ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ತಾಕತ್ತಿದ್ರೆ ನಾಯ್ಡು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ"

By Mahesh
|
Google Oneindia Kannada News

ಹೈದರಾಬಾದ್, ಜೂ.8: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಡುವಿನ ಕಿತ್ತಾಟ ತಾರಕ್ಕೇರುತ್ತಿದೆ. ಓಟಿಗಾಗಿ ಲಂಚ ನೀಡಿದ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ಕೈವಾಡ ಇರುವ ಬಗ್ಗೆ ಆಡಿಯೋ ಟೇಪ್ ರಿಲೀಸ್ ಆದಮೇಲೆ ಪ್ರಕರಣದಲ್ಲಿ ಅನೇಕ ತಿರುವುಗಳು ಕಾಣಿಸಿಕೊಳ್ಳುತ್ತಿವೆ. ನಾಯ್ಡು ಅವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ ಎಂದು ಕೆಸಿಆರ್ ಪುತ್ರ ಆಗ್ರಹಿಸಿದ್ದಾರೆ.

ತೆಲಂಗಾಣದ ನಾಮಾಂಕಿತ ಸದಸ್ಯ ಎಲ್ವಿಸ್ ಸ್ಟೀಫನ್ಸನ್ ಅವರಿಗೆ ಟಿಡಿಪಿ ಮುಖಂಡ ರೇವಂತ್ ರೆಡ್ಡಿ ಲಂಚ ನೀಡುವ ಪ್ರಕರಣದಲ್ಲಿ ನಾಯ್ಡು ಅವರ ಪಾತ್ರ ಏನು ಎಂಬುದರ ಬಗ್ಗೆ ಪ್ರಶ್ನೆ ಎದ್ದಿದೆ. ಆಡಿಯೋ ಟೇಪ್ ನಲ್ಲಿರುವ ಧ್ವನಿ ನನ್ನದ್ದಲ್ಲ ಎಂದು ನಾಯ್ಡು ಅವರು ರಾಜ್ಯಪಾಲ ನರಸಿಂಹನ್ ಅವರಿಗೆ ಪತ್ರ ಬರೆದಿದ್ದಾರೆ. ನಾಯ್ಡು ವಿರುದ್ಧ ಮಾತನಾಡಿದ ಕೆಸಿಆರ್ ವಿರುದ್ಧ ಅನೇಕ ಕಡೆ ಎಫ್ಐಆರ್ ದಾಖಲಾಗಿವೆ. [ಆಂಧ್ರ ಸಿಎಂ ತೆಗಳಿದ್ದಕ್ಕೆ ತೆಲಂಗಾಣ ಸಿಎಂ ಮೇಲೆ ಎಫ್ಐಆರ್]

ಈ ನಡುವೆ ಕೆ ಚಂದ್ರಶೇಖರ್ ರಾವ್ ಅವರ ಪುತ್ರ, ರಾಜ್ಯ ಸಚಿವ ಕೆ ತಾರಕರಾಮ ರಾವ್ ಅವರು ಈ ಬಗ್ಗೆ ಪ್ರತಿಕ್ರಿಯೆನೀಡಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲಿ, ಈ ಬಗ್ಗೆ ಎಸಿಬಿ ದಳ ತಕ್ಷಣವೇ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ. ತೆಲುಗು ದೇಶಂ ಪಕ್ಷ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ನಡು ಬೆಂಕಿ ಹತ್ತಿಕೊಂಡಿದ್ದು ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ.

ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ

ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ

ಓಟಿಗಾಗಿ ಲಂಚ ನೀಡಿದ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ಕೈವಾಡ ಇರುವ ಬಗ್ಗೆ ಆಡಿಯೋ ಟೇಪ್ ರಿಲೀಸ್ ಆದಮೇಲೆ ಪ್ರಕರಣದಲ್ಲಿ ಅನೇಕ ತಿರುವುಗಳು ಕಾಣಿಸಿಕೊಳ್ಳುತ್ತಿವೆ. ನಾಯ್ಡು ಅವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲಿ ಎಂದು ಕೆಸಿಆರ್ ಪುತ್ರ ಆಗ್ರಹಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಆಗ್ರಹ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು ತೆಲಂಗಾಣ ಎಂಎಲ್‌ಸಿ ಆಯ್ಕೆಗೆ ಸಂಬಂಧಿಸಿದಂತೆ ನಾಮ ನಿರ್ದೇಶಿತ ಎಂಎಲ್‌ಸಿಗೆ ಕೋಟ್ಯಾಂತರ ರೂ. ಹಣದ ಆಮಿಷವೊಡ್ಡಿದ ಹಿನ್ನೆಲೆಯಲ್ಲಿ ನಾಯ್ಡು ರಾಜೀನಾಮೆ ನೀಡುವುದು ಸೂಕ್ತ ಎಂದು ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ವಕ್ತಾರರಿಂದ ಆಗ್ರಹ

ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ ಅವರಿಂದ ನಾಯ್ಡು ರಾಜೀನಾಮೆಗೆ ಆಗ್ರಹ.

ಒಳ್ಳೆ ಪಿಆರ್ ಇದ್ದರೆ ಏನಲ್ಲಾ ಸಾಧ್ಯ

ಒಳ್ಳೆ ಪಿಆರ್ ಇದ್ದರೆ ಏನಲ್ಲಾ ಸಾಧ್ಯ ಎಂಬುದು ಈ ಪ್ರಕರಣದಿಂದ ಗೊತ್ತಾಗುತ್ತೆ. ಶಿಬು ಸೊರೆನ್ ಪ್ರಕರಣವನ್ನು ಒಮ್ಮೆ ನೆನಪಿಸಿಕೊಳ್ಳಿ.

English summary
Telangana Chief Minister K Chandrasekhar Rao’s son and state minister K Tarakarama Rao dares Andhra Pradesh Chief Minister N Chandrababu Naidu to face a live lie-detector test in the cash-for-vote scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X