿದೆ.

English summary
Telangana’s information technology and municipal administration minister K.T. Rama Rao said on Tuesday that his party, the Telangana Rashtra Samiti, will win with a thumping majority of 100 seats in the Assembly election next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X