Get Updates
Get notified of breaking news, exclusive insights, and must-see stories!

ಬೆಂಗಳೂರಿನ ಹೃದಯಕ್ಕೆ ಹೈದರಾಬಾದ್‌ನಲ್ಲಿ ಹೊಸ ಜೀವ

ಹೈದರಾಬಾದ್, ಫೆ. 28 : ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ತಂದಿದ್ದ ಜೀವಂತ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರೀಯವಾಗಿದ್ದ ಯುವಕನ ಜೀವಂತ ಹೃದಯವನ್ನು ಪೋಷಕರು ದಾನ ಮಾಡಿದ್ದರು.

ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಜೀವಂತ ಹೃದಯವನ್ನು ಬೇಗಂಪೇಟ್‌ ಏರ್‌ಪೋರ್ಟ್‌ಗೆ ತೆಗೆದುಕೊಂಡು ಹೋಗಲಾಯಿತು. ವಿಮಾನ ನಿಲ್ದಾಣದಿಂದ ಕೇವಲ 2 ನಿಮಿಷದಲ್ಲಿ ಹೃದಯ ಆಸ್ಪತ್ರೆಗೆ ತಲುಪಿತು. [ಬೆಂಗಳೂರು : ಮತ್ತೊಂದು ಜೀವಂತ ಹೃದಯ ಸಾಗಣೆ]

ಹೈದರಾಬಾದ್‌ನ ಯಶೋಧಾ ಆಸ್ಪತ್ರೆಯಲ್ಲಿ ಜೀವಂತ ಹೃದಯವನ್ನು ಕಸಿ ಮಾಡುವ ಶಸ್ತ್ರ ಚಿಕಿತ್ಸೆ ಸುಮಾರು 5 ಗಂಟೆಗಳ ಕಾಲ ನಡೆದಿದ್ದು, ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. 30 ವರ್ಷದ ಯುವಕನ ಹೃದಯವನ್ನು ಮಹಿಳೆಗೆ ಅಳವಡಿಸಲಾಗಿದೆ.

ಜೀವಂತ ಹೃದಯ ಸಾಗಣೆ ಪ್ರಯತ್ನ ಬೆಂಗಳೂರಿನಲ್ಲಿ ಇದೇ ಮೊದಲಲ್ಲ. ಬೆಂಗಳೂರಿನಿಂದ 2014ರಲ್ಲಿ ಎರಡು ಬಾರಿ ಚೆನ್ನೈಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.

ಹೈದರಾಬಾದ್‌ನಲ್ಲಿ ಹೃದಯಕ್ಕೆ ಮರು ಜೀವ

ಹೈದರಾಬಾದ್‌ನಲ್ಲಿ ಹೃದಯಕ್ಕೆ ಮರು ಜೀವ

ಬೆಂಗಳೂರಿನಿಂದ ಹೊರಟಿದ್ದ ಜೀವಂತ ಹೃದಯ ಹೈದರಾಬಾದ್ ತಲುಪಿದ್ದು ಸುಮಾರು 5 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ತರಲಾಗಿತ್ತು.

ಹೈದರಾಬಾದ್‌ ತಲುಪಿದ ಹೃದಯ

ಹೈದರಾಬಾದ್‌ ತಲುಪಿದ ಹೃದಯ

ಶನಿವಾರ ಬೆಳಗ್ಗೆ 11.40ಕ್ಕೆ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌ನಿಂದ ವಿಶೇಷ ವಿಮಾನದಲ್ಲಿ ಹೊರಟ ಜೀವಂತ ಹೃದಯ ಬೇಗಂಪೋರ್ಟ್‌ ಏರ್‌ಪೋರ್ಟ್ಅನ್ನು ತಲುಪಿತು.

2 ನಿಮಿಷದಲ್ಲಿ ಆಸ್ಪತ್ರೆ ತಲುಪಿದ ಹೃದಯ

2 ನಿಮಿಷದಲ್ಲಿ ಆಸ್ಪತ್ರೆ ತಲುಪಿದ ಹೃದಯ

ಬೇಗಂಪೋರ್ಟ್‌ ಏರ್‌ಪೋರ್ಟ್‌ನಿಂದ ಕೇವಲ 2 ನಿಮಿಷ 48 ಸೆಕೆಂಡ್‌ಗಳಲ್ಲಿ ಜೀವಂತ ಹೃದಯವನ್ನು ಹೊತ್ತ ಆಂಬ್ಯುಲೆನ್ಸ್‌ ಯಶೋಧಾ ಆಸ್ಪತ್ರೆ ತಲುಪಿತು. ಅಲ್ಲಿ ಸುಮಾರು 5 ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ ಹೃದಯದ ಕಸಿ ಮಾಡಲಾಗಿದೆ.

ಯುವಕನ ಹೃದಯ ಯುವತಿಗೆ ಆಳವಡಿಕೆ

ಯುವಕನ ಹೃದಯ ಯುವತಿಗೆ ಆಳವಡಿಕೆ

ಬೆಂಗಳೂರಿನಲ್ಲಿ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯವಾಗಿದ್ದ 30 ವರ್ಷದ ಯುವಕನ ಹೃದಯವನ್ನು 30 ವರ್ಷದ ಮಹಿಳೆಗೆ ಯಶೋಧಾ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ

ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಶುಕ್ರವಾರ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಕಲಬುರಗಿ ಮೂಲದ ಪಂಡಿತ್ ಶಿವರಾಯ್ ಭಾಗಿ (30) ಅವರ ಮೆದುಳು ನಿಷ್ಕ್ರೀಯಗೊಂಡ ಹಿನ್ನಲೆಯಲ್ಲಿ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿಗೆ ನೀಡಿದ್ದರು.

ಗ್ರೀನ್ ಕಾರಿಡಾರ್ ಮೂಲಕ ರವಾನೆ

ಗ್ರೀನ್ ಕಾರಿಡಾರ್ ಮೂಲಕ ರವಾನೆ

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಜೀವಂತ ಹೃದಯ ಸಾಗಣೆಗೆ ಬೆಂಗಳೂರು ಸಂಚಾರಿ ಪೊಲೀಸರ ನೆರವು ಕೇಳಿದ್ದರು ಅವರು ಆಂಬ್ಯುಲೆನ್ಸ್ ಸಾಗಲು ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದರು. ಹೈದರಾಬಾದ್‌ನಲ್ಲಿಯೂ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.

ಕಣ್ಣು, ಕಿಡ್ನಿಯೂ ದಾನ

ಕಣ್ಣು, ಕಿಡ್ನಿಯೂ ದಾನ

ಜೀವಂತ ಹೃದಯವನ್ನು ದಾನ ಮಾಡಲು ಒಪ್ಪಿಗೆ ನೀಡಿದ ಯುವಕನ ಕುಟುಂಬದವರು ಕಣ್ಣು, ಕಿಡ್ನಿಯನ್ನು ಸಹ ದಾನ ಮಾಡಿದ್ದಾರೆ. ಇವುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯವಿದ್ದ ಜನರಿಗೆ ಅಳವಡಿಸಲಾಗಿದೆ.

ಇದೇ ಮೊದಲ ಪ್ರಯತ್ನವಲ್ಲ

ಇದೇ ಮೊದಲ ಪ್ರಯತ್ನವಲ್ಲ

ಜೀವಂತ ಹೃದಯ ಸಾಗಣೆ ಪ್ರಯತ್ನ ಬೆಂಗಳೂರಿನಲ್ಲಿ ಇದೇ ಮೊದಲಲ್ಲ. ಬೆಂಗಳೂರಿನಿಂದ 2014ರಲ್ಲಿ ಎರಡು ಬಾರಿ ಚೆನ್ನೈಗೆ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. 2015ರ ಜನವರಿಯಲ್ಲಿ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಬಿಜಿಎಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+