ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.28ರಂದು ಹೈದರಾಬಾದ್ ಮೆಟ್ರೋಗೆ ಮೋದಿಯಿಂದ ಚಾಲನೆ

By Mahesh
|
Google Oneindia Kannada News

ಹೈದರಾಬಾದ್, ನವೆಂಬರ್ 27: ಮುತ್ತಿನ ನಗರಿಯ ಬಹುನಿರೀಕ್ಷಿತ ಮೆಟ್ರೋ ರೈಲು ಸಂಚಾರಕ್ಕೆ ಮಂಗಳವಾರ(ನವೆಂಬರ್ 28)ದಂದು ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ನವೆಂಬರ್ 29 ರಿಂದ ವಾಣಿಜ್ಯ ಸಂಚಾರ ಆರಂಭಿಸಲಿದೆ.

ಗ್ಯಾಲರಿ: ಹೈದರಾಬಾದ್ ಮೆಟ್ರೋ ಅಮೀರ್ ಪೇಟ್ ನಿಲ್ದಾಣ

30 ಕಿ.ಮೀ ಉದ್ದದ ಮೊದಲ ಹಂತದ ಮೆಟ್ರೋ ರೈಲು ಯೋಜನೆ ಮಿಯಾಪುರ್ ನಿಂದ ನಗೋಲೆ ತನಕ ಪೂರ್ಣಗೊಂಡಿದೆ. ಮಾರ್ಗ ಮಧ್ಯದಲ್ಲಿ 24 ನಿಲ್ದಾಣಗಳಿದ್ದು, ಈ ಹೊಸ ಮೆಟ್ರೋ ಮಾರ್ಗವನ್ನು ಮಂಗಳವಾರ ಮಧ್ಯಾಹ್ನ 2.15ರ ವೇಳೆಗೆ ಮಿಯಾಪುರ ನಿಲ್ದಾಣದಲ್ಲಿ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ.

ಚೆನ್ನೈ ಮೆಟ್ರೋ ಟಿಕೆಟ್ ದರ ದೇಶದಲ್ಲೇ ಅಧಿಕ! ಚೆನ್ನೈ ಮೆಟ್ರೋ ಟಿಕೆಟ್ ದರ ದೇಶದಲ್ಲೇ ಅಧಿಕ!

ನಂತರ ಮೆಟ್ರೋರೈಲಿನಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರರಾವ್ ಅವರೊಂದಿಗೆ ಮೋದಿ ಅವರು ಮಿಯಾಪುರ್ ನಿಂದ ಕುಕುಟ್ಪಲ್ಲಿ ತನಕ ಸಂಚರಿಸಲಿದ್ದಾರೆ.

ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು.... ಮೆಟ್ರೋ ರೈಲು ಎಂಬ ಅದ್ಭುತ ಜಗತ್ತು, ಅಪರಿಚಿತ ಮುಖಗಳು....

ಮಿಯಾಪುರ್- ನಗೋಲೆ ತನಕ ಸುಮಾರು 546 ಸೆಕ್ಯುರಿಟಿ ಸಿಬ್ಬಂದಿಗಳು ಮೆಟ್ರೊ ಪ್ರಯಾಣಿಕರ ಸುರಕ್ಷತೆಗಾಗಿ ಸದಾ ಕರ್ತವ್ಯ ನಿರ್ವಹಿಸಲಿದ್ದಾರೆ. 2012ರಲ್ಲಿ ಆರಂಭವಾದ ಹೈದರಾಬಾದ್ ಮೆಟ್ರೋ ರೈಲು ಯೋಜನೆ 2017ರ ಜುಲೈನಲ್ಲಿ ಪೂರ್ಣಗೊಳ್ಳಬೇಕಾಗಿತ್ತು

ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ! ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ!

ಬೆಳಗ್ಗೆ 6 ರಿಂದ ರಾತ್ರಿ 10 ರ ತನಕ ಪ್ರಾರಂಭಿಕ ಹಂತದಲ್ಲಿ ರೈಲು ಸಂಚರಿಸಲಿದೆ. ಸಂಚಾರ ದಟ್ಟಣೆ ನೋಡಿಕೊಂಡು 5.30 ರಿಂದ 11 ಗಂಟೆ ತನಕ ಅವಧಿ ವಿಸ್ತರಿಸಲಾಗುತ್ತದೆ ಎಂದು ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ ರಾಮರಾವ್ ತಿಳಿಸಿದರು.

'ರಾಜ್ಯ ಪಕ್ಷಿ' ಹಂಚಿಕೊಂಡ ಕರ್ನಾಟಕ, ತೆಲಂಗಾಣ 'ರಾಜ್ಯ ಪಕ್ಷಿ' ಹಂಚಿಕೊಂಡ ಕರ್ನಾಟಕ, ತೆಲಂಗಾಣ

ಎಲ್ ಅಂಡ್ ಟಿ ನಿರ್ಮಿತ ಮೆಟ್ರೋ ರೈಲು

ಎಲ್ ಅಂಡ್ ಟಿ ನಿರ್ಮಿತ ಮೆಟ್ರೋ ರೈಲು

* ಎಲ್ ಅಂಡ್ ಟಿ ನಿರ್ಮಿತ ಈ ಮೆಟ್ರೋ ರೈಲಿನ ಪ್ರಯಾಣ ದರ ಕನಿಷ್ಠ 10ರು(2 ಕಿ.ಮೀ ತನಕ) ಹಾಗೂ ಗರಿಷ್ಠ 60 ರು (26 ಕಿ.ಮೀ ತನಕ) ಇದೆ.
* 3 ಕೋಚುಗಳನ್ನು ಹೊಂದಿರುವ ಮೆಟ್ರೋ ರೈಲು 330 ಮಂದಿಯನ್ನು ಪ್ರತಿ ಕೋಚಿನಲ್ಲಿ ಹೊಂದಬಹುದಾಗಿದೆ.

ಮೆಟ್ರೋಗಾಗಿ ಫೀಡರ್ ಬಸ್ ಸೇವೆ

ಮೆಟ್ರೋಗಾಗಿ ಫೀಡರ್ ಬಸ್ ಸೇವೆ

* ಮೆಟ್ರೋ ರೈಲು ಪ್ರಯಾಣಿಕರಿಗಾಗಿ ತೆಲಂಗಾಣ ಸಾರಿಗೆ ಸಂಸ್ಥೆ(ಟಿಎಸ್ ಆರ್ ಟಿಸಿ) ಫೀಡರ್ ಬಸ್ ಸೇವೆಗಳನ್ನು ಆರಂಭಿಸುತ್ತಿದೆ.
* ಮೆಟ್ರೋ ರೈಲು ಪ್ರಯಾಣಿಕರಿಗಾಗಿ ಸ್ಮಾರ್ಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಲಾಗಿದೆ.
* ಟಿ ಸವಾರಿ ಹೆಸರಿನಲ್ಲಿ ಹೊಸ ಮೊಬೈಲ್ ಅಪ್ಲಿಕೇಷನ್ ಹೊರ ತರಲಾಗುತ್ತಿದ್ದು, ಮೆಟ್ರೋ ಪ್ರಯಾಣಿಕರಿಗೆ ಮಾರ್ಗದರ್ಶಿಯಾಗಲಿದೆ.

ಸ್ಮಾರ್ಟ್ ಕಾರ್ಡ್ ಬೆಲೆ ಎಷ್ಟು?

ಸ್ಮಾರ್ಟ್ ಕಾರ್ಡ್ ಬೆಲೆ ಎಷ್ಟು?

ಸ್ಮಾರ್ಟ್ ಕಾರ್ಡ್ ಬೆಲೆ 200ರು ನಷ್ಟಿದ್ದು, 100 ರು ಆರಂಭಿಕ ಟಾಪ್ ಅಪ್ ಮೊತ್ತವಾಗಿದೆ. 100 ರು ಸೆಕ್ಯುರಿಟಿ ಡಿಪಾಸಿಟ್ ಎಂದು ಪಡೆಯುತ್ತಾರೆ. 2,000 ರು ತನಕ ರಿಚಾರ್ಜ್ ಮಾಡಿಸಿಕೊಳ್ಳಬಹುದು. 365 ದಿನಗಳ ತನಕ ವ್ಯಾಲಿಡಿಟಿ ಇರುತ್ತದೆ.

ಮೆಟ್ರೋ ದರ

ಮೆಟ್ರೋ ದರ

ಕನಿಷ್ಟ 10 ರು (2 ಕಿ.ಮೀ)
15 ರು (2 ರಿಂದ 4 ಕಿ.ಮೀ)
25 ರು (4 ರಿಂದ 6 ಕಿ.ಮೀ)
30 ರು (6 ರಿಂದ 8 ಕಿ.ಮೀ)
40 ರು (10 ರಿಂದ 14 ಕಿ.ಮೀ)
45 ರು (14 ರಿಂದ 18 ಕಿ.ಮೀ)
50 ರು (18 ರಿಂದ 22 ಕಿ.ಮೀ)
55 ರು (22 ರಿಂದ 26 ಕಿ.ಮೀ)
60 ರು (26 ಕಿ.ಮೀ ಗಿಂತ ಅಧಿಕ)

ಮೆಟ್ರೋ ದರ ದುಬಾರಿ

ಮೆಟ್ರೋ ದರ ದುಬಾರಿ

ಎಂಎಂಟಿಎಸ್ ಟ್ರೈನ್, ಆರ್ ಟಿಸಿ ಬಸ್ ಹಾಗೂ ಷೇರ್ಡ್ ಕ್ಯಾಬ್ ಗಳಿಗೆ ಹೋಲಿಸಿದರೆ ಮೆಟ್ರೋ ರೈಲಿನ ದರ ದುಬಾರಿ ಎನಿಸುತ್ತದೆ. ವಿದ್ಯಾರ್ಥಿಗಳು, ಉದ್ಯಮಿಗಳು, ನಿತ್ಯ ಕಚೇರಿಗೆ ಓಡಾಡುವವರು ಮೆಟ್ರೋ ಬಳಸಬಹುದಾಗಿದೆ.

ವಿದ್ಯಾರ್ಥಿಗಳು ಹೆಚ್ಚು ಬಳಸುವ ಷೇರ್ ಕ್ಯಾಬ್ ಗರಿಷ್ಠ ದರ 50ರು ನಷ್ಟಿದೆ. ಕನಿಷ್ಟ ದರ ಹೋಲಿಸಿದರೆ ಆರ್ ಟಿಸಿ 2 ರು, ಮೆಟ್ರೋ ಬಸ್ 4 ರು, ಮೆಟ್ರೊ ಲೈನರ್ 5, ಸಾಮಾನ್ಯ ಬಸ್ 8 ರು, ಮೆಟ್ರೋ ಲೈನರ್ ಗರಿಷ್ಟ 15 ರು ಮಾತ್ರ.

English summary
The much-awaited Hyderabad Metro Rail will be inaugurated by Prime Minister Narendra Modi on November 28 and start commercial operations from November 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X