ಡಿ.ಕೆ.ಶಿವಕುಮಾರ್, ರಾಮುಲು ಮತ್ತೆ ಮುಖಾಮುಖಿ, ಈ ಬಾರಿ ಗೆಲುವು ಯಾರಿಗೆ?
Recommended Video

ಹೈದರಾಬಾದ್, ಡಿಸೆಂಬರ್ 03: ತಿಂಗಳ ಹಿಂದಷ್ಟೆ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ರಾಜಕೀಯವಾಗಿ ಮುಖಾ-ಮುಖಿ ಆಗಿದ್ದ ಬಿಜೆಪಿಯ ಶ್ರೀರಾಮುಲು ಮತ್ತು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರುಗಳು ಈಗ ಮತ್ತೆ ಎದುರುಬದುರಾಗಿದ್ದಾರೆ.
ಹೌದು, ಇಬ್ಬರೂ ಮತ್ತೆ ಚುನಾವಣಾ ರಾಜಕೀಯದಲ್ಲಿಯೇ ಮುಖಾ-ಮುಖಿ ಆಗಿದ್ದಾರೆ, ಆದರೆ ಕರ್ನಾಟಕದಲ್ಲಲ್ಲ, ಬದಲಿಗೆ ನೆರೆಯ ತೆಲಂಗಾಣ ರಾಜ್ಯದಲ್ಲಿ.
ತೆಲಂಗಾಣದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 7 ರಂದು ಮತದಾನ ಇದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಡಿ.ಕೆ.ಶಿವಕುಮಾರ್ ಅವರನ್ನು ಪ್ರಚಾರ ಉಸ್ತುವಾರಿ ಮತ್ತು ಅಸಮಾಧಾನ ತಡೆಗೆಂದು ತೆಲಂಗಾಣಕ್ಕೆ ನಿಯೋಜಿಸಿದ್ದರೆ. ಬಿಜೆಪಿಯು ರಾಮುಲು ಅವರನ್ನು ತೆಲಂಗಾಣದಲ್ಲಿ ಪ್ರಚಾರಕ್ಕೆ ಕಳುಹಿಸಿದೆ.

ಇಬ್ಬರೂ ಶಕ್ತಿವಂತ ರಾಜಕಾರಣಿಗಳು
ಕರ್ನಾಟಕದ ಈ ಇಬ್ಬರೂ ಶಕ್ತಿವಂತ ರಾಜಕಾರಣಿಗಳು ಈಗ ನೆರೆಯ ತೆಲಂಗಾಣದಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿ ಉಪಚುನಾವಣೆ ರಾಮುಲು ಮತ್ತು ಡಿಕೆ.ಶಿವಕುಮಾರ್ ಅವರ ನಡುವಿನ ಕದನ ಎಂದೇ ಬಿಂಬಿತವಾಗಿತ್ತು, ಆ ಕದನದಲ್ಲಿ ಅಂತಿಮವಾಗಿ ಡಿ.ಕೆ.ಶಿವಕುಮಾರ್ ವಿಜಯ ಸಾಧಿಸಿದ್ದರು.

ತೆಲಂಗಾಣದಲ್ಲಿ ಮತ್ತೆ ಮುಖಾ-ಮುಖಿ
ಈಗ ಮತ್ತೆ ತೆಲಂಗಾಣದಲ್ಲಿ ಇಬ್ಬರೂ ನಾಯಕರು ಎದುರು-ಬದುರಾಗಿದ್ದಾರೆ. ಇಬ್ಬರೂ ಸಹ ತಂತಮ್ಮ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಸಂಘಟನೆ ಮಾಡುತ್ತಿದ್ದಾರೆ. ಈ ಬಾರಿ ಯಾರಿಗೆ ಗೆಲುವಾಗುತ್ತದೆ ಎಂಬುದು ಕಾದು ನೋಡಬೇಕಿದೆ.

ಚಂದ್ರಬಾಬು ಜೊತೆ ಡಿಕೆಶಿ ಪ್ರಚಾರ
ಡಿ.ಕೆ.ಶಿವಕುಮಾರ್ ಅವರು ಮೊನ್ನೆಯಷ್ಟೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಟ್ಟಿಗೆ ಬಹಿರಂಗ ಪ್ರಚಾರ ಮಾಡಿದರು. ಅಷ್ಟೆ ಅಲ್ಲದೆ ತೆಲಂಗಾಣ ಚುನಾವಣೆ ಸಂಬಂಧಿ ಹಲವು ಪ್ರಮುಖ ಸಭೆಗಳ ಮುಖಂಡತ್ವ ಸಹ ಅವರು ವಹಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಟಿಡಿಪಿ ಜತೆ ಸೇರಿ ಸ್ಪರ್ಧಿಸುತ್ತಿದೆ.

ಬಳ್ಳಾರಿ ಗಡಿಯಲ್ಲಿ ರಾಮುಲು ಪ್ರಚಾರ
ಶ್ರೀರಾಮುಲು ಅವರು ಕರ್ನೂಲು ಭಾಗದಲ್ಲಿ ಇಂದು ಪ್ರಚಾರ ಮಾಡಿದ್ದಾರೆ. ಇದಕ್ಕೆ ಮುನ್ನಾ ಆಲಂಪುರ, ವನಪಾರ್ತಿ, ಕೊಲ್ಲಾಪುರಗಳಲ್ಲಿ ಪ್ರಚಾರ ಮಾಡಿದ್ದಾರೆ. ಸ್ವತಃ ತೆಲುಗು ಭಾಷಿಕರಾಗಿರುವ ರಾಮುಲು ಅವರು ಕರ್ನಾಟಕದ-ಆಂದ್ರದ ಬಳ್ಳಾರಿ ಗಡಿ ಭಾಗದಲ್ಲಿ ಈಗಾಗಲೇ ಪರಿಚಿತರು ಹಾಗಾಗಿ ಇದೇ ಭಾಗಗಳಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ.












Click it and Unblock the Notifications