ಹೈದರಾಬಾದ್‌ನ ಐಕಿಯಾ ಸ್ಟೋರ್‌ನಲ್ಲಿ ಜನಾಂಗೀಯ ನಿಂದನೆ: ಕೆಟಿಆರ್ ಖಂಡನೆ
ಹೈದರಾಬಾದ್, ಆಗಸ್ಟ್ 29: ಐಕಿಯಾ ಸ್ಟೋರ್ ಹೈದರಾಬಾದ್‌ನಲ್ಲಿ ಪತ್ರಕರ್ತರೊಬ್ಬರ ಮೇಲೆ ಜನಾಂಗೀಯ ನಿಂದನೆ ಮಾಡಲಾಗಿದೆ ಎನ್ನಲಾಗಿದ್ದು, ಕಡ್ಡಾಯ ಬಿಲ್ಲಿಂಗ್ ಪ್ರೋಟೋಕಾಲ್‌ನ್ನು ಅನುಸರಿಸಿದ ಸಂದರ್ಭ ದೂರುದಾರರಿಗೆ ಆದ ಅನನುಕೂಲತೆಗೆ ವಿಷಾದಿಸುತ್ತೇವೆ ಎಂದು ಐಕಿಯಾ ಹೇಳಿದೆ.
ಐಕಿಯಾ ಸ್ಟೋರ್‌ನಲ್ಲಿ ಜನಾಂಗೀಯ ನಿಂದನೆ ಎದುರಿಸಿದ್ದೇನೆ ಎಂದು ಪತ್ರಕರ್ತ ನಿತಿನ್ ಸೇಥಿ ಆರೋಪಿಸಿದ ನಂತರ ಐಕಿಯಾ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಹೈದರಾಬಾದ್‌ನಲ್ಲಿರುವ ಐಕಿಯಾ ಸ್ಟೋರ್‌ನಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದ್ದು, ಮಣಿಪುರದ ನನ್ನ ಹೆಂಡತಿ ಖರೀದಿಸಿದ ಸರಕುಗಳನ್ನು ಮಾತ್ರ ಪರೀಕ್ಷಿಸಲಾಯಿತು. ನಮ್ಮ ಮುಂದೆ ಬೇರೆ ಯಾರೂ ಇರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಎಲ್ಲಾ ಮೇಲ್ವಿಚಾರಣಾ ಸಿಬ್ಬಂದಿ ವರ್ಣಭೇದ ನೀತಿ ಮುಂದುವರಿಸಲು ಬಂದರು. ನಮಗೆ ಐಕಿಯಾ ಅಂತಾರಾಷ್ಟ್ರೀಯ ಅಂಗಡಿಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ನಿತಿನ್ ಸೇಥಿ ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಐಕಿಯಾ ವಿರುದ್ಧ ತೆಲಂಗಾಣ ಸಚಿವ ಕೆಟಿ ರಾಮರಾವ್ ಸಹ ಟೀಕಿಸಿದ್ದಾರೆ. ಈ ಘಟನೆ ಭಯಾನಕ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಐಕಿಯಾ. ದಯವಿಟ್ಟು ಸರಿಯಾದ ಕ್ಷಮೆಯಾಚನೆಯನ್ನು ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಮುಖ್ಯವಾಗಿ ನಿಮ್ಮ ಎಲ್ಲಾ ಗ್ರಾಹಕರನ್ನು ಗೌರವಯುತವಾಗಿ ನಡೆಸಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಶಿಕ್ಷಣ, ಸಂವೇದನಾಶೀಲ ಮತ್ತು ತರಬೇತಿ ನೀಡಿ, ನೀವು ಆದಷ್ಟು ಬೇಗ ತಿದ್ದುಪಡಿಗಳನ್ನು ಮಾಡುತ್ತೀರಿ ಎಂದು ಭಾವಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಾನು ಮಾತ್ರ ಖರೀದಿಸಿದ ವಸ್ತುಗಳ ತನಿಖೆ
ನಿತಿನ್ ಸೇಥಿ ಅವರು ತಮ್ಮ ದೂರಿನೊಂದಿಗೆ ಅಂಗಡಿಯ ಸಿಬ್ಬಂದಿ ಸಂಪರ್ಕಿಸಿದಾಗ, ನೀವು ಬಯಸಿದರೆ ಪೊಲೀಸರಿಗೆ ಕರೆ ಮಾಡಿ, ನಾವು ವ್ಯವಹರಿಸುತ್ತೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇಂದು ಐಕಿಯಾ ಹೈದರಾಬಾದ್‌ನಲ್ಲಿ ವಸ್ತುಗಳನ್ನು ಖರೀದಿಸಿದ ಅನೇಕರಲ್ಲಿ ನಾನು ಒಬ್ಬನಾಗಿದ್ದೆ. ಆದರೆ ನಾನು ಮಾತ್ರ ಖರೀದಿಸಿದ ವಸ್ತುಗಳನ್ನು ಒಂದೊಂದಾಗಿ ಪರಿಶೀಲಿಸಲಾಗಿದೆ. ಇದು ವರ್ಣಭೇದ ನೀತಿಯಲ್ಲದಿದ್ದರೆ ಮತ್ತೇನು? ನಮಗೆ ಅಲ್ಲಿನ ಹಿರಿಯ ಸಿಬ್ಬಂದಿ ಸಹಾಯ ಮಾಡಲಿಲ್ಲ. ಐಕಿಯಾ ಅಂತಹ ನಡವಳಿಕೆಯನ್ನು ಅನುಮೋದಿಸುತ್ತದೆಯೇ?," ಎಂದು ನಿತಿನ್ ಅವರ ಪತ್ನಿ ಅಕೋಯಿಜಮ್ ಸುನಿತಾ ಟ್ವೀಟ್ ಮಾಡಿದ್ದಾರೆ.

ಅಂತಿಮ ಪರಿಶೀಲನೆಗಾಗಿ ವಿನಂತಿಸಲಾಗುತ್ತದೆ
ಅವರ ಟ್ವೀಟ್‌ಗಳು ಐಕಿಯಾ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತಿದ್ದಂತೆ ಕಂಪೆನಿಯು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ ತಾವು ವರ್ಣಭೇದ ನೀತಿ ಮತ್ತು ಪೂರ್ವಾಗ್ರಹವನ್ನು ಖಂಡಿಸುವುದಾಗಿ ಹೇಳಿದರು. ಬಿಲ್ಲಿಂಗ್ ಸರಿಯಾಗಿದೆಯೇ ಮತ್ತು ಗ್ರಾಹಕರು ಡಬಲ್ ಚಾರ್ಜಿಂಗ್, ಉತ್ಪನ್ನಗಳ ಪುನರಾವರ್ತಿತ ಸ್ಕ್ಯಾನಿಂಗ್ ಇತ್ಯಾದಿಗಳ ಬಗ್ಗೆ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸ್ವಯಂ-ಚೆಕ್‌ಔಟ್ ಮಾಡುವ ಗ್ರಾಹಕರು ಅಂಗಡಿಯಿಂದ ಹೊರಡುವ ಮೊದಲು ಅಂತಿಮ ಪರಿಶೀಲನೆಗಾಗಿ ವಿನಂತಿಸಲಾಗುತ್ತದೆ ಎಂದು ಐಕಿಯಾ ಟ್ವೀಟ್ ಮಾಡಿದೆ.

ಪೊಲೀಸರೊಂದಿಗೆ ದೂರು ನೀಡಲು ಹೇಳಿದರು
ಟ್ವಿಟ್‌ನಲ್ಲಿ ಐಕಿಯಾಗೆ ಪ್ರತಿಕ್ರಿಯಿಸಿದ ನಿತಿನ್ ಸೇಥಿ ಐಕಿಯಾ ಕಂಪೆನಿ ಸಿಬ್ಬಂದಿ ತನ್ನ ಖರೀದಿಗಳಿಗಾಗಿ ತಮ್ಮ ಹೆಂಡತಿಯನ್ನು ಮಾತ್ರ ಪರೀಕ್ಷಿಸಲು ಪ್ರತ್ಯೇಕಿಸಿದರು. ಖರೀದಿಯ ವೇಳೆ ಜನಾಂಗೀಯ ನಿಂದನೆ ಮಾಡಿ ನಂತರ ಅದರ ಮೇಲ್ವಿಚಾರಕರು, ಭದ್ರತಾ ಅಧಿಕಾರಿಗಳು ನಮ್ಮನ್ನು ದೂರುಗಳಿದ್ದರೆ ಪೊಲೀಸರೊಂದಿಗೆ ದೂರು ನೀಡಲು ಹೇಳಿದರು.

ಜನಾಂಗೀಯ ನಿಂದನೆ ಪರಿಚಯವಾಯಿತು
ಇದರಿಂದ ನಮ್ಮ ಐಕಿಯಾ ಮೇಲಿನ ವಿಶ್ವಾಸಾರ್ಹತೆ ಕುಂದಿತು ಹಾಗೂ ಜನಾಂಗೀಯ ನಿಂದನೆ ಪರಿಚಯವಾಯಿತು. ಕೇವಲ ಪರಿಶೀಲನೆಯ ವಿಷಯವಾಗಿದ್ದರೆ ನಾನು ಈ ವಿಷಯವನ್ನು ದೊಡ್ಡದು ಮಾಡುತ್ತಿರಲಿಲ್ಲ. ಸರಿಯಾಗಿ ಓದದೆ ಪ್ರತಿಕ್ರಿಯಿಸುವುದನ್ನು ದಯವಿಟ್ಟು ತಡೆಯಿರಿ. ನಿಮ್ಮ ಕಂಪನಿಯು ಹೆಚ್ಚು ಬೇಜವಾಬ್ದಾರಿ ಮತ್ತು ಸಂವೇದನಾರಹಿತವಾಗಿ ಕಾಣುವಂತೆ ಮಾಡುತ್ತದೆ ಎಂದು ನಿತಿನ್ ಪತ್ನಿ ಸುನೀತಾ ಹೇಳಿದರು.












Click it and Unblock the Notifications