ತೆಲಂಗಾಣ : ಕಾಲುವೆಗೆ ಬಿದ್ದ ಬಸ್, 9 ಸಾವು

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 22 : ಖಾಸಗಿ ಬಸ್ ಕಾಲುವೆಗೆ ಉರುಳಿ ಬಿದ್ದು 9 ಪ್ರಯಾಣಿಕರು ಮೃತಪಟ್ಟಿದ್ದಾರೆ. 18ಕ್ಕೂ ಅಧಿಕ ಜನರು ಅಪಘಾತದಲ್ಲಿ ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಸೋಮವಾರ ಮುಂಜಾನೆ ತೆಲಂಗಾಣದ ಖಮ್ಮುಂ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಸುಮಾರು 20 ಅಡಿ ಆಳದ ಕಾಲುವೆಗೆ ಉರುಳಿದೆ.

 bus accident

31 ಪ್ರಯಾಣಿಕರಿದ್ದ ಬಸ್ ಹೈದರಾಬಾದ್‌ನಿಂದ ಖಮ್ಮುಂಗೆ ತೆರಳುತ್ತಿತ್ತು. ಚಾಲಕನ ನಿದ್ರೆಯ ಮಂಪರಿನಿಂದಾಗಿ ಈ ಅಒಪಘಾತ ನಡೆದಿದೆ ಎಂದು ಶಂಕಿಸಲಾಗಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರ ಪೈಕಿ 9 ಜನರು ಸಾವನ್ನಪ್ಪಿದ್ದಾರೆ. 18ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ."

accident

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least eight people were killed on Monday when a bus with 31 passengers fell off a bridge into a canal near Khammam in Telangana. The bus was going towards Khammam district from Hyderabad.
Please Wait while comments are loading...