• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೆಲಂಗಾಣದಲ್ಲಿ 120 ಅಡಿ ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು

|

ಹೈದ್ರಾಬಾದ್, ಮೇ.27: ಕೊಳವೆ ಬಾವಿ ದುರಂತಗಳ ಸಂಖ್ಯೆ ಕಡಿಮೆಯಾಯ್ತು ಅಂದುಕೊಳ್ಳುವುದರಲ್ಲೇ ತೆಲಂಗಾಣದಲ್ಲಿ 3 ವರ್ಷದ ಪುಟ್ಟ ಬಾಲಕ 120 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬುಧವಾರ ನಡೆದಿದೆ. ರಾಜ್ಯ ರಾಜಧಾನಿಯಿಂದ 100 ಕಿಲೋ ಮೀಟರ್ ಅಂತರದಲ್ಲೇ ಮತ್ತೊಂದು ಕೊಳವೆ ಬಾವಿ ದುರಂತ ಸಂಭವಿಸಿದೆ.

ತೆಲಂಗಾಣದ ಮೇದಕ್ ಜಿಲ್ಲೆಯ ಪೋಚಂಪಲ್ಲಿ ಪ್ರದೇಶದಲ್ಲಿ 3 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದು, ಬಾಲಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ. ಇನ್ನು ಕೊಳವೆ ಬಾವಿಗೆ ಬಿದ್ದಿರುವ ಬಾಲಕನ ಹೆಸರು ಸಾಯಿ ವರ್ಧನ್ ಎಂದು ಗುರುತಿಸಲಾಗಿದೆ.

ಬಲಿಗಾಗಿ ಬಾಯಿ ತೆರೆದಿವೆ ಕೊಳವೆ ಬಾವಿಗಳು: ಕ್ರಮಕ್ಕೆ ಗ್ರಾಮಸ್ಥರ ಆಗ್ರಹಬಲಿಗಾಗಿ ಬಾಯಿ ತೆರೆದಿವೆ ಕೊಳವೆ ಬಾವಿಗಳು: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಕಳೆದ ವಾರ ಬಾಲಕ ಸಾಯಿ ವರ್ಧನ್ ಅಜ್ಜ ಬಿಕ್ಷಾಪತಿ ತಮ್ಮ ಕೃಷಿ ಜಮೀನಿನಲ್ಲಿ ಮೂರು ಬೋರ್ ವೆಲ್ ಗಳನ್ನು ತೆಗೆಸಿದ್ದರು. ಆದರೆ ಈ ಪೈಕಿ ಒಂದರಲ್ಲೂ ನೀರು ಬಂದಿರಲಿಲ್ಲ. ಇನ್ನೇನು ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದುಕೊಳ್ಳುವಷ್ಟರಲ್ಲೇ ದುರಂತ ನಡೆದು ಹೋಗಿದೆ ಎಂದು ಬಾಲಕನ ತಂದೆ ಗೋವರ್ಧನ್ ತಿಳಿಸಿದ್ದಾರೆ.

ರಜೆ ದಿನ ಕಳೆಯಲು ಅಜ್ಜನ ಮನೆಗೆ ಬಂದಿದ್ದ ಬಾಲಕ:

ತೆಲಂಗಾಣದಲ್ಲಿರುವ ಸಂಗಾರೆಡ್ಡಿ ಜಿಲ್ಲೆಯ ಪತಂಚೇರು ಮೂಲದ 3 ವರ್ಷದ ಬಾಲಕ ಸಾಯಿ ವರ್ಧನ್ ರಜೆ ಅವಧಿಯನ್ನು ಕಳೆಯಲು ತಮ್ಮ ಅಜ್ಜನ ಮನೆಗೆ ಆಗಮಿಸಿದ್ದನು ಎಂದು ಎನ್ ಟಿವಿ ವರದಿ ಮಾಡಿದೆ. 120 ಅಡಿ ಕೊಳವೆ ಬಾವಿಗೆ ಬಾಲಕನು ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಮೇದಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯು ಸ್ಥಳಕ್ಕೆ ದೌಡಾಯಿಸಿದ್ದು ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

English summary
Telangana: A 3-year-old Boy Fell Into A 120ft Borewell, Rescue Operation Underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X