ಕುತೂಹಲ ಕೆರಳಿಸಿದ ಪ್ರಕಾಶ್ ರಾಜ್ - ಕೆಟಿಆರ್ ಭೇಟಿ

Recommended Video

      ಟಿ ಆರ್ ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ರನ್ನ ಭೇಟಿ ಮಾಡಿದ ಪ್ರಕಾಶ್ ರಾಜ್ ( ರೈ ) | Oneindia Kannada

      ಹೈದರಾಬಾದ್, ಜನವರಿ 03: ಇತ್ತೀಚೆಗಷ್ಟೇ ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಟ್ವಿಟ್ಟರ್ ಮೂಲಕ ಘೋಷಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಹೈದರಾಬಾದಿನಲ್ಲಿ ಬುಧವಾರ ಟಿಆರ್ ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಅವರನ್ನು ಭೇಟಿಯಾದರು.

      ಹೀಗೆ ಇಬ್ಬರು ದಿಗ್ಗಜರು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸಂಯುಕ್ತ ಒಕ್ಕೂಟ ರಚಿಸಲು ಹೊರಟ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಒಂದೆಡೆಯಾದರೆ, ಅವರ ಪುತ್ರ ಕೆಟಿಆರ್ ಅವರನ್ನು ಬಿಜೆಪಿಯ ಬದ್ಧ ವೈರಿ ಪ್ರಕಾಶ್ ರೈ ಅವರು ಭೇಟಿಯಾಗಿದ್ದು ಮತ್ತಷ್ಟು ಗೊಂದಲ ಮೂಡಿಸಿದೆ.

      ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಾಶ್ ರೈ ಈಗಾಗಲೇ ಖಚಿತಪಡಿಸಿದ್ದಾರೆ. ಆದರೆ ಕ್ಷೇತ್ರ ಯಾವುದು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಪ್ರಕಾಶ್ ರೈ ಅವರು ಟಿಆರ್ ಎಸ್ ಜೊತೆ ಸೇರಿ ಲೋಕಸಭಾ ಚುನಾವಣೆ ಎದುರಿಸುತ್ತಾರಾ? ಹಾಗೊಂದು ಅನುಮಾನವನ್ನು ಈ ನಾಯಕರ ಭೇಟಿ ಹುಟ್ಟುಹಾಕಿದೆ.

      Array

      ಕೆಟಿಆರ್ ಅವರಿಗೆ ಧನ್ಯವಾದ

      ಇಬ್ಬರ ಭೇಟಿಯ ನಂತರ ಟ್ವೀಟ್ ಮಾಡಿದ ಪ್ರಕಾಶ್ ರೈ, "ನನ್ನ ರಾಜಕೀಯ ಪಯಣಕ್ಕೆ ಸ್ಫೂರ್ತಿದಾಯಕ ಬೆಂಬಲ ನೀಡುತ್ತಿರುವ ಟಿಆರ್ ಎಸ್ ನ ಕೆ ಟಿ ರಾಮರಾವ್ ಅವರಿಗೆ ಧನ್ಯವಾದಗಳು. ಈ ಹೊಸ ಆರಂಭ ಯಾರೋ ಒಬ್ಬರ ವಿರುದ್ಧವಲ್ಲ, ಇದು ಸಮಾಜದ ಪರವಾಗಿ" ಎಂದಿದ್ದಾರೆ.

      ಶುಭಾಶಯ ಕೋರಿದ ಕೆಟಿಆರ್

      ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಕೆಟಿ ಆರ್, "ಸಾರ್ವಜನಿಕ ಬದುಕಿಗೆ ಪ್ರವೇಶಿಸುವ ನಿಮ್ಮ ನಿರ್ಧಾರಕ್ಕೆ ಅಭಿನಂದನೆಗಳು ಪ್ರಕಾಶ್ ರಾಜ್. ನಿಮ್ಮ ಪಯಣ ಧನಾತ್ಮಕ ಬದಲಾವಣೆಯನ್ನು ತರಲಿ. ನಿಮಗೆ ನನ್ನ ಶುಭಾಶಯ" ಎಂದು ಟ್ವೀಟ್ ಮಾಡಿದ್ದಾರೆ.

      ಚುನಾವಣೆಗೆ ಸ್ಪರ್ಧೆ

      ಹೊಸ ವರ್ಷದಂದು ಶುಭಾಶಯ ಕೋರಿದ್ದ ಪ್ರಕಾಶ್ ರಾಜ್, 'ತಾವು 2019 ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಸಮಾಜದ ಹಿತಕ್ಕಾಗಿ ನಾನು ರಾಜಕೀಯಕ್ಕಿಳಿಯುತ್ತೇನೆ. ಯಾವ ಕ್ಷೇತ್ರವೆಂಬುದನ್ನೂ ಸದ್ಯದಲ್ಲೇ ಹೇಳುತ್ತೇನೆ' ಎಂದು ಟ್ವೀಟ್ ಮಾಡಿದ್ದರು.

      ರಾಜಕೀಯ ವಲಯದಲ್ಲಿ ತಲ್ಲಣ

      ರಾಜಕೀಯ ವಲಯದಲ್ಲಿ ತಲ್ಲಣ

      ಟಿಆರ್ ಎಸ್ ಮುಖಂಡ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್ ಅವರು ಪ್ರಕಾಶ್ ರಾಜ್ ಅವರೊಂದಿಗೆ ಕಾಣಿಸಿಕೊಂಡಿದ್ದು ರಾಜಕೀಯ ವಲಯದಲ್ಲಿ ಕೊಂಚ ತಲ್ಲಣ ಮೂಡಿಸಿದೆ. ಅತ್ತ ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಹೊರಗಿಟ್ಟು ಸಂಯುಕ್ತ ಕೂಟ ರಚಿಸಲು ತಂದೆ ಕೆಸಿಆರ್ ಮುಂದಾಗಿದ್ದಾರೆ. ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿ ಗೊಂದಲ ಮೂಡಿಸಿದ್ದಾರೆ. ಇದರೊಟ್ಟಿಗೆ ಮೋದಿಯವರ ಬದ್ಧ ವೈರಿ ಪ್ರಕಾಶ್ ರಾಜ್, ಅವರ ಪುತ್ರ ಕೆಟಿಆರ್ ಅವರನ್ನು ಭೇಟಿಯಾಗಿದ್ದು ಅಚ್ಚರಿ ಮೂಡಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+