ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಬೇಕು: ಬಿಜೆಪಿ ಶಾಸಕ
ಹೈದರಾಬಾದ್, ಜುಲೈ 31: "ಈ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯ ಅಕ್ರಮ ವಲಸಿಗರು ಭಾರತವನ್ನು ಗೌರವದಿಂದ ಬಿಟ್ಟರೆ ಸರಿ, ಇಲ್ಲವೆಂದರೆ ಅವರನ್ನು ಗುಂಡಿಕ್ಕಿ ಕೊಲ್ಲಬೇಕು" ಎಂಬ ವಿವಾದಾತ್ಮಕ ಹೇಳಿಕೆಯನ್ನು ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ನೀಡಿದ್ದಾರೆ.
ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ(NRC)ಯ ಎರಡನೇ ಮತ್ತು ಅಂತಿಮ ಕರಡು ಪ್ರತಿಯಲ್ಲಿ 40 ಲಕ್ಷ ಜನರ ಹೆಸರು ನೋಂದಾವಣೆಯಾಗಿಲ್ಲ ಎಂಬುದು ನಿನ್ನೆ ತಿಳಿದುಬಂದಿದೆ. ಹೆಸರು ಸೇರಿಸಲು ಆಗಸ್ಟ್ 28 ರಿಂದ ಸೆಪ್ಟೆಂಬರ್ 28 ರವರೆಗೆ ಒಂದು ತಿಂಗಳ ಕಾಲ ಅವಕಾಶ ನೀಡಲಾಗಿದೆ.
ಅಸ್ಸಾಂ : ಆತಂಕದಲ್ಲಿದ್ದ 40 ಲಕ್ಷ ಜನಕ್ಕೆ ರಾಜನಾಥ್ ಅಭಯ
ಅಕ್ರಮ ವಲಸಿಗರನ್ನು ಪತ್ತೆ ಮಾಡಿ, ದೇಶದ ಭದ್ರತೆಗೆ ಪ್ರಾಶಸ್ತ್ಯ ನೀಡುವ ಸಲುವಾಗಿಯೇ ಈ ಪಟ್ಟಿಯನ್ನು ತಯಾರಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜಾ ಸಿಂಗ್, "ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿಯ ಅಕ್ರಮ ವಲಸಿಗರು ಭಾರತವನ್ನು ಗೌರವದಿಂದ ಬಿಟ್ಟರೆ ಸರಿ, ಇಲ್ಲವೆಂದರೆ ಅವರನ್ನು ಗುಂಡಿಕ್ಕಿ ಕೊಲ್ಲಬೇಕು. ಆಗ ಮಾಗತ್ರವೇ ನಮ್ಮ ದೇಶ ಸುರಕ್ಷಿತವಾಗಿರುತ್ತದೆ" ಎಂದು ರಾಜಾ ಸಿಂಗ್ ಹೇಳಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !