ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾಕ್ಕೆ 'Arsenic Alb 30 P' ಮಾತ್ರೆಗಳು ಮದ್ದಂತೆ!

|
Google Oneindia Kannada News

ಹೈದರಾಬಾದ್, ಮಾರ್ಚ್ 4; ಜಗತ್ತಿನ ನಿದ್ದೆಗೆಡಿಸಿರುವ ಮಾರಕ ಕೊರೊನಾಗೆ ಮದ್ದು ಕಂಡು ಹಿಂಡಿಯಲು ಚೀನಾ ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಹೆಣಗಾಡುತ್ತಿವೆ.

ಚೀನಾದಲ್ಲಿ ಕಾಣಿಸಿಕೊಂಡು ಪ್ರಪಂಚದ ಬೇರೆ ಬೇರೆ ಕಡೆಗೆ ಪಸರಿಸುತ್ತಿರುವ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದೆ. ದೆಹಲಿ, ತೆಲಂಗಾಣ, ರಾಜಸ್ತಾನ ಹಾಗೂ ಇಟಲಿ ಪ್ರವಾಸಿಗರು ಸೇರಿದಂತೆ ಭಾರತದಲ್ಲಿ 16 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ತಡೆಗಟ್ಟಲು ಇನ್ನೂ ಮದ್ದು ಕಂಡು ಹಿಡಿಯಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಡೆಡ್ಲಿ ಕೊರೊನಾಕ್ಕೆ ಬೆದರಿ 54 ಸಾವಿರ ಕೈದಿಗಳ ಬಿಡುಗಡೆ..!ಡೆಡ್ಲಿ ಕೊರೊನಾಕ್ಕೆ ಬೆದರಿ 54 ಸಾವಿರ ಕೈದಿಗಳ ಬಿಡುಗಡೆ..!

ಆದರೆ, ತೆಲಂಗಾಣದಲ್ಲೂ ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದ್ದರಿಂದ ತೆಲಂಗಾಣದ ಆಯುಷ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ 'Arsenic Alb 30 P' ಹೋಮಿಯೋಪತಿ ಮಾತ್ರೆಗಳನ್ನು ಜನರಿಗೆ ಉಚಿತವಾಗಿ ನೀಡುತ್ತಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ಹೋಮಿಯೋಪತಿ ನಿರ್ದೇಶನದ ಮೇರೆಗೆ ಮಾತ್ರೆಗಳನ್ನು ಹಂಚುತ್ತಿದ್ದೇವೆ ಎಂದು ತೆಲಂಗಾಣ ಆಯುಷ್ ಇಲಾಖೆಯ ಮುಖ್ಯಸ್ಥರು ಹೇಳಿದ್ದಾರೆ. ಇದು ಕೊರೊನಾ ಬರದಂತೆ ತಡೆಗಟ್ಟುತ್ತದೆ ಎಂದು ಹೇಳಿದ್ದಾರೆ. ಆ ಮಾತ್ರೆಗಳು ವೈಶಿಷ್ಟತೆ ಏನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ತೆಲಂಗಾಣದಲ್ಲೂ ಸೋಂಕು

ತೆಲಂಗಾಣದಲ್ಲೂ ಸೋಂಕು

ತೆಲಂಗಾಣದಲ್ಲಿ ಒಬ್ಬ ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದರಿಂದ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಮರಿ ಚೆನ್ನಾ ರೆಡ್ಡಿ ಮಾನವ ಸಂಪನ್ಮೂಲ ಅಧ್ಯಯನ ಕೇಂದ್ರದಲ್ಲಿ ಕೊರೊನಾ ವೈರಸ್ ಸೋಂಕು ತಗುಲಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಲಾಗುತ್ತಿದೆ.

Arsenic Alb 30 P ಮಾತ್ರೆಗಳು

Arsenic Alb 30 P ಮಾತ್ರೆಗಳು

Arsenic Alb 30 P ಎನ್ನುವ ಮಾತ್ರೆಗಳನ್ನು ಕೊರೊನಾ ಸೋಂಕು ತಗುಲದಂತೆ ಜನರಿಗೆ ಹಂಚಲಾಗುತ್ತದೆ. ಒಬ್ಬರಿಗೆ ಆರು ಮಾತ್ರೆಗಳನ್ನು ನೀಡಲಾಗುತ್ತಿದ್ದು, ಪ್ರತಿದಿನ ಮೂರು ಹೊತ್ತು ಊಟದ ಮೊದಲು ಹಾಗೂ ಊಟಕ್ಕಿಂತ ಮೊದಲು ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದು ತೆಲಂಗಾಣ ಆಯುಷ್ ಇಲಾಖೆ ಹೇಳಿದೆ.

ಡೆಡ್ಲಿ ಕೊರೊನಾ ಹತ್ತಿಕ್ಕಲು ಸಫಲವಾಯಿತಾ ಡ್ರ್ಯಾಗನ್ ಚೀನಾ...?ಡೆಡ್ಲಿ ಕೊರೊನಾ ಹತ್ತಿಕ್ಕಲು ಸಫಲವಾಯಿತಾ ಡ್ರ್ಯಾಗನ್ ಚೀನಾ...?

11,500 ಮಾತ್ರೆಗಳ ವಿತರಣೆ

11,500 ಮಾತ್ರೆಗಳ ವಿತರಣೆ

ಮಂಗಳವಾರ ಹೈದರಾಬಾದ್ ಹಾಗೂ ಇನ್ನಿತರ ಕೆಲ ಕಡೆಗೆ 11,500 ಮಾತ್ರೆಗಳನ್ನು 3500 ಜನರಿಗೆ ವಿತರಿಸಲಾಗಿದೆ. ಜನ ಸ್ವಯಂ ಪ್ರೇರಿತವಾಗಿ ಬಂದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆಯುಷ್ ಇಲಾಖೆ ತಿಳಿಸಿದೆ. ಕೊರೊನಾ ಅಲ್ಲದೇ, ಮಾರಕ ಹಂದಿಜ್ವರದಂತಹ ರೋಗ ಬರದಂತೆ ತಡೆಗಟ್ಟಲು Arsenic Alb 200 P ಎನ್ನುವ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಚೀನಾದಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಹೈದರಾಬಾದ್‌ನ ರಾಜೀವಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಈ ಮಾತ್ರೆಗಳನ್ನು ಆಯುಷ್ ಇಲಾಖೆ ವಿತರಿಸಿತ್ತು.

ಹೋಮಿಯೋಪತಿ ಎಂದರೇನು?

ಹೋಮಿಯೋಪತಿ ಎಂದರೇನು?

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಹೋಮಿಯೋಪತಿ ಎಂದರೆ ಬಹಳ ಜನರಿಗೆ ಗೊತ್ತಿಲ್ಲ. ಖಾಯಿಲೆ ಬಂದ ವ್ಯಕ್ತಿಗೆ ಅದೇ ಖಾಯಿಲೆಯನ್ನು ತರುವ ಸಾಮರ್ಥ್ಯವುಳ್ಳ ಔಷಧಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡುವುದರ ಮೂಲಕ ಚಿಕಿತ್ಸೆ ಮಾಡುವುದೇ ಹೋಮಿಯೋಪತಿ.

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

English summary
Tablets For Coronavirus Telangana Ayush Department Distubuting Homeopathy Tablets. called Arsenic Alb 30 P'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X