ಸಮಾಜವಾದಿ ಗುರುವಿನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್

ಹೈದರಾಬಾದ್, ಜುಲೈ 29: ಕಾಂಗ್ರೆಸ್ ಹಿರಿಯ ಸಂಸದ, ನಾಯಕ ಸಮಾಜವಾದಿ ಜೈಪಾಲ್ ರೆಡ್ಡಿ ಅವರ ಅಂತಿಮಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಪಾಲ್ಗೊಂಡಿದ್ದರು.

ಈ ಇಬ್ಬರೂ ಸಮಾಜವಾದಿಗಳು ತಮ್ಮ ಗುರುವಿನ ಮೃತ ದೇಹದ ಅಂತಿಮ ಯಾತ್ರೆಗೆ ಹೆಗಲು ಕೊಟ್ಟರು. ಇಬ್ಬರೂ ನಾಯಕರು ಕೆಲ ಕಾಲ ಜೈಪಾಲ್ ರೆಡ್ಡಿ ಅವರ ಮೃತ ದೇಹವನ್ನು ಹೊತ್ತು ಅವರನ್ನು ಕಳುಹಿಸಿಕೊಟ್ಟರು.

Siddaramaiah And Ramesh Kumar Participate In Jaipal Reddy Cremation

ಜೈಪಾಲ್ ರೆಡ್ಡಿ ಅವರ ಅಂತಿಮಕಾರ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಹಿರಿಯ ನಾಯಕರು, ಪಕ್ಷಾತೀತರಾಗಿ ಅಂತಿಮಕಾರ್ಯದಲ್ಲಿ ಭಾಗವಹಿಸಿದ್ದರು. 70-80 ರ ದಶಕದಲ್ಲಿ ಸಮಾಜವಾದಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಹಲವರು ಇಂದು ಜೈಪಾಲ್ ರೆಡ್ಡಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಕೇಂದ್ರ ಮಂತ್ರಿಗಳೂ ಆಗಿದ್ದ ಜೈಪಾಲ್ ರೆಡ್ಡಿ ಅವರಿಗೆ ಪಕ್ಷಾತೀತವಾಗಿ ಗೆಳೆಯರು ಇದ್ದರು. ಜೈಪಾಲ್ ರೆಡ್ಡಿ ಅವರು ಕಾಂಗ್ರೆಸ್ ಹಿರಿಯ ಸದಸ್ಯರಾಗಿದ್ದರು. ಅವರು ನಿನ್ನೆ ನಿಧನಹೊಂದಿದರು ಅವರಿಗೆ 77 ವಯಸ್ಸಾಗಿತ್ತು. ಅವರಿಗೆ ಮೂವರು ಮಕ್ಕಳಿದ್ದಾರೆ. ಅವರು ಅನೇಕ ಶಿಷ್ಯರನ್ನು ಅಗಲಿದ್ದಾರೆ.

Siddaramaiah And Ramesh Kumar Participate In Jaipal Reddy Cremation

ನಿನ್ನೆ ರಮೇಶ್ ಕುಮಾರ್ ಅವರು ಶಾಸಕರ ಅನರ್ಹತೆ ತೀರ್ಪು ಪ್ರಕಟಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಹ ಜೈಪಾಲ್ ರೆಡ್ಡಿ ಅವರನ್ನು ನೆನಪಿಸಿಕೊಂಡು ಭಾವುಕರಾಗಿ ಕಣ್ಣೀರು ಹಾಕಿದ್ದರು. ಇಂದು ಕಲಾಪದಲ್ಲಿಯೂ ಸಹ ಜೈಪಾಲ್ ರೆಡ್ಡಿ ಅವರನ್ನು ನೆನಪಿಸಿಕೊಂಡಿದ್ದರು, ಮತ್ತು ಜೈಪಾಲ್ ರೆಡ್ಡಿ ಅವರ ಅಂತಿಮಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದೇ ಲಘು-ಬಗನೆ ಕಲಾಪ ಮುಗಿಸಿದರು.

ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಜೈಪಾಲ್ ರೆಡ್ಡಿ ಅವರ ಅಂತಿಮಕಾರ್ಯದಲ್ಲಿ ಭಾಗವಹಿಸಿದ್ದರು. ಅವರ ಅಂತಿಮಕಾರ್ಯವು ಹೈದರಾಬಾದ್ ನಲ್ಲಿ ಜರುಗಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+