ಕಿಡ್ನಿ ಕಸಿ ನಂತರ ಮೃತರಾದ ತೆಲಂಗಾಣ ಶಾಸಕರ ಪುತ್ರ

ಹೈದರಾಬಾದ್, ಡಿಸೆಂಬರ್ 28: ಎರಡನೇ ಬಾರಿಗೆ ಮೂತ್ರಪಿಂಡದ ಕಸಿ ಚಿಕಿತ್ಸೆಗೆ ಒಳಗಾಗಿದ್ದ ತೆಲಂಗಾಣದ ನಾಂಪಳ್ಳಿ ಶಾಸಕ ಜಾಫರ್ ಹುಸೇನ್ ಮೆಹ್ರಜ್ ಅವರ ಪುತ್ರ ಮಕ್ಸೂದ್ ಗುರುವಾರ ನಿಧನರಾಗಿದ್ದಾರೆ.

ನ.23 ರಂದು ಅವರನ್ನು ಸೋಮಜಿಗುಡದ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2012 ರಲ್ಲೇ ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ನಂತರ ಆರೋಗ್ಯವಂತರಾಗಿದ್ದ ಅವರು, ನಿಯಮಿತವಾಗಿ ತೆಗೆದುಕೊಳ್ಳಬೇಕಿದ್ದ ಮಾತ್ರೆಗಳನ್ನು ತೆಗೆದುಕೊಳ್ಳದ ಕಾರಣ ಮತ್ತೆ ಕಿಡ್ನಿ ವೈಫಲ್ಯವಾಗಿತ್ತು.

ಕಳೆದ ನಾಲ್ಕು ವರ್ಷಗಳಿಮಡ ಡಯಾಲಿಸಿಸ್ ಗೆ ಒಳಗಾಗುತ್ತಿದ್ದ ಅವರು ಇದೀಗ ಮತ್ತೆ ಕಿಡ್ನಿ ಕಸಿಗೆ ಒಳಗಾಗಿದ್ದರು. ಆದರೆ ಕಿಡ್ನಿ ಕಸಿಯ ನಂತರ ಉಂಟಾದ ಸೋಂಕಿನಿಂದಾಗಿ ಅವರು ಮೃತರಾಗಿದ್ದಾರೆ ಎಂದು ಮೈದ್ಯರು ತಿಳಿಸಿದ್ದಾರೆ.

Telangana: MLA’s son dies after transplant

ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯರು, ಪ್ರತಿ ವರ್ಷ 1200 ಮೂತ್ರಪಿಂಡ ಕಸಿಗಳು ನಡೆಯುತ್ತವೆ. ಅವುಗಳಲ್ಲಿ ಕೇವಲ 100 ರಷ್ಟು ಮಾತ್ರವೇ ವೈಫಲ್ಯವಾಗುವುದು. ಎರಡನೇ ಬಾರಿ ಕಸಿ ಮಾಡಿದಾಗಲೂ ವ್ಯಕ್ತಿ ಸಾವು ಕಾಣುವ ಘಟನೆ ಬಹಳ ವಿರಳ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+