ಬಿಜೆಪಿಯಿಂದ ಮಾತ್ರ ಭಾರತದ ಹಿತಾಸಕ್ತಿ ರಕ್ಷಣೆ: ರಾಜನಾಥ್ ಸಿಂಗ್
Recommended Video

ನಿಜಾಮಾಬಾದ್(ತೆಲಂಗಾಣ), ಏಪ್ರಿಲ್ 03: ಬಿಜೆಪಿ ಮಾತ್ರವೇ ಭಾರತದ ಹಿತಾಸಕ್ತಿಯನ್ನು ಕಾಪಾಡಬಲ್ಲದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತೆಲಂಗಾಣದ ನಿಜಾಮಾಬಾದ್ ನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ತೆಲಂಗಾಣದ ಜನರು ಬಿಜೆಪಿಯನ್ನೇ ನೆಚ್ಚಿಕೊಳ್ಳಲಿದ್ದಾರೆ, ಟಿಆರ್ ಎಸ್ ಕೇವಲ ರಾಜ್ಯಮಟ್ಟದಲ್ಲಿ ಮಾತ್ರ ತನ್ನ ಛಾಪು ಮೂಡಿಸಬಹುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಪಕ್ಷ ಕಾಂಗ್ರೆಸ್ ಮೇಲೂ ಹರಿಹಾಯ್ದ ಸಿಂಗ್, 2008 ರಲ್ಲಿ ಮುಂಬೈ ದಾಳಿಯಾಗಿದ್ದಾಗ ನಮ್ಮ ಸೇನೆ ಉಗ್ರರನ್ನು ಹತ್ತಿಕ್ಕಿತು, ಪ್ರಾಣದ ಹಂಗು ತೊರೆದು ಹೋರಾಡಿತು. ಆದರೆ ಅದಕ್ಕಾಗಿ ಆಗಿನ ಸರ್ಕಾರ ಏನು ಮಾಡಿತು? ನೆರವು ನೀಡುವುದಿರಲಿ, ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡುವ ಕೆಲಸವನ್ನಾದರೂ ಮಾಡಿತೆ? ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ತಾಕತ್ತೂ ಆಗಿನ ಸರ್ಕಾರಕ್ಕಿರಲಿಲ್ಲ ಎಂದು ರಾಜನಾಥ್ ಸಿಂಗ್ ಕಾಂಗ್ರೆಸ್ ಅನ್ನು ದೂರಿದರು.

1971 ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಬೇರೆಯಾದಾಗ, ಬಾಂಗ್ಲಾ ವಿಭಜನೆಗೆ ಭಾರತವೇ ಕಾರಣವಾದಾಗ, ನೆರವಾದಾಗ ವಿರೋಧಪಕ್ಷವಾಗಿದ್ದ ಬಿಜೆಪಿ ಎಲ್ಲಾ ವೈಮನಸ್ಯವನ್ನೂ ಮರೆತು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿತ್ತು. ಆದರೆ ಇಂದು ಅಂಥ ಮನಸ್ಥಿತಿ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರೂ ಆಗಿರುವ ರಾಜನಾಥ್ ಸಿಂಗ್ ಅವರು ಉತ್ತರ ಪ್ರದೇಶದ ಲಕ್ನೋ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.












Click it and Unblock the Notifications