ಮನೆಗೆ ಹೋಗಲು ತಡವಾಯ್ತೆಂದು ಸರ್ಕಾರಿ ಬಸ್ಸನ್ನೇ ಕದ್ದ ಭೂಪ
ವಿಕಾರಾಬಾದ್, ಫೆಬ್ರವರಿ 18: ವ್ಯಕ್ತಿಯೊಬ್ಬ ತುಂಬಾ ಹೊತ್ತಿನಿಂದ ಬಸ್ ನಿಲ್ದಾಣದ ಬಳಿ ನಿಂತಿದ್ದ, ಬಸ್ಸಿಗೆ ಕಾದು ಸುಸ್ತಾಗಿ ಕೊನೆಗೆ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಬಸ್ ನಿಲ್ದಾಣ ಒಂದರಲ್ಲಿ ಬಸ್ ನಿಂತಿತ್ತು. ವ್ಯಕ್ತಿಯೊಬ್ಬ ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲಿ ನಿಂತೆಯೇ ಇದ್ದ, ಹೋಗಿ ಬರುವ ವಾಹನಗಳಿಗೆಲ್ಲಾ ಕೈ ಅಡ್ಡ ಹಾಕುತ್ತಿದ್ದರೂ ಕೂಡ ಯಾರೊಬ್ಬರೂ ಗಾಡಿಯನ್ನು ನಿಲ್ಲಿಸಿಲ್ಲ.
ಹೀಗೆ ಕಾಯುತ್ತಿದ್ದರೆ ಮನೆ ತಲುಪುವುದು ಕಷ್ಟ ಎಂದು ಕೊನೆಗೆ ತೆಲಂಗಾಣದ ಸರ್ಕಾರಿ ಬಸ್ಸನ್ನೇ ಕದ್ದು ಮನೆಗೆ ತೆರಳಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಆತ ಎಲ್ಲಿ ಕೆಲಸ ಮಾಡುತ್ತಾನೆ, ಆತನ ಮನೆ ಇರುವುದು ಎಲ್ಲಿ, ಆತ ಯಾರು ಎಬುದನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications