• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಸೂದ್ ಅಝರ್ ಮೌಲಾನಾ ಅಲ್ಲ, ಮಾನವೀಯತೆಯ ಕೊಲೆಗಾರ: ಓವೈಸಿ

|

ಹೈದರಾಬಾದ್, ಮಾರ್ಚ್ 02: 'ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್, ಮೌಲಾನಾ ಅಲ್ಲ, ಅವನೊಬ್ಬ ಮಾನವೀಯತೆಯ ಕೊಲೆಗಾರ' ಎಂದು ಸಂಸದ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.

ಹೈದರಾಬಾದ್ ಲೋಕಸಭಾ ಕ್ಷೇತ್ರದ ಸದಸ್ಯ, ಎಐಎಂಐಎಂ ಮುಖ್ಯಸ್ಥ ಓವೈಸಿ, 'ಭಾರತದ ವಿರುದ್ಧ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಮುಸ್ಲಿಂ ಮತ್ತು ನ್ಯೂಕ್ಲಿಯರ್ ಕಾರ್ಡ್ ಗಳನ್ನು ಬಳಸುತ್ತಿದ್ದಾರೆ. ಇದು ಸರಿಯಲ್ಲ' ಎಂದಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ 2: ನಾವು ಭಾರತ ಸರ್ಕಾರದ ಜೊತೆಗಿದ್ದೇವೆ ಎಂದ ಓವೈಸಿ

'ನಮ್ಮಲ್ಲಿ ಆಟಂ ಬಾಂಬ್ ಇದೆ ಎಂಬೆಲ್ಲ ಬಾಲಿಶ ಹೇಳಿಕೆಗಳನ್ನು ಇಮ್ರಾನ್ ಖಾನ್ ಸಂಸತ್ತಿನಲ್ಲಿ ನೀಡುತ್ತಾರೆ? ನಮ್ಮ ಬಳಿ ಅದಿಲ್ಲವೇ? ನಮ್ಮ ದೇಶದ ಮುಸ್ಲಿಮರಿಗೂ ನಿಮ್ಮ ಬಗ್ಗೆ ಗೊತ್ತು. ಮೊದಲು ನಿಮ್ಮಲ್ಲಿರುವ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತೊಯಿಬಾ ಮತ್ತು ಜೈಷ್ ಇ ಮೊಹಮ್ಮದ್ ಗಳನ್ನು ನಾಶ ಮಾಡಿ. ನಂತರ ಭಾರತದ ಬಗ್ಗೆ ಮಾತನಾಡಿ' ಎಂದು ಓವೈಸಿ ಹೇಳಿದ್ದಾರೆ.

ಮೋದಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ಸಿಗಿಲ್ಲ: ಓವೈಸಿ ಅಚ್ಚರಿಯ ಹೇಳಿಕೆ

"ಜೈಷ್ ಮುಖ್ಯಸ್ಥ ಮಸೂದ್ ಅಝರ್ ಮೌಲಾನಾ ಅಲ್ಲ, ಆತ ರಾಕ್ಷಸರ ನಾಯಿ ಮತ್ತು ಮಾನವೀಯತೆಯ ಕೊಲೆಗಾರ" ಎಂದು ಕಟು ಪದಗಳಿಂದ ಅವರು ಟೀಕಿಸಿದರು.

English summary
AIMIM chief Asaduddin Owaisi on Saturday hit out at Pakistan Prime Minister Imran Khan for playing the nuclear and Muslim cards against India and denounced Jaish-e-Mohammad (JeM) and Lashkar-e-Taiba (LeT) terror outfits, describing these as “demon” outfits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X