Sankranti Special: ದಕ್ಷಿಣ ಮಧ್ಯ ರೈಲ್ವೆಯಿಂದ 33 ವಿಶೇಷ ರೈಲುಗಳು
ಹೈದರಾಬಾದ್, ಡಿ. 15: ಕ್ರಿಸ್‌ಮಸ್, ಹೊಸ ವರ್ಷ ನಂತರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ದಕ್ಷಿಣ ಮಧ್ಯ ರೈಲ್ವೆ(SCR)ವಿಭಾಗವು ಹೈದರಾಬಾದ್ ವಲಯದಿಂದ 33 ವಿಶೇಷ ರೈಲುಗಳ ಸೇವೆ ನೀಡಲು ಮುಂದಾಗಿದೆ. ಈ ಪೈಕಿ 17 ಸಂಕ್ರಾಂತಿ ವಿಶೇಷ ರೈಲುಗಳಾಗಿದ್ದು, ಮುಖ್ಯವಾಗಿ ವಿಶಾಖಪಟ್ಟಣಂ ಹಾಗೂ ತಿರುಪತಿ ಕಡೆ ತೆರಳಲಿವೆ. ಇದರಿಂದ ನೆರೆರಾಜ್ಯ ವಿವಿಧ ಸ್ಥಳಗಳಿಗೂ ಅನುಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ರೈಲುಗಳಿಗೂ ಮುಂಗಡವಾಗಿ ಸೀಟು ಕಾಯ್ದಿರಿಸುವುದು ಕಡ್ಡಾಯ. ಇದಲ್ಲದೆ ವಾರಕ್ಕೆ ಎರಡು ಬಾರಿ ಸಂಚರಿಸುವ 2 ವಿಶೇಷ ರೈಲುಗಳು ಕೂಡಾ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಹೈದರಾಬಾದ್ ಇಂದ ವಿಶಾಖಪಟ್ಟಣಂ (ಟ್ರೈನ್ ಸಂಖ್ಯೆ 07451)
ಹೊರಡುವ ವೇಳೆ: ಹೈದರಾಬಾದ್ ರಾತ್ರಿ 10.15 pm
ತಲುಪುವ ವೇಳೆ: ವಿಶಾಖಪಟ್ಟಣಂ ಬೆಳಗ್ಗೆ 10.50 a.m

ಭೀಮಾವರಂ, ಗುಂಟೂರು, ವಿಜಯವಾದ, ಕೈಕಲೂರು, ಆಕಿವಿಡು, ತನುಕು, ನಿಡಾಡಾವೋಲು, ರಾಜಮಂಡ್ರಿ ಹಾಗೂ ಇತರೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಸಿಗಲಿದೆ. ಟ್ರೈನ್ ಸಂಖ್ಯೆ 07452 ಇದೇ ಮಾರ್ಗವಾಗಿ ವಿಶಾಖಪಟ್ಟಣಂನಿಂದ ಹೊರಟು ಜನವರಿ 16ರಂದು ಹೈದರಾಬಾದ್ ತಲುಪಲಿದೆ.
ಇದೇ ರೀತಿ ಟ್ರೈನ್ ಸಂಖ್ಯೆ 07453 ಸಿಕಂದರಾಬಾದ್ ನಿಂದ ತಿರುಪತಿಗೆ ಮಂಗಳವಾರ 7.40 p.mಕ್ಕೆ ಹೊರತು ತಿರುಪತಿಯನ್ನು 7.50AM ವೇಳೆಗೆ ತಲುಪಲಿದೆ. ಟ್ರೈನ್ ಸಂಖ್ಯೆ 07449 ಸಿಕಂದರಾಬಾದ್ ನಿಂದ 5.50 p.mಕ್ಕೆ ಹೊರತು ಬೆರ್ಹಂಪುರ್ ಮರುದಿನ 12.05 p.mಕ್ಕೆ ತಲುಪಲಿದೆ. ಜನವರಿ 16ರ ತನಕ ಈ ವಿಶೇಷ ರೈಲು ಸಂಚರಿಸಲಿದೆ. ರಿಟರ್ನ್ ಟ್ರೈನ್ ಸಂಖ್ಯೆ 07450 ಬೆರ್ಹಂಪುರ್ ನಿಂದ 1.30 p.mಕ್ಕೆ ಹೊರತು ಮರುದಿನ ಸಿಕಂದರಾಬಾದ್ 7.15 a.mಕ್ಕೆ ತಲುಪಲಿದೆ.
#Sankranti Festival #SpecialTrains from Secunderabad to Kakinada Town & Hyderabad to Narsapur pic.twitter.com/b9h3229oTd
— South Central Railway (@SCRailwayIndia) January 9, 2021
ಪ್ರಯಾಣದ ವೇಳೆಯಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಿಧಿಸಿರುವ ಕೋವಿಡ್ 19 ನಿಯಮಗಳನ್ನು ಪಾಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ. ರೈಲ್ವೆ ಪೊಲೀಸರು ಈ ನಿಯಮಗಳ ಬಗ್ಗೆ ನಿಗಾ ವಹಿಸಲು ಸೂಚಿಸಲಾಗಿದೆ.












Click it and Unblock the Notifications